ಅಮೆರಿಕಾ ಪಡೆಗಳು ತಮ್ಮ ವಿಮಾನದ ಮೂಲಕ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತ್ವರೆಯುತ್ತಿದ್ದಂತೆಯೇ ವಿಮಾನ ನಿಲ್ದಾಣವನ್ನು ಸಂಪೂರ್ಣ ವಶಕ್ಕೆ ಪಡೆದ ತಾಲಿಬಾನೀಯರು ಶಸ್ತ್ರಸಜ್ಜಿತರಾಗಿ ಓಡಾಡುವ ಮೂಲಕ ವಿಜಯೋತ್ಸವ ಆಚರಿಸಿದರು. ಹೀಗಾಗಿ ಕಾಬೂಲ್ ವಿಮಾನ ನಿಲ್ದಾಣವೂ ಸೇರಿ ಆಫ್ಘಾನಿಸ್ತಾನ ತಾಲಿಬಾನಿಯರ ಕೈವಶವಾಗಿದೆ.
ಕಾಬೂಲ್ ವಿಮಾನ ನಿಲ್ದಾಣದ ‘ರನ್ ವೇ’ ಯಲ್ಲಿ ಶಸ್ತ್ರಸಜ್ಜಿತರಾಗಿದ್ದ ತಾಲಿಬಾನ್ ಯೋಧರು ಮುಕ್ತವಾಗಿ ಸಂಚರಿಸಿದರು. ಅತ್ತಿಂದಿತ್ತ ಓಡಾಡುತ್ತ ವಿಜಯೋತ್ಸವ ಆಚರಿಸಿದರು. ಇದರಿಂದ ವಿಶ್ವ ಪಾಠ ಕಲಿಯಬೇಕಾಗಿದೆ ಎಂದು ತಾಲಿಬಾನ್ ವಕ್ತಾರ ಜಬಿವುಲ್ಲಾ ಮುಜಾಹಿದ್ ಹೇಳುತ್ತಾ ವಿಯೋತ್ಸವ ಆಚರಿಸಿ ಸಂಭ್ರಮಿಸಿದರು.
ಹಲವು ಕಡೆಗಳಲ್ಲಿ ತಾಲಿಬಾನ್ ಯೋಧರು ಗಾಳಿಯಲ್ಲಿ ಗುಂಡು ಹಾರಿಸಿದರು. 20 ವರ್ಷಗಳ ನಂತರ ಅಮೆರಿಕಾ ಪಡೆಗಳನ್ನು ಸೋಲಿಸಿ ಹೊರಗಟ್ಟಿದ್ದೇವೆ. ಅವರು (ಅಮೆರಿಕ) ದೇಶ ತೊರೆದಿದ್ದಾರೆ. ಈಗ ನಮ್ಮ ದೇಶ ಮುಕ್ತವಾಗಿದೆ ಎಂದು ಮೊಹಮದ್ ಹೇಳಿದ್ದಾರೆ.
ನಮಗೇನು ಬೇಕೆಂಬುದು ಸ್ಪಷ್ಟವಾಗಿದೆ. ನಮಗೆ ಶರಿಯಾ ಕಾನೂನು ಅಗತ್ಯವಿದೆ. ದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಬೇಕು. ನಮ್ಮ ದೇಶವನ್ನು ಇದುವರೆಗೆ ಆಕ್ರಮಿಸಿಕೊಂಡಿದ್ದ ಎಲ್ಲರೂ ದೇಶ ಬಿಟ್ಟು ಹೋಗಿದ್ದಾರೆ ಎಂದು ಮೊಹಮ್ಮದ್ ತಿಳಿಸಿದ್ದಾರೆ.
ಮುಜಾಹಿದ್ ಮತ್ತು ಅದರ ನಾಯಕರ 20 ವರ್ಷಗಳ ತ್ಯಾಗ ಬಲಿದಾನದಿಂದ ದೇವರು ನಮಗೆ ವಿಜಯ ತಂದುಕೊಟ್ಟಿದ್ದಾನೆ. ಶತ್ರುಗಳು ಸೋತುಹೋಗಿದ್ದಾರೆ. ಆದ್ದರಿಂದ ದೇವರಿಗೆ ಕೃತಜ್ಞತೆ ಸಲ್ಲಬೇಕು ಎಂದು ಹೇಳಿದರು.