ತಾಯಿ ಮತ್ತು ತನ್ನ ಅವಳಿ ಮಕ್ಕಳು ಮನೆಯ ಮುಂದಿನ ಸಂಪಿಗೆ ಬಿದ್ದು ಮೃತಪಟ್ಟಿರುವ ಘಟನೆ ತುಮಕೂರು ತಾಲೂಕು ಹಿರೇಹಳ್ಳಿ ಹತ್ತಿರವಿರುವ ಸಂಗನಹಳ್ಳಿ ಕಾಲೋನಿಯಲ್ಲಿ ಮಂಗಳವಾರ ನಡೆದಿದೆ.
ಮೃತರನ್ನು 26 ವರ್ಷದ ವಿಜಯಲಕ್ಷ್ಮಿ, ಸುಮಾರು 5 ವರ್ಷದ ಅವಳಿ ಮಕ್ಕಳಾದ ಚೇತನ ಮತ್ತು ಚೈತನ್ಯ ಎಂದು ತಿಳಿದು ಬಂದಿದೆ.
ಸಂಪಿಗೆ ಬಿದ್ದಿರುವ ಬಗ್ಗೆ ಸಂಜೆ 4.4 ಗಂಟೆ ಸುಮಾರಿಗೆ ಖಚಿತ ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ 4.15 ಗಂಟೆಗೆ ಸ್ಥಳಕ್ಕೆ ತೆರಳಿ ಶವಗಳನ್ನು ಹೊರ ತೆಗೆದಿದ್ದಾರೆ.
10×10 ಅಡಿ ಅಳತೆಯ ಮನೆಯ ಸಂಪಿನಲ್ಲಿ ಬಿದ್ದು ಮೂವರು ಮೃತಪಟ್ಟಿದ್ದು ಶವಗಳನ್ನು ಮೇಲಕ್ಕೆ ತೆಗೆದು ಪೊಲೀಸ್ ಸಿಬ್ಬಂದಿಗೆ ವಹಿಸಿಕೊಟ್ಟು ಮರಳಿ ಬರಲಾಗಿದೆ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ.


