ಮಹಾರಾಷ್ಟ್ರ ರಾಜ್ಯದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ವ್ಯಕ್ತಿಗಳನ್ನು ಹೊತ್ತೊಯ್ಯುತ್ತಿದ್ದ ವಿಮಾನ ಬುಧವಾರ ಬೆಳಗ್ನಿಗೆ ಪುಣೆ ಜಿಲ್ಲೆಯ ಬಾರಾಮತಿ ಬಳಿಯಲು ಪ್ರಯತ್ನಿಸುತ್ತಿದ್ದಾಗ ವಿಮಾನ ಪತನಗೊಂಡು 5 ಮಂದಿ ಮೃತಪಟ್ಟಿದ್ದಾರೆ.
ವಿಮಾನವು ಬೆಳಗ್ಗೆ 8.10ಕ್ಕೆ ಮುಂಬೈನಿಂದ ಹೊರಟು 8.45ರ ಸುಮಾರಿಗೆ ರಾಡಾರ್ ನಿಂದ ಕಣ್ಮರೆಯಾಯಿತು ಎಂದು ಹೇಳಲಾಗಿದೆ.
ವಿಮಾನ ಇಳಿಯಲು ಪ್ರಯತ್ನಿಸುವ ಮೊದಲು ವಿಮಾನದ ಪೈಲಟ್ ರನ್ ವೇ ಬಳಿ ಕಳಪೆ ಗೋಚರತೆಯ ಬಗ್ಗೆ ಉಲ್ಲೇಖಿಸಿದ್ದರು ಎಂದು ಪಿಟಿಐ ಸುದ್ದಿ ಸಂಸ್ಥೆ ತಿಳಿಸಿದರು.
ಬೊಂಬಾರ್ಡಿಯರ್ ಏರೋಸ್ಪೇಸ್ ನ ಲಿಯರ್ ಜೆಟ್್ ವಿಭಾಗದಿಂದ ಉತ್ಪಾದಿಸಲ್ಪಟ್ಟ ಮಧ್ಯಮ ಗಾತ್ರದ ವ್ಯಾಪಾರ ಜೆಟ್ ವಿಮಾನವಾದ ಲಿಯರ್ ಜೆಟ್ 45 ಬಾರಾಮತಿ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸುವಾಗ ರನ್ ವೇಯಿಂದ ಹೊರಗೆ ಹೋಗಿ ಸ್ಪೋಟಗೊಂಡು ಬೆಂಕಿ ಹೊತ್ತಿಕೊಂಡಿತು.
ಹೀಗಾಗಿ ವಿಮಾನದಲ್ಲಿದ್ದ ಎಲ್ಲರೂ ಮೃತರಾಗಿದ್ದಾರೆ.
1959ರಲ್ಲಿ ಜನಿಸಿದ ಅಜಿತ್ 1991ರಲ್ಲಿ ಬಾರಾಮತಿಯಿಂದ ಸಂಸದರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶಿಸಿದರು. ನಂತರ ಹಿರಿಯ ಪವಾರ್ ಅವರನ್ನು ಪ್ರಧಾನಿ ನರಸಿಂಹರಾವ್ ಅವರ ಅಡಿಯಲ್ಲಿ ಕೇಂದ್ರ ಸಚಿವ ಸಂಪುಟಕ್ಕೆ ಸೇರಿಸಿಕೊಂಡ ನಂತರ ಶರದ್ ಪವಾರ್ ಸ್ಪರ್ಧಿಸಲು ಅವಕಾಶ ನೀಡಲು ಅವರು ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.


