Thursday, January 29, 2026
Google search engine
Homeಮುಖಪುಟಬೈಡೆನ್ ಎಚ್ಚರಿಕೆಯ ಕೆಲ ಗಂಟೆಯಲ್ಲೇ ಕಾಬೂಲ್ ನಲ್ಲಿ ರಾಕೆಟ್ ದಾಳಿ-ಮಗು ಸೇರಿ ಇಬ್ಬರ ಸಾವು

ಬೈಡೆನ್ ಎಚ್ಚರಿಕೆಯ ಕೆಲ ಗಂಟೆಯಲ್ಲೇ ಕಾಬೂಲ್ ನಲ್ಲಿ ರಾಕೆಟ್ ದಾಳಿ-ಮಗು ಸೇರಿ ಇಬ್ಬರ ಸಾವು

ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಉಗ್ರರ ದಾಳಿಯ ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ರಾಕೆಟ್ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಒಂದು ಮಗು ಮತ್ತು ಆಫ್ಘನ್ ಪೊಲೀಸ್ ಮುಖ್ಯಸ್ಥ ಮೃತರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಕಾಬೂಲ್ ನಲ್ಲಿ ವಿದೇಶಿಯರ ಸ್ಥಳಾಂತರ ಪ್ರಕ್ರಿಯೆ ನಡೆಯುತ್ತಿರುವಾಗಲೇ ಇಂದು ಶಂಕಿತ ಉಗ್ರರು ಜನವಸತಿ ಪ್ರದೇಶದ ಮೇಲೆ ರಾಕೆಟ್ ದಾಳಿ ನಡೆಸಿದ್ದು ಇಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಮೃತ ಪೊಲೀಸ್ ಮುಖ್ಯಸ್ಥರನ್ನು ರಶೀದ್ ಎಂದು ಗುರುತಿಸಲಾಗಿದೆ.

ವಾಯವ್ಯ ಕಾಬೂಲ್ ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ರಾಕೆಟ್ ದಾಳಿ ನಡೆದಿದೆ. ಐಎಸ್ ಉಗ್ರರು ಅವಳಿ ಸ್ಪೋಟ ನಡೆಸಿ 180 ಜನರ ಸಾವು ಪ್ರಕರಣ ಹಸಿರಾಗಿರುವಾಗಲೇ ಈಗ ಮತ್ತೊಂದು ದಾಳಿ ನಡೆದಿದೆ. ಇದು ವಿದೇಶಿಯರು ಮತ್ತು ಸ್ಥಳೀಯರನ್ನು ಮತ್ತಷ್ಟು ಭಯಕ್ಕೆ ದೂಡುವಂತೆ ಮಾಡಿದೆ.

ಇನ್ನೊಂದು ಕಡೆ ಉತ್ತರ ಕಾಬೂಲ್ ನಲ್ಲಿ ಜನಪದ ಗಾಯಕರೊಬ್ಬರನ್ನು ಉಗ್ರರು ಕೊಂದು ಹಾಕಿದ್ದಾರೆ. ಅವರ ಅಮಾಯಕರು. ಅವರ ತಲೆಗೆ ಗುಂಡಿಕ್ಕಿ ಹತ್ಯೆಗೈಯಲ್ಲಾಗಿದೆ.

ಮೃತ ಗಾಯಕನ ಪುತ್ರ ತನ್ನ ತಂದೆ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದ್ದಾನೆ ಎಂದು ವರದಿಗಳು ತಿಳಿಸಿವೆ.

ಈ ನಡುವೆ ಅಮೆರಿಕಾ ಅಧ್ಯಕ್ಷ ಜೊ ಬೈಡನ್ ಮುಂದಿನ 36 ಗಂಟೆಗಳಲ್ಲಿ ಮತ್ತೊಂದು ಪ್ರಬಲ ದಾಳಿಯ ಮುನ್ಸುಚನೆ ನೀಡಿದ್ದಾರೆ. ಮೃತ ಅಮೆರಿಕ ಸೈನಿಕರಿಗೆ ಯುಎಸ್ ವಾಯು ನೆಲೆಯಲ್ಲಿ ಅಂತಿಮ ಗೌರವ ಸಲ್ಲಿಸಿ ಈ ಮಾತುಗಳು ಆಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular