ತುಮಕೂರು ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಸಾಧಕರನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ನವೆಂಬರ್ 1ರಂದು ಸಾಧಕರನ್ನು ಗೌರವಿಸಲಾಗುವುದು. ಸಾಹಿತ್ಯ ಕ್ಷೇತ್ರದಲ್ಲಿ ಡಾ.ಗಂಗಾಧರ ಕೊಡ್ಲಿ, ಸಿಎನ್ ದುರ್ಗದ ಮೆಹಬೂಬ್ ಖಾನ್, ಬಿ.ಆರ್. ಸುಮಾ, ಡಾ.ಬಿ.ಎಸ್.ಮಂಜುಳ, ಕಮಲ ರಾಜೇಶ್ ಆಯ್ಕೆಯಾಗಿದ್ದಾರೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕು ದ್ವಾರನಕುಂಟೆ ಗಂಗಮ್ಮ ಅವರಿಗೆ ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಿರುವುದಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಗಂಗಮ್ಮ ಅವರು ವಡ್ಡಗೆರೆ ನಾಗಮ್ಮನ ಕಾವ್ಯ, ಮೈಲಾರ ಲಿಂಗೇಶ್ವರನ ಕಾವ್ಯ, ರೇಣುಕುದೆಲ್ಲಮ್ಮನ ಕಾವ್ಯ, ಜುಂಜಪ್ಪನ ಕಾವ್ಯ/ಮಾರಿದೇವರ ಕಾವ್ಯ, ಜನಪದ ಕಥೆಗಳು, ಭಜನೆ ಪದಗಳು, ದೇವರ ಹಾಡುಗಳು, ಸೋಬಾನೆ ಪದಗಳು, ಹೆಣ್ಣು ಮಕ್ಕಳ ಆರತಿ ಪದಗಳು,
ಗಾದೆಗಳು, ಒಗಟುಗಳನ್ನು ನಿರರ್ಗಳವಾಗಿ ಹಾಡುತ್ತಾರೆ.
ಹೀಗೆ ಮೌಖಿಕ ಪರಂಪರೆಯ ಈ ಸಾಹಿತ್ಯವನ್ನು ಹೊಸ ತಲೆಮಾರಿನ ಜನರಿಗೆ ಬಿತ್ತರಿಸಿ ಹಲವಾರು ಹೆಣ್ಣು ಮಕ್ಕಳಿಗೆ ತರಬೇತಿ ಕೊಟ್ಟಿದ್ದಾರೆ. ಇಂತಹ ಮೌಖಿಕ ಸಾಹಿತ್ಯವು ಅನೇಕರಿಂದ ಪುಸ್ತಕರೂಪದಲ್ಲಿ ಬಂದಿದ್ದರೂ ಪ್ರಾದೇಶಿಕತೆಯ ಹಿನ್ನೆಲೆಯಲ್ಲಿ ಭಾಷೆ, ಶೈಲಿ, ಛಂದಸ್ಸು, ಕಥೆಯ ಹಂದರ, ವಿವರ ಎಲ್ಲವೂ ವಿಭಿನ್ನವಾಗಿ ಕಟ್ಟಲ್ಪಟ್ಟಿರುತ್ತವೆ. ಇಂತಹ ಜಾನಪದ, ಸಾಹಿತ್ಯವನ್ನು ಮುಂದಿನ
ಪೀಳಿಗೆಗೆ ತಲುಪಿಸಬೇಕಾಗಿದೆ. ಹೀಗೆ ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಗಂಗಮ್ಮ ಅವರನ್ನು ಪ್ರಶಸ್ತಿ ಆಯ್ಕೆ ಮಾಡಲಾಗಿದೆ.


