ತ್ರಿಪುರ ರಾಜಧಾನಿ ಅಗರತಲಾ ನಗರದಲ್ಲಿ ಸಿಪಿಎಂ ಕಚೇರಿಗಳಿಗೆ ಅಪರಿಚಿತ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಪರಿಣಾಮ ಕಚೇರಿಯಲ್ಲಿನ ದಾಖಲೆಗಳು ಮತ್ತು ಕಚೇರಿಗಳ ಮುಂದೆ ನಿಲ್ಲಿಸಿದ್ದ ಹಲವು ವಾಹನಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ.
ತ್ರಿಪುರಾದ ಹಲವು ಭಾಗ ಸಿಪಿಐ (ಎಂ) ಕಛೇರಿಗಳ ಮೇಲೆ ಪೋಲಿಸರ ಸಹಕಾರದೊಂದಿಗೆ ಬಿಜೆಪಿ ಸರಣಿ ದಾಳಿಗಳನ್ನು ನಡೆಸಿದೆ. ಅಗರ್ತಲಾದ ಹೃದಯ ಭಾಗದಲ್ಲಿರುವ ರಾಜ್ಯ ಪಕ್ಷದ ಕಚೇರಿಯ ಹೊರಗೆ ಬಿಜೆಪಿಯವರು ಕಾರಿಗೆ ಬೆಂಕಿ ಹಚ್ಚಿದ್ದಾರೆ. ಸಿಪಿಐ (ಎಂ) ಈ ದಾಳಿಯನ್ನು ಖಂಡಿಸುತ್ತದೆ ಮತ್ತು ಸಂಬಂಧಪಟ್ಟವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತದೆ ಎಂದು ಸಿಪಿಎಂ ಟ್ವೀಟ್ ಮಾಡಿದೆ.
ಬಿಜೆಪಿ ಕ್ರಿಮಿನಲ್‌ಗಳು ಸಿಪಿಐ (ಎಂ) ನ ಬಿಶಾಲಗರ್ ಕಚೇರಿಯನ್ನು ಸುಟ್ಟುಹಾಕಿದರು ಮತ್ತು ಪೊಲೀಸರು ಅವರಿಗೆ ಸಹಾಯ ಮಾಡಿದರು. ರಾಜ್ಯದಲ್ಲಿ ವಿರೋಧ ಪಕ್ಷಗಳ ಮೇಲೆ ದಾಳಿ ಮಾಡಲು ಬಿಜೆಪಿ ರಾಜ್ಯ ಯಂತ್ರಗಳನ್ನು ಬಳಸುತ್ತಿದೆ. ಈ ಹೇಡಿತನದ ದಾಳಿ ತಕ್ಷಣವೇ ನಿಲ್ಲಬೇಕು ಎಂದು ಆಗ್ರಹಿಸಿದೆ.
ಅಗರತಲಾದ ಸಿಪಿಎಂ ಮುಖ್ಯಕಚೇರಿ ಬಾನುಸ್ಮೃತಿ, ದಶರಥ ಭವನಕ್ಕೆ ಬೆಂಕಿ ಹಚ್ಚಲಾಗಿದೆ. ಸಿಪಿಎಂ ಯುವ ಘಟಕದ ಕಾರ್ಯಕರ್ತರು ರ್ಯಾಲಿ ಪೊಲೀಸರ ಅನುಮತಿ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ. ಕೃಷಿ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.