ಮೈಸೂರು ಜಿಲ್ಲೆಯಲ್ಲಿ ಅಕ್ರಮ ದೇವಾಲಯಗಳ ನೆಲಸಮ ಕಾರ್ಯಾಚರಣೆಯನ್ನು ಖಂಡಿಸಿರುವ ರಾಜ್ಯದ ಹಿಂದೂ ಮಹಾಸಭಾ ಕಾರ್ಯದರ್ಶಿ ಧರ್ಮೇಂದ್ರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಧರ್ಮೇಂದ್ರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಆಡಳಿತಾರೂಢ ಬಿಜೆಪಿ ಹಿಂದೂಗಳ ಬೆನ್ನಿಗೆ ಇರಿಯುತ್ತಿದೆ. ಸಂಘಪರಿವಾರ ನೆಪಮಾತ್ರ ಹೋರಾಟ ಮಾಡುತ್ತಿದೆ ಎಂದು ನಿನ್ನೆ ಮಾಧ್ಯಮಗಳಿಗೆ ತಿಳಿಸಿದ್ದರು.
ಸಂಘಪರಿವಾರ ಪ್ರಾಮಾಣಿಕ ಹೋರಾಟ ನಡೆಸುತ್ತಿಲ್ಲ. ಸರ್ಕಾರ ಮಾಡಿರುವ ಲೋಪವನ್ನು ಮುಚ್ಚಿಕೊಳ್ಳಲು ಸಂಘಪರಿವಾರ ಹೋರಾಟ ಮಾಡುತ್ತಿದೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು ಎಂದು ಹೇಳಿದ್ದಾರೆ.
ಸುಪ್ರೀಂಕೋರ್ಟ್ ಆದೇಶವನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಹಿಂದೂ ದೇವಾಲಯಗಳ ನೆಲಸಮ ಮಾಡುತ್ತಿದೆ. ಅನ್ಯಧರ್ಮೀಯರ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡುತ್ತಿಲ್ಲ. ಇದು ಬೆನ್ನುಮೂಳೆ ಇಲ್ಲದ ಸರ್ಕಾರ ಎಂದು ಟೀಕಿಸಿದ್ದಾರೆ.


