Friday, October 18, 2024
Google search engine
Homeಮುಖಪುಟಮಾದಕದ್ರವ್ಯ ಜಿಹಾದ್-ವಿವಾದಾತ್ಮಕ ಹೇಳಿಕೆ ನೀಡಿದ ಬಿಷಪ್

ಮಾದಕದ್ರವ್ಯ ಜಿಹಾದ್-ವಿವಾದಾತ್ಮಕ ಹೇಳಿಕೆ ನೀಡಿದ ಬಿಷಪ್

ಕೇರಳದ ಕ್ರಿಶ್ಚಿಯನ್ನರಲ್ಲಿ ಇಸ್ಲಾಮಾಪೋಬಿಯಾ ಹೆಚ್ಚುತ್ತಿದ್ದು ಮುಸ್ಲೀಮೇತರರನ್ನು ಗುರಿಯಾಗಿಸಿಕೊಂಡು ಸಂಘಟಿತ ಮಾದಕದ್ರವ್ಯ ಜಿಹಾದ್ ನಡೆಸಲಾಗುತ್ತಿದೆ ಎಂದು ವಾಲೈ ಬಿಷಪ್ ಜೋಸೆಫ್ ಕಲ್ಲಾರಂಗಟ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದಕ್ಕೆ ಮುಸ್ಲೀಂ ಘಟನೆಗಳಿಂದ ತೀವ್ರ ಪ್ರತಿಭಟನೆ ವ್ಯಕ್ತವಾಗಿದೆ.

ಮುಸ್ಲೀಮೇತರ ಯುಕರನ್ನು ಗುರಿಯಾಗಿಸಿಕೊಂಡು ನಾರ್ಕೋಟಿಕ್ ಜಿಹಾದ್ ನಡೆಯುತ್ತಿದೆ ಮಾಧ ಮರಿಯಾ ಪಿಲಿಗ್ರಿಂ ಚರ್ಚ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಷಪ್ ಎಂದು ಆರೋಪಿಸಿದ್ದು, ಮಾದಕದ್ರವ್ಯ ಜಿಹಾದ್ ಮುಸ್ಲೀಮೇತರರ ಜೀವವನ್ನು ಹಾಳು ಮಾಡುತ್ತಿದೆ. ವಿಶೇಷವಾಗಿ ಯುವಸಮುದಾಯವನ್ನು ಮಾದಕದ್ರವ್ಯ ವ್ಯಸನಿಗಳನ್ನಾಗಿ ಮಾಡುತ್ತಿದೆ ಎಂದು ಹೇಳಿದ್ದಾರೆ.

ಕೇರಳದ ಐಸ್ ಕ್ರೀಂ ಪಾರ್ಲರ್ ಗಳು, ಹೋಟೆಲ್ ಗಳು, ಮತ್ತು ಜ್ಯೂಸ್ ಸೆಂಟರ್ ಗಳಲ್ಲಿ ಹಾರ್ಡ್ ಕೋರ್ ಜಿಹಾದಿಗಳು ಮಾದಕದ್ರವ್ಯಗಳನ್ನು ಬಳಸುತ್ತಿದ್ದಾರೆ. ಮುಸ್ಲೀಮೇತರರನ್ನು ಹಾಳುಮಾಡುವುದು ಇದರ ಉದ್ದೇಶವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರೇವ್ ಪಾರ್ಟಿಗಳು ಇಂತಹ ಮಾದಕದ್ರವ್ಯ ಜಿಹಾದ್ ಪ್ರಚುರಪಡುವ ವೇದಿಕೆಗಳಾಗಿವೆ. ಇಂತಹ ರೇವ್ ಪಾರ್ಟಿಗಳಲ್ಲಿ ಮಾದಕದ್ರವ್ಯಗಳನ್ನು ವಶಪಡಿಸಿಕೊಂಡ ಸಾಕಷ್ಟು ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಜಿಹಾದ್ ನಲ್ಲಿ ಎರಡು ವಿಧ. ಒಂದು ಲವ್ ಜಿಹಾದ್, ಮೊತ್ತೊಂದು ನಾರ್ಕೋಟಿಕ್ ಜಿಹಾದ್. ಇವರೆಡೂ ಅಪಾಯಕಾರಿ ಎಂದು ಬಿಷಪ್ ಹೇಳಿದ್ದಾರೆ.

ಮಾದಕದ್ರವ್ಯ ಜಿಹಾದ್ ಗೆ ಬಲಿಯಾದ ಬಹುತೇಕ ಯುವಕರು ಕೆಲಸ ಕಳೆದುಕೊಂಡಿದ್ದಾರೆ. ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿರುವ ಉದಾಹರಣೆಗಳು ನಮ್ಮ ನಡುವೆ ಇವೆ. ಮಾದಕದ್ರವ್ಯ ಜಿಹಾದ್ ನ ಪರಿಣಾಮ ಕ್ರಿಶ್ಚಿಯನ್ನರಲ್ಲಿ ಇಸ್ಲಮಾಪೋಬಿಯಾ ಹೆಚ್ಚುತ್ತಿದೆ ಎಂದು ತಿಳಿಸಿದ್ದಾರೆ.

ಬಿಷಪ್ ಹೇಳಿಕೆಗೆ ಕೇರಳದ ಮುಸ್ಲಿಂ ಸಂಘಟನೆಗಳು ತೀವ್ರ ಖಂಡನೆ ವ್ಯಕ್ತಪಡಿಸಿವೆ. ಬಿಷಪ್ ಹೇಳಿಕೆಯನ್ನು ಹಿಂಪಡೆಯಬೇಕು. ಮುಸ್ಲೀಮರ ಕ್ಷಮೆಯಾಚಿಸಬೇಕು ಎಂದು ಪ್ರತಿಭಟನೆಗಳನ್ನು ನಡೆಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular