ಟ್ವಂಟಿ-ಟ್ವಂಟಿ ಕ್ರಿಕೆಟ್ ತಂಡ ನಾಯಕತ್ವ ತೊರೆಯಲು ನಾಯಕ ವಿರಾಟ್ ಕೋಹ್ಲಿ ನಿರ್ಧರಿಸಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ದುಬೈನಲ್ಲಿ ನಡೆಯಲಿರುವ T20 ವಿಶ್ವಕಪ್ ಕ್ರಿಕೆಟ್ ಪಂದ್ಯದ ಬಳಿಕ ನಾಯಕ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ.
ಇದುವರೆಗೂ ನನ್ನ ಸಾಮರ್ಥ್ಯವನ್ನು ಮೀರಿ ಭಾರತೀಯ ಕ್ರಿಕೆಟ್ ತಂಡವನ್ನು ನಿಭಾಯಿಸಿದ್ದೇನೆ. ಭಾರತೀಯ ಕ್ರಿಕೆಟ್ ತಂಡದ ನಾಯಕತ್ವ ವಹಿಸಿದ್ದ ನನಗೆ ಬೆಂಬಲಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನೀವಿಲ್ಲದೆ ನಾನೇನ್ನೂ ಮಾಡಲು ಸಾಧ್ಯವಾಗಿಲ್ಲ. ಎಲ್ಲಾ ಆಟಗಾರರು, ಸಿಬ್ಬಂದಿ, ಆಯ್ಕೆ ಸಮಿತಿ, ನನ್ನ ತರಬೇತುದಾರರು ಸೇರಿದಂತೆ ಭಾರತ ತಂಡದ ಗೆಲುವಿಗೆ ಪ್ರಾರ್ಥಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆಯನ್ನು ಅರ್ಪಿಸುತ್ತೇನೆ ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ.
ನಾನು ಕಳೆದ 7-8 ವರ್ಷಗಳಿಂದಲೂ ಕೆಲಸ ನಿರ್ವಹಿಸಿದ್ದೇನೆ. ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ 5-6 ವರ್ಷ ಕೆಲಸ ಮಾಡಿದ್ದೇನೆ. ಟೆಸ್ಟ್ ಪಂದ್ಯ, ಏಕದಿನ ಪಂದ್ಯಗಳ ನಾಯಕತ್ವ ವಹಿಸಿದ್ದೇನೆ. ಉತ್ತಮವಾಗಿ ಕೆಲಸ ಮಾಡಿದ್ದೇನೆ. ನನ್ನ ಅವಧಿಯಲ್ಲಿ T20 ತಂಡಕ್ಕೆ ಎಲ್ಲವನ್ನೂ ನೀಡಿದ್ದೇನೆ. ನಾನು T20 ತಂಡದಲ್ಲಿ ಬ್ಯಾಟ್ಸ್ ಮನ್ ಆಗಿ ಮುಮದುವರಿಯುತ್ತೇನೆ ಎಂದು ಹೇಳಿದ್ದಾರೆ.
ಈ ತೀರ್ಮಾನ ಕೈಗೊಳ್ಳಲು ಸಾಕಷ್ಟು ಸಮಯ ತೆಗೆದುಕೊಂಡಿದ್ದೇನೆ. ನನ್ನ ಆಪ್ತರೊಂದಿಗೆ ಈ ಬಗ್ಗೆ ಚರ್ಚಿಸಿದ್ದೇನೆ. ರವಿ ಭಾಯಿ ಮತ್ತು ರೋಹಿತ್ ನನ್ನ ನಾಯಕತ್ವ ಗುಂಪಿನ ಭಾಗವಾಗಿದ್ದರು. ಈಗ ನಾನು ಟ್ವಂಟಿ-ಟ್ವಂಟಿ ನಾಯಕತ್ವ ಜ್ಯಜಿಸಲು ನಿರ್ಥರಿಸಿದ್ದೇನೆ. 20-20 ವಿಶ್ವಕಪ್ ಮುಗಿದ ಬಳಿಕ ರಾಜಿನಾಮೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಅಯ್ಕೆಗಾರರು ಸೇರಿದಂತೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೋಲಿ ಜೊತೆ ಮಾತನಾಡಿದ್ದೇನೆ. ನಾನು ಭಾರತೀಯ ಕ್ರಿಕೆಟ್ ಮತ್ತು ಭಾರತ ತಂಡಕ್ಕಾಗಿ ನನ್ನ ಸಾಮರ್ಥ್ಯ ಮೀರಿ ಸೇವೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.


