ಭಾರತೀಯ ಸಂಸ್ಕೃತಿಯ ಭಾಗ ಮತ್ತು ಅಂಶವೆಂದು ಪರಿಗಣಿಸಿರುವ ಗೋವನ್ನು “ರಾಷ್ಟ್ರೀಯ ಪ್ರಾಣಿ” ಎಂದು ಘೋಷಿಸಬೇಕು. ಕೇಂದ್ರ ಸರ್ಕಾರ “ಗೋವಿಗೆ ಮೂಲಭೂತ ಹಕ್ಕುಗಳನ್ನು ನೀಡಲು ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸಲಿ ಎಂದು ಅಲಹಾಬಾದ್ ಹೈಕೋರ್ಟ್ ಏಕಸದಸ್ಯ ಪೀಠ ಹೇಳಿದೆ.
ಉತ್ತರ ಪ್ರದೇಶ ಸರ್ಕಾರ ಜಾರಿಗೊಳಿಸಿರುವ ಗೋಹತ್ಯೆ ನಿಷೇಧ ಕಾಯ್ದೆಯನ್ನು ಉಲ್ಲಂಘಿಸಿದ ಆರೋಪದಲ್ಲಿ ಬಂಧಿತನಾಗಿರುವ ಜಾವೇದ್ ಎಂಬಾತನಿಗೆ ಜಾಮೀನು ನೀಡಲು ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ಶೇಖರ್ ಕುಮಾರ್ನ್ಯಾ ನಿರಾಕರಿಸಿದರು.
ಗೋವು ಸಂರಕ್ಷಣೆ ಕೇವಲ ಒಂದು ಧರ್ಮೀಯರಿಗೆ ಸೀಮಿತವಾಗಿಲ್ಲ. ಗೋವು ಭಾರತದ ಸಂಸ್ಕೃತಿಯ ಪ್ರತೀಕ. ದೇಶದ ಪ್ರತಿಯೊಬ್ಬರೂ ಧರ್ಮಾತೀತವಾಗಿ ಗೋ ಸಂಸ್ಕೃತಿ ರಕ್ಷಣೆಗೆ ಕೆಲಸ ಮಾಡಬೇಕು ಎಂದು ಹೇಳಿದರು.
ಬಾರ್ ಅಂಡ್ ಬೆಂಚ್ ನ್ಯಾಯಮೂರ್ತಿಗಳ ಮಾತುಗಳನ್ನು ಉಲ್ಲೇಖಿಸಿದ್ದು ಗೋವುಗಳನ್ನು ಗೌರವಿಸಿದರೆ ಮಾತ್ರ ದೇಶದ ಏಳಿಗೆಯಾಗುತ್ತದೆ. ಭಾರತದಲ್ಲಿ ಮಾತ್ರ ಬೇರೆ ಧರ್ಮೀಯರು ವಾಸವಾಗಿದ್ದಾರೆ. ಅವರೆಲ್ಲರ ಆಲೋಚನೆಗಳೂ ದೇಶದ ಬಗ್ಗೆ ಒಂದೇ ಅಗಿವೆ” ಎಂದು ಹೇಳಿದೆ.
ಆರೋಪಿ ಜಾವೆದ್ ಅವರಿಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ “ಇಂತಹ ಪರಿಸ್ಥಿತಿಯಲ್ಲಿ, ಪ್ರತಿಯೊಬ್ಬರೂ ಭಾರತವನ್ನು ಒಂದುಗೂಡಿಸಲು ಮತ್ತು ಅದರ ನಂಬಿಕೆಯನ್ನು ಬೆಂಬಲಿಸಲು ಒಂದು ಹೆಜ್ಜೆ ಮುಂದಿಟ್ಟಾಗ, ಕೆಲವು ಜನರ ನಂಬಿಕೆ ಮತ್ತು ವಿಶ್ವಾಸ ದೇಶದ ಹಿತಾಸಕ್ತಿಯನ್ನು ಹೊಂದಿರುವುದಿಲ್ಲ, ಅವರು ಕೇವಲ ದೇಶವನ್ನು ದುರ್ಬಲಗೊಳಿಸುತ್ತಾರೆ” ಎಂದರು.
“ಮೇಲಿನ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ ಮೇಲ್ನೋಟಕ್ಕೆ ಅರ್ಜಿದಾರರ ಅಪರಾಧ ಸಾಬೀತಾಗಿದೆ ಎಂದು ಹೇಳಿದರು.
“ಸರ್ಕಾರವು ಗೋ ಶಾಲೆಗಳನ್ನು ನಿರ್ಮಿಸುತ್ತದೆ, ಆದರೆ ಹಸುವನ್ನು ನೋಡಿಕೊಳ್ಳಬೇಕಾದ ಜನರು ಹಸುಗಳನ್ನು ನೋಡಿಕೊಳ್ಳುವುದಿಲ್ಲ. ಅಂತೆಯೇ, ಖಾಸಗಿ ಗೋ-ಶಾಲೆಗಳು ಕೂಡ ಇಂದು ಕೇವಲ ನೆಪವಾಗಿ ಮಾರ್ಪಟ್ಟಿವೆ, ಇದರಲ್ಲಿ ಜನರು ಸಾರ್ವಜನಿಕರಿಂದ ದೇಣಿಗೆಯನ್ನು ತೆಗೆದುಕೊಳ್ಳುತ್ತಾರೆ ಮತ್ತು ಗೋವಿನ ಪ್ರಚಾರದ ಹೆಸರಿನಲ್ಲಿ ಸರ್ಕಾರದಿಂದ ಸಹಾಯ ಮಾಡುತ್ತಾರೆ, ಆದರೆ ಅದನ್ನು ತಮ್ಮ ಹಿತಾಸಕ್ತಿಗಾಗಿ ಖರ್ಚು ಮಾಡುತ್ತಾರೆ ಮತ್ತು ಹಸುವಿನ ಬಗ್ಗೆ ಕಾಳಜಿ ವಹಿಸುವುದಿಲ್ಲ” ಎಂದು ಕಳವಳ ವ್ಯಕ್ತಪಡಿಸಿದರು.