Thursday, September 19, 2024
Google search engine
Homeಮುಖಪುಟಮದ್ರಾಸ್, ಬೆಂಗಳೂರು IIScಗೆ ಮೊದಲ 2 ಸ್ಥಾನ

ಮದ್ರಾಸ್, ಬೆಂಗಳೂರು IIScಗೆ ಮೊದಲ 2 ಸ್ಥಾನ

ದೇಶದ ವಿಶ್ವವಿದ್ಯಾನಿಲಯಗಳು ಮತ್ತು ಇಂಜಿನಿಯರಿಂಗ್ ಕಾಲೇಜುಗಳ ವಿಭಾಗದಲ್ಲಿ ಮದ್ರಾಸ್ ಐಐಎಸ್.ಸಿ ಮೊದಲ ರ್ಯಾಂಕ್ ಪಡೆದಿದ್ದರೆ, ಬೆಂಗಳೂರು ಎರಡನೇ ಮತ್ತು ಐಐಟಿ ಬಾಂಬೆ ಶಿಕ್ಷಣ ಸಂಸ್ಥೆಗಳು ಮೂರನೇ ರ್ಯಾಂಕ್ ಗಳನ್ನು ಪಡೆದಿವೆ ಎಂದು ನ್ಯಾಷನಲ್ ಇನ್ಸ್ ಟಿಟೂಷನಲ್ ರ್ಯಾಂಕಿಂಗ್ ಪ್ರೇಮ್ ವರ್ಕ್ ಶಿಕ್ಷಣ ಸಂಸ್ಥೆ ಇಂದು ಪ್ರಕಟಿಸಿದೆ.

ಇನ್ನುಳಿದಂತೆ ವಿಶ್ವವಿದ್ಯಾಲಯಗಳ ರ್ಯಾಂಕಿಂಗ್ ನಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಐಐಎಸ್.ಸಿ, ಜವಾಹರಲಾಲ್ ವಿಶ್ವವಿದ್ಯಾಲಯ ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾಲಯಗಳು ಹಿಂದಿನ ರ್ಯಾಂಕ್ ಗಳಲ್ಲೇ ಇವೆ ಎಂದು ತಿಳಿಸಿದೆ.

ಜಾಮಿಯಾ ಮಿಲಿಯಾ ಇಸ್ಲಾಮಿಯ ವಿಶ್ವವಿದ್ಯಾನಿಲಯ, ಹೈದರಾಬಾದ್ ಸೆಂಟ್ರಲ್ ಯೂನಿವರ್ಸಿಟಿಯಲ್ಲಿ ಒಕ್ಕೂಟ ಸರ್ಕಾರದ ವಿರುದ್ಧ ಪ್ರತಿಭಟನೆಗಳು ನಡೆದಿರುವ ಹಿನ್ನೆಲೆಯಲ್ಲಿ ರ್ಯಾಂಕ್ ನಲ್ಲಿ ಗುರುತರ ಬದಲಾವಣೆಯಾಗಿದೆ. ಹಾಗಾಗಿ ಮೊದಲ ಹತ್ತು ರ್ಯಾಂಕ್ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ.

ಜಾಮಿಯ ಮಿಲಿಯಾ ಇಸ್ಲಾಮಿಯ ವಿಶ್ವವಿದ್ಯಾಲಯ ಪಟ್ಟಿಯಲ್ಲಿ ಉನ್ನತ ಸ್ಥಾನಕ್ಕೆ ಏರಿದೆ. ಕಳೆದ ಬಾರಿ 10ನೇ ಸ್ಥಾನದಲ್ಲಿದ್ದ ಜಾಮಿಯ ಮಿಲಿಯಾ ಇಸ್ಲಾಮಿಯ ವಿಶ್ವವಿದ್ಯಾನಿಲಯ ಈ ಬಾರಿ 6 ಸ್ಥಾನಕ್ಕೆ ಜಿಗಿದಿದೆ. ಕಳೆದ ಬಾರಿ 6ನೇ ಸ್ಥಾನದಲ್ಲಿದ್ದ ಹಿಂದೂ ಬನಾರಸ್ ವಿಶ್ವವಿದ್ಯಾಲಯ 9ನೇ ಸ್ಥಾನಕ್ಕೆ ಕುಸಿದಿದೆ.

ಇಂಜಿನಿಯರಿಂಗ್ ಮತ್ತು ವಿಶ್ವವಿದ್ಯಾನಿಲಯಗಳ 8ವಿಭಾಗಗಳಲ್ಲಿ ಕಾಲೇಜು, ವೈದ್ಯಕೀಯ, ಮ್ಯಾನೇಜ್ ಮೆಂಟ್, ಫಾರ್ಮಸಿ, ಕಾನೂನು, ವಾಸ್ತು, ದಂದವೈದ್ಯ, ಸಂಶೋಧನ ವಿಭಾಗದಲ್ಲಿ ಐಐಎಂ ಅಹಮದಾಬಾದ್ ಮೊದಲ ಸ್ಥಾನದಲ್ಲಿದೆ. ಐಐಎಂ ಬೆಂಗಳೂರು, ಕೊಲ್ಕತ್ತ, ಕೊಜಿಕೋಡ್ ಮತ್ತು ದೆಹಲಿ ನಂತರದ ರ್ಯಾಂಕ್ ಗಳನ್ನು ಪಡೆದುಕೊಂಡಿವೆ.

ಮಿರಂಡ ಕಾಲೇಜು ಮೊದಲ ರ್ಯಾಂಕ್ ಪಡೆದಿದ್ದರೆ, ಲೇಡಿ ಶ್ರೀರಾಮ ಕಾಲೇಜು ಎರಡನೇ ರ್ಯಾಂಕ್ ಗಳಿಸಿದೆ. 2ನೇ ಸ್ಥಾನದಲ್ಲಿದ್ದ ಹಿಂದೂ ಕಾಲೇಜು 9ನೇ ರ್ಯಾಂಕ್ ಗೆ ಕುಸಿದಿದೆ. ಚೆನ್ನೈನ ಲೋಯಲ್ಲಾ ಕಾಲೇಜು 3ನೇ ರ್ಯಾಂಕ್ ಗಿಟ್ಟಿಸಿಕೊಂಡಿದೆ. 10 ನೇ ಸ್ಥಾನದಲ್ಲಿದ್ದ ಕಲ್ಕತ್ತಾದ ಸೈಂಟ್ ಕ್ಷವಿಯರ್ ಕಾಲೇಜು 4ನೇ ರ್ಯಾಂಕ್ ಪಡೆದಿದೆ.

ಆಲ್ ಇಂಡಿಯ ಇನ್ಸ್ ಟಿಟೂಟ್ ಆಫ್ ಮೆಡಿಕಲ್ ಸೈನ್ಸ್ ಮೊದಲ ವೈದ್ಯಕೀಯ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪಿಜಿಐಎಂಇಆರ್ ಚಂಡಿಗಡ ಕಾಲೇಜು 4ನೇ ಸ್ಥಾನ ಮತ್ತು ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು ನಂತರದ ಸ್ಥಾನದಲ್ಲಿದೆ. ಸಂಶೋಧನಾ ವಿಭಾಗದಲ್ಲಿ ಐಐಎಸ್.ಸಿ ಬೆಂಗಳೂರು ಉತ್ತಮ ಸ್ಥಾನ ಗಿಟ್ಟಿಸಿಕೊಂಡಿದೆ.

ನ್ಯಾಷನಲ್ ಇನ್ಸ್ ಟಿಟೂಷನಲ್ ರ್ಯಾಂಕಿಂಗ್ ಪ್ರೇಮ್ ವರ್ಕ್ ರ್ಯಾಂಕಿಂಗ್ ಪಟ್ಟಿಯಲ್ಲಿ ಸ್ಥಾನ ಪಡೆಯಲು 6 ಸಾವಿರ ಶಿಕ್ಷಣ ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು. ಬೋಧನೆ, ಕಲಿಕೆ, ಸಂಪನ್ಮೂಲ, ಸಂಶೋಧನೆ, ವೃತ್ತಿಪರತೆ, ಪದವಿ ಕೋರ್ಸ್ ಗೆ ಸೇರ್ಪಡೆ ಮತ್ತು ಉರ್ತೀರ್ಣ ಆಧಾರದ ಮೇಲೆ ಎನ್ಐಆರ್.ಎಫ್ ಸಂಸ್ಥೆ ರ್ಯಾಂಕಿಂಗ್ ನೀಡುತ್ತ ಬರುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular