ಹಿಂದಿ ದಿವಸ್ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ “ಹಿಂದಿ ಹೇರಿಕೆ ನಿಲ್ಲಿಸಿ” ಟ್ವಿಟ್ಟರ್ ಅಭಿಯಾನ ಹಮ್ಮಿಕೊಂಡಿದೆ. ಇಂದು ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ‘ಬನ್ನಿ ಹಿಂದಿ ಹೇರಿಕೆ ವಿರೋಧಿಸೋಣ, ಭಾಷಾ ವೈವಿಧ್ಯತೆ ಎತ್ತಿ ಹಿಡಿಯೋಣ’ ಎಂದು ರಕ್ಷಣಾ ವೇದಿಕೆ ಹೇಳಿದೆ.
ಸೆಪ್ಟೆಂಬರ್ 14ರಂದು ಹಿಂ ಭಾಷೆಯನ್ನು ರಾಜಭಾಷೆಯನ್ನಾಗಿಸಿದ ದಿನ, ಹಿಂದಿ ಭಾಷೆಯನ್ನು ಸಿಂಹಾಸನದ ಮೇಲೆ ಕೂರಿಸಿ ಉಳಿದೆಲ್ಲಾ ಭಾಷೆಗಳು ಹಿಂದಿ ಭಾಷೆಗಿಂತ ಕಡಿಮೆ ಸ್ಥಾನಕ್ಕೆ ಸೀಮಿತಗೊಳಿಸಿದ ದಿನ ಎಂದು ಕರವೇ ಮುಖಂಡರು ಕಿಡಿ ಕಾರಿದ್ದಾರೆ.
ಹಿಂದಿ ಎಂದರೆ ಭಾರತ ಎನ್ನುವ ಸುಳ್ಳಿನ ಸೌಧವನ್ನು ರೂಪಿಸಲು ಅಡಿಪಾಯ ಹಾಕಿದ ದಿನ. ನಮ್ಮೆಲ್ಲರ ಪಾಲಿನ ಈ ಕರಾಳ ದಿನವನ್ನು ಒಕ್ಕೂಟ ಸರಕಾರ ಹಿಂದಿ ದಿವಸ್ ಎಂದು ಆಚರಿಸುತ್ತದೆ. ಹಿಂದಿಯೊಂದೇ ಭಾಷೆಗೆ ಪ್ರಾಮುಖ್ಯತೆ ದೊರಕಿಸಿಕೊಡಲು ಪ್ರಯತ್ನಿಸುತ್ತದೆ, ಬನ್ನಿ ಇದನ್ನು ವಿರೋಧಿಸೋಣ ಎಂದು ದಿನೇಶ್ ಕುಮಾರ್ ಹೇಳಿದ್ದಾರೆ.
ಒಕ್ಕೂಟ ಸರಕಾರ ನಡೆಸುತ್ತಿರೋ ಹಿಂದಿ ಹೇರಿಕೆಯನ್ನು ಎತ್ತಿಹಿಡಿಯೋಣ, ಭಾಷಾ ವೈವಿಧ್ಯತೆಯ ಭಾರತದಲ್ಲಿ ಎಲ್ಲಾ ಭಾಷೆಗಳಿಗೂ ಸಮಾನ ಸ್ಥಾನ ಸಿಗಬೇಕೆಂದು ಒತ್ತಾಯಿಸೋಣ ಎಂದು ತಿಳಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯದ ಒಂದು ಸಾವಿರಕ್ಕೂ ಹೆಚ್ಚು ಬ್ಯಾಂಕ್ ಗಳ ಮುಂದೆ ಏಕಕಾಲಕ್ಕೆ ನಡೆಯುತ್ತಿರುವ ಅಭೂತಪೂರ್ವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಿ ಕರೆ ನೀಡಿದ್ದಾರೆ.
ಟ್ವಿಟರ್ ನಲ್ಲಿ Facebook ನಲ್ಲಿ #StopHindiImposition ಮತ್ತು #ಹಿಂದಿಹೇರಿಕೆನಿಲ್ಲಿಸಿ Hashtag ಬಳಸಿ. ಬೆಳಿಗ್ಗೆ ಹತ್ತು ಗಂಟೆಯಿಂದ ರಾತ್ರಿ ಹತ್ತು ಗಂಟೆಯವರೆಗೆ ಟ್ವಿಟರ್ ಆಂದೋಲನ ನಡೆಯಲಿದೆ.
ಬೆಳಿಗ್ಗೆ ಹತ್ತು ಗಂಟೆಯಿಂದ ಕ್ಲಬ್ ಹೌಸ್ ನ ಕರ್ನಾಟಕ ರಕ್ಷಣಾ ವೇದಿಕೆ ಗುಂಪಿನಲ್ಲಿ ಸಾವಿರಾರು ಪ್ರತಿಭಟನೆಗಳ ಲೈವ್ ಕಮೆಂಟರಿ ಕೂಡ ಇರುತ್ತದೆ. ಒಂದೇ ದಿನ ಕರ್ನಾಟಕ ರಕ್ಷಣಾ ವೇದಿಕೆಯ ಲಕ್ಷಾಂತರ ಕಾರ್ಯಕರ್ತರು ರಾಜ್ಯದ ಮೂಲೆಮೂಲೆಗಳಲ್ಲಿ ಬೀದಿಗಿಳಿಯಲಿದ್ದಾರೆ ಎಂದು ರಕ್ಷಣಾ ವೇದಿಕೆಯ ದಿನೇಶ್ ಕುಮಾರ್ ತಿಳಿಸಿದ್ದಾರೆ.