Friday, October 18, 2024
Google search engine
Homeಮುಖಪುಟಕರ್ನಾಲ್ ಘಟನೆ ತನಿಖೆಗೆ ಸಮ್ಮತಿ- ರೈತರ ಪ್ರತಿಭಟನೆ ವಾಪಸ್

ಕರ್ನಾಲ್ ಘಟನೆ ತನಿಖೆಗೆ ಸಮ್ಮತಿ- ರೈತರ ಪ್ರತಿಭಟನೆ ವಾಪಸ್

ಆಗಸ್ಟ್ 28ರ ರೈತರ ಮೇಲಿನ ಲಾಠಿಚಾರ್ಜ್ ಮತ್ತು ಐಎಎಸ್ ಅಧಿಕಾರಿಯ ಪಾತ್ರದ ಕುರಿತು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಲು ಹರ್ಯಾಣ ಸರ್ಕಾರ ಸಮ್ಮತಿಸಿರುವುದರಿಂದ ಕರ್ನಾಲ್ ನಲ್ಲಿ ನಡೆಸುತ್ತಿದ್ದ ಅನಿರ್ದಿಷ್ಠಾವಧಿ ಪ್ರತಿಭಟನೆಯನ್ನು ಸಂಯುಕ್ತ ಕಿಸಾಸ್ ಸಂಘಟನೆ ವಾಪಸ್ ಪಡೆದಿವೆ.

ಸೆಪ್ಟೆಂಬರ್ 11ರಂದು ನಡೆದ ನಾಲ್ಕನೇ ಸುತ್ತಿನ ಮಾತುಕತೆಯಲ್ಲಿ ರೈತ ಸಂಘಟನೆಗಳು ಮತ್ತು ಹರ್ಯಾಣ ಸರ್ಕಾರ ಸೌಹಾರ್ದ ನಿರ್ಣಯಕ್ಕೆ ಬಂದಿವೆ. ಹೀಗಾಗಿ ಕರ್ನಾಲ್ ನಲ್ಲಿ ನಡೆಸುತ್ತಿದ್ದ ರೈತರ ಪ್ರತಿಭಟನೆ ಮುಕ್ತಾಯಗೊಂಡಿದೆ.

ಆಗಸ್ಟ್ 28ರ ಘಟನೆಯ ಕುರಿತು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಪೂರ್ಣಗೊಳ್ಳುವವರೆಗೂ ಐಎಎಸ್ ಅಧಿಕಾರಿ ರಜೆಯ ಮೇಲೆ ತೆರಳಬೇಕೆಂಬ ರೈತ ನಾಯಕರ ಬೇಡಿಕೆಗೂ ಹರ್ಯಾಣ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಮಾತುಕತೆ ಸಂದರ್ಭದಲ್ಲಿ ರೈತ ನಾಯಕರು, ಆಗಸ್ಟ್ 28ರಂದು ನಡೆದ ಲಾಠಿಚಾರ್ಜ್ ನಲ್ಲಿ ಮೃತಪಟ್ಟ ರೈತ ಸುಶಿಲ್ ಕಜಲ್ ಕುಟಂಬದ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಬೇಕೆಂಬ ಬೇಡಿಕೆಗೂ ಸರ್ಕಾರ ಒಪ್ಪಿಗೆ ನೀಡಿದೆ. ಮೃತ ರೈತನ ಕುಟುಂಬದ ಇಬ್ಬರು ಸದಸ್ಯರಿಗೆ ಸರ್ಕಾರಿ ನೌಕರಿ ನೀಡುವುದಾಗಿ ಐಎಎಸ್ ಅಧಿಕಾರಿ ದೇವೇಂದರ್ ಸಿನ್ಹಾ ಹೇಳಿದ್ದಾರೆ.

ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ಕರ್ನಾಲ್ ನಲ್ಲಿ ಆಗಸ್ಟ್ 28ರಂದು ಸಾವಿರಾರು ರೈತರು ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭಧಲ್ಲಿ ಪೊಲೀಸರು ಲಾಠಿಚಾರ್ಜ್ ನಡೆಸಿದಾಗ ಸುಶಿಲ್ ಕಜಲ್ ತೀವ್ರ ಗಾಯಗೊಂಡು ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಐಎಎಸ್ ಅಧಿಕಾರಿ ರೈತರ ತಲೆ ಹೊಡೆಯಿರಿ ಎಂಬ ಹೇಳಿಕೆ ವಿಡಿಯೋ ವೈರಲ್ ಆಗಿತ್ತು.

ಈ ಹಿನ್ನೆಲೆಯಲ್ಲಿ ಲಾಠಿಚಾರ್ಜ್ ನಡೆಸಿದ ಪೊಲೀಸರು ಮತ್ತು ಪ್ರಚೋದನೆ ನೀಡಿದ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಒತ್ತಾಯಿಸಿ ಕಿಸಾನ್ ಸಂಯುಕ್ತ ಮೋರ್ಚಾ ನೇತೃತ್ವದಲ್ಲಿ ಕರ್ನಾಲ್ ನಲ್ಲಿ ಕಿಸಾನ್ ಮಹಾಪಂಚಾಯತ್ ನಡೆಸಿತ್ತು. ಪ್ರತಿಭಟನೆಗಳು ಕೂಡ ನಡೆದಿದ್ದವು.

ಕೊನೆಗೂ ನಾಲ್ಕನೇ ಸುತ್ತಿನ ಮಾತುಕತೆಯಲ್ಲಿ ಬಹುತೇಕ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಒಪ್ಪಿಗೆ ನೀಡಿದೆ. ಕೆಲವು ವಿಷಯಗಳನ್ನು ಮಾತುಕತೆಯಲ್ಲಿ ಕೈಬಿಡಲಾಗಿದೆ. ಮೃತ ಕಜಲ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ರೈತ ನಾಯಕರು ಒತ್ತಾಯಿಸಿದ್ದಾರೆ. ಆದರೆ ಸರ್ಕಾರದಿಂದ ಖಚಿತ ಭರವಸೆ ಸಿಕ್ಕಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular