ಪ್ರೀಲ್ಯಾನ್ಸ್ ರಾಜಕಾರಣಿ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಸುಬ್ರಹ್ಮಣ್ಯಸ್ವಾಮಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ನಾನು ಬೂಟು ನೆಕ್ಕುವ ರಾಜಕಾರಣ ಮಾಡಿಲ್ಲ ಎಂದು ಬಸವರಾಜಬೊಮ್ಮಾಯಿ ಅವರಿಗೆ ತಿರುಗೇಟು ನೀಡಿದ್ದಾರೆ.
ನಾನು 6 ಬಾರಿ ಲೋಕಸಭಾ ಸದಸ್ಯನಾಗಿ ಆಯ್ಕೆಯಾಗಿದ್ದೇನೆ. ಎರಡು ಬಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ನಾನು ಬೂಟು ನೆಕ್ಕುವ ರಾಜಕಾರಣ ಮಾಡಿಲ್ಲ. ನಾನೆಂದೂ ಸತ್ಯವನ್ನು ಪ್ರಜಾಪ್ರಭುತ್ವಕ್ಕೆ ತಿಳಿಸುತ್ತೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ನಾನೆಂದೂ ಜನತಾ ದಳದ ಸದಸ್ಯನಾಗಿರಲಿಲ್ಲ. 1989-2013ರವರೆಗೆ ಜನತಾ ಪಕ್ಷದ ಅಧ್ಯಕ್ಷನಾಗಿದ್ದೆ. 2013ರಲ್ಲಿ ಜನತಾ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿದೆ ಎಂದು ಟ್ವಿಟ್ಟರ್ ನಲ್ಲಿ ಹೇಳಿದ್ದಾರೆ.
ಬಸವರಾಜ ಬೊಮ್ಮಾಯಿ ತಂದೆ ನನಗೆ ಪರಿಚಿತರು. ಅವರೊಂದಿಗೆ ಉತ್ತಮ ಒಡನಾಟ ಇತ್ತು ಎಂದು ಸ್ಮರಿಸಿಕೊಂಡಿದ್ದಾರೆ.
ಮೊನ್ನೆ ವಿಧಾನಸಭಾ ಅಧಿವೇಶನದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ‘ಸುಬ್ರಹ್ಮಣ್ಯಸ್ವಾಮಿ ಅವರ ಟ್ವೀಟ್ ಅನ್ನು ಉಲ್ಲೇಖಿಸಿ, ಸೀತೆಯ ನೇಪಾಳದಲ್ಲಿ, ರಾವಣನ ಶ್ರೀಲಂಕಾದಲ್ಲಿ ಪೆಟ್ರೋಲ್ ಬೆಲೆ ಕಡಿಮೆ ಇದೆ. ಆದರೆ ರಾಮನ ಭಾರತದಲ್ಲಿ ಹೆಚ್ಚಾಗಿದೆ. ಇದಕ್ಕೆ ಮುಖ್ಯಮಂತ್ರಿಗಳು ಏನ್ ಹೇಳ್ತೀರ ಎಂದು ಪ್ರಶ್ನಿಸಿದ್ದರು.
ಕೂಡಲೇ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ” ಅವರು ಜನತಾ ದಳದ ಸದಸ್ಯರು, ನನಗೂ ಅವರ ಪರಿಚಯ ಇದೆ. ಅವರು ಯಾವುದೇ ಪಕ್ಷದಲ್ಲಿದ್ದರೂ ಸತ್ಯವನ್ನೇ ಹೇಳುತ್ತಾರೆ. ಅವರೊಬ್ಬ ಪ್ರೀಲ್ಯಾನ್ಸ್ ರಾಜಕಾರಣಿ’ ಮತ್ತು ಜೀನಿಯಸ್ ಎಂದು ಹೇಳಿದ್ದರು.
ಇದರಿಂದ ಕೆರಳಿರುವ ರಾಜ್ಯಸಭಾ ಸದಸ್ಯ ಡಾ.ಸುಬ್ರಹ್ಮಣ್ಯಸ್ವಾಮಿ ಬಸವರಾಜು ಬೊಮ್ಮಾಯಿ ಅವರಿಗೆ ಕಟುಶಬ್ದಗಳಲ್ಲಿ ಮಾತನಾಡಿದ್ದಾರೆ.


