ಬರುವ ನವೆಂಬರ್ 1ರಿಂದ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯವರು ಮದ್ಯದ ಅಂಗಡಿಗಳನ್ನು ತೆರೆಯಲು ತೆಲಂಗಾಣ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಹೈದರಾಬಾದ್ ನ ಪ್ರಗತಿ ಭವನದಲ್ಲಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಗೌಡ, ಪರಿಶಿಷ್ಟರು ಕೂಡ ಮದ್ಯದ ಅಂಗಡಿಗಳನ್ನು ತೆರೆಯುವ ಮೀಸಲಾತಿ ವಿಸ್ತರಣೆ ನಿರ್ಣಯಕ್ಕೆ ಸಮ್ಮತಿಸಿದೆ.
ಮದ್ಯದ ಅಂಗಡಿಗಳನ್ನು ಆರಂಭಿಸಲು ಗೌಡ (ಹಿಂದುಳಿದ ವರ್ಗ) ಸಮುದಾಯಕ್ಕೆ ಶೇ.15ರಷ್ಟು ಮೀಸಲಾತಿ ಕಲ್ಪಿಸಿದ್ದರೆ, ಪರಿಶಿಷ್ಟ ಜಾತಿ ಸಮುದಾಯಕ್ಕೆ ಶೇ.10ರಷ್ಟು ಹಾಗೂ ಪರಿಶಿಷ್ಟ ಪಂಗಡದ ಸಮುದಾಯದವರು ಶೇ.5ರಷ್ಟು ಮದ್ಯದ ಅಂಗಡಿಗಳನ್ನು ಆರಂಭಿಸಲು ಅವಕಾಶ ದೊರೆಕಿಸಿಕೊಡಲಾಗಿದೆ.
ಈಗಾಗಲೇ ತೆಲಂಗಾಣ ಸರ್ಕಾರ ರಾಜ್ಯದಲ್ಲಿ ಹೊಸದಾಗಿ 2216 ಮದ್ಯದ ಅಂಗಡಿಗಳನ್ನು ತೆರೆಲು ಅನುಮತಿ ನೀಡಿದೆ. ಈಗ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿರುವ ಖೋಟಾದಲ್ಲಿ ಈ ಸಮುದಾಯಗಳಿಗೆ 554 ಮದ್ಯದ ಅಂಗಡಿಗಳು ಲಭಿಸುತ್ತವೆ.
ಮದ್ಯದ ಅಂಗಡಿಗಳ ಪರವಾನಿಗೆ ಎರಡು ವರ್ಷಗಳವರೆಗೆ ಅಸ್ತಿತ್ವದಲ್ಲಿರುತ್ತದೆ. ನವೆಂಬರ್ 1 ರಿಂದ ಅಬಕಾರಿ ವರ್ಷ ಆರಂಭವಾಗಲಿದ್ದು ಹೊಸ ಅಬಕಾರಿ ನೀತಿಯಡಿ ಹೊಸದಾಗಿ 200 ಮದ್ಯದ ಅಂಗಡಿಗಳು ತೆರೆಲು ಅವಕಾಸ ಸಿಗಲಿದೆ. ಇದಕ್ಕೂ ಕ್ಯಾಬಿನೆಟ್ ಸಭೆ ಸಮ್ಮತಿ ನೀಡಿದೆ ಎಂದು ಡೆಕ್ಕನ್ ಕ್ರಾನಿಕಲ್ ತಿಳಿಸಿದೆ.


