ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಂಪಿಕ್ ಕ್ರೀಡಾಕೂಟದಲ್ಲಿ ಭಾರತೀಯ ಮಹಿಳಾ ಶೂಟರ್ ಅವನಿ ಲೇಖರ ಚಿನ್ನದ ಪದಕ ಗೆಲ್ಲುವ ಮೂಲಕ 2018ರ ವಿಶ್ವದಾಖಲೆಯನ್ನು ಸರಿಗಟ್ಟಿದ್ದಾರೆ. ಪ್ಯಾರಾಲಂಪಿಕ್ ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆ ಅವನಿ ಪಾತ್ರರಾಗಿದ್ದಾರೆ.
10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್ಎಚ್1ನಲ್ಲಿ ಅಂತಿಮ ಸುತ್ತಿನಲ್ಲಿ 249.6 ಅಂಕಗಳನ್ನು ಪಡೆದು ಚಿನ್ನದ ಪದಕ ಗೆದ್ದುಕೊಂಡರು. 2018ರಲ್ಲಿ ಉಕ್ರೇನ್ ನ ಇರಾನ ಚೆಟ್ನಿಕ್ 249.6 ಅಂಕಗಳನ್ನು ಪಡೆದು ವಿಶ್ವದಾಖಲ ಮಾಡಿದ್ದರು. ಈಗ ಅವನಿ ಕೂಡ ಅಷ್ಟೇ ಅಂಕಗಳನ್ನು ಪಡೆಯುವ ಮೂಲಕ ಆ ದಾಖಲೆಯನ್ನು ಸರಿಗಟ್ಟಿದ್ದಾರೆ.
ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದ ಚೀನಾ ಶೂಟರ್ ಕುಪಿಂಗ್ ಝಂಗ್ 248.9 ಅಂಕಗಳನ್ನು ಪಡೆದು ಬೆಳ್ಳಿ ಪದಕ ತನ್ನದಾಗಿಸಿಕೊಂಡರು. ಉಕ್ರೇನ್ ನ ಇರಾನ ಚೆಟ್ನಿಕ್ 227.5 ಅಂಕ ಗಳಿಸಿ ಕಂಚು ಪದಕ ಪಡೆಯಲು ಶಕ್ತರಾದರು. ಇರಾನ 2018ರಲ್ಲಿ ವಿಶ್ವದಾಖಲೆ ಮಾಡಿದ್ದರು.
19 ವರ್ಷದ ಅವನಿ ಜಯಪುರದ ಆಟಗಾರ್ತಿ. 2012ರಲ್ಲಿ ಬೆನ್ನುಹುರಿ ಗಾಯಕ್ಕೆ ತುತ್ತಾಗಿದ್ದರು. ಸತತ ಸಾಧನೆ ಮೂಲಕ ಈ ಬಾರಿ ಅವನಿ ಮಹಿಳಾ ಶೂಟರ್ ವಿಭಾಗದಲ್ಲಿ ಭಾರತಕ್ಕೆ ಚಿನ್ನವನ್ನು ಗೆದ್ದುಕೊಟ್ಟಿದ್ದಾರೆ. ಶೂಟರ್ ಸ್ಪರ್ಧೆ ಕ್ರೀಡಾ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದ್ದಾರೆ ಅವನಿ.