Thursday, September 19, 2024
Google search engine
Homeಮುಖಪುಟತಾಲಿಬಾನ್ - ಕೆಲಸಕ್ಕೆ ನಿರ್ಬಂಧ ವಿರೋಧಿಸಿ ಶಿಕ್ಷಕಿಯರು ವಿದ್ಯಾರ್ಥಿನಿಯರ ಪ್ರತಿಭಟನೆ

ತಾಲಿಬಾನ್ – ಕೆಲಸಕ್ಕೆ ನಿರ್ಬಂಧ ವಿರೋಧಿಸಿ ಶಿಕ್ಷಕಿಯರು ವಿದ್ಯಾರ್ಥಿನಿಯರ ಪ್ರತಿಭಟನೆ

ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಅಸ್ತಿತ್ವಕ್ಕೆ ಬಂದ ಮೇಲೆ ಮಹಿಳೆಯರು ಕೆಲಸಕ್ಕೆ ಹೋಗದಂತೆ ನಿರ್ಬಂಧ ಹೇರಲಾಗಿದೆ. ಇದನ್ನು ಪ್ರತಿಭಟಿಸಿ ಸಾವಿರಾರು ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಬೀದಿಗೆ ಇಳಿದು ಪ್ರತಿಭಟನೆ ನಡೆಸಿದ್ದಾರೆ.

ಸರ್ಕಾರಿ ಕೆಲಸಗಳಿಗೆ ಮಹಿಳೆಯರಿಗೆ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಸಾವಿರಾರು ಶಿಕ್ಷಕರಿಯರು ಮತ್ತು ವಿದ್ಯಾರ್ಥಿನಿಯರು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹಿರಿಯ ಮಹಿಳಾ ಅಧಿಕಾರಿಯನ್ನು ಕೆಲಸದಿಂದ ವಜಾ ಮಾಡಿದೆ. ಇದನ್ನು ಪ್ರತಿಭಟಿಸಿರುವ ಆ ಮಹಿಳಾ ಅಧಿಕಾರಿ ನಾನು ಸಾವನ್ನಪ್ಪಬಹುದು. ಆದರೆ ನಾನು ಇಡೀ ಇಲಾಖೆಯ ಉಸ್ತುವಾರಿ ಇದ್ದೇನೆ ಎಂದು ಅಧಿಕಾರಿ ಹೇಳಿಕೆ ಉಲ್ಲೇಖಿಸಿ ಎಎಫ್.ಪಿ ವರದಿ ಮಾಡಿದೆ.

ತಾಲಿಬಾನ್ ಆಡಳಿತದ ಈ ನಿಯಮವನ್ನು ಉಲ್ಲಂಘಿಸಿ ಕೆಲ ಮಹಿಳೆಯರು ಕೆಲಸಕ್ಕೆ ಹಾಜರಾಗಿದ್ದರೂ ಬಹುತೇಕ ಮಹಿಳಾ ಅಧಿಕಾರಿಗಳು ಮತ್ತು ನೌಕರರು ಭೀತಿಗೆ ಒಳಗಾಗಿದ್ದಾರೆ.

ಹಿಂದಿನ ಸರ್ಕಾರದಲ್ಲಿ ಅಸ್ತಿತ್ವದಲ್ಲಿದ್ದ ಮಹಿಳಾ ವ್ಯವಹಾರಗಳ ಸಚಿವಾಲಯವನ್ನು ರದ್ದುಪಡಿಸಿ ಮುಚ್ಚಲಾಗಿದೆ. ಹೀಗಾಗಿ ಸಾವಿರಾರು ಮಂದಿ ಮಹಿಳೆಯರು ಕೆಲಸ ಕೆಳೆದುಕೊಳ್ಳಬೇಕಾಗಿ ಬಂದಿದೆ. ಆಫ್ಘಾನಿಸ್ತಾನದಲ್ಲಿ ಶರಿಯಾ ಕಾನೂನು ಜಾರಿಗೊಳಿಸಿದ ನಂತರ ಮಹಿಳೆಯರ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ.

ಬಹುತೇಕ ಮುನಿಸಿಪಾಲಿಟಿಗಳಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ನೌಕರರ ಸ್ಥಾನಕ್ಕೆ ತಾಲಿಬಾನ್ ಸರ್ಕಾರ ಪುರುಷರನ್ನು ನೇಮಕ ಮಾಡಿದ್ದು, ಮಹಿಳೆಯರು ಕೆಲಸವಿಲ್ಲದೆ ತೊಂದರೆ ಅನುಭವಿಸುವಂತೆ ಆಗಿದೆ ಎಂದು ವರದಿಗಳು ತಿಳಿಸಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular