Thursday, September 19, 2024
Google search engine
Homeಮುಖಪುಟಎತ್ತರಜಿಗಿತದಲ್ಲಿ ಭಾರತದ ಪ್ರವೀಣ್ ಕುಮಾರ್ ಗೆ ಬೆಳ್ಳಿ

ಎತ್ತರಜಿಗಿತದಲ್ಲಿ ಭಾರತದ ಪ್ರವೀಣ್ ಕುಮಾರ್ ಗೆ ಬೆಳ್ಳಿ

ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಲಂಪಿಕ್ ನಲ್ಲಿ ಶುಕ್ರವಾರ ಭಾರತದ ಪ್ರವೀಣ್ ಕುಮಾರ್ ಅವರು ಎತ್ತರಜಿಗಿತದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.

ಟಿ64 ಸ್ಪರ್ಧೆಯಲ್ಲಿ 18 ವರ್ಷದ ಪ್ರವೀಣ್ ಕುಮಾರ್ 2.07 ಮೀಟರ್ ಎತ್ತರ ಜಿಗಿದು ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡರು. ಇದೇ ಮೊದಲ ಬಾರಿಗೆ ಪ್ಯಾರಲಂಪಿಕ್ ನಲ್ಲಿ ಸ್ಪರ್ಧಿಸಿರುವ ಪ್ರವೀಣ್ ಕುಮಾರ್ 2.07ಮೀಟರ್ ಎತ್ತರ ಜಿಗಿದು ನೂತನ ಏಷ್ಯಾ ದಾಖಲೆ ಮಾಡಿದರು.

ಗ್ರೇಟ್ ಬ್ರಿಟನ್ ನ ಜೊನಾಥನ್ ಬ್ರೂಮ್ ಎಡ್ವರ್ಡ್ ಇದೇ ವಿಭಾಗದಲ್ಲಿ 2.10 ಮೀಟರ್ ಎತ್ತರ ಜಿಗಿದು ಚಿನ್ನದ ಪದಕ ಪಡೆಯುವಲ್ಲಿ ಯಶಸ್ವಿಯಾದರು.

ಇದರೊಂದಿಗೆ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಇದುವರೆಗೆ ಪ್ಯಾರಾಲಂಪಿಕ್ ನಲ್ಲಿ 2 ಚಿನ್ನ, ಆರು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳನ್ನು ಭಾರತ ಪಡೆದುಕೊಂಡಿದೆ.

ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಪ್ರವೀಣ್ ಕುಮಾರ್ ಅವರ ಸಾಧನೆಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular