Thursday, January 29, 2026
Google search engine
Homeಮುಖಪುಟದೇವರಾಜ ಅರಸು ಪ್ರಶಸ್ತಿಗೆ ಪತ್ರಕರ್ತ ಕಲ್ಲೇಶಿವೋತ್ತಮರಾವ್ ಆಯ್ಕೆ

ದೇವರಾಜ ಅರಸು ಪ್ರಶಸ್ತಿಗೆ ಪತ್ರಕರ್ತ ಕಲ್ಲೇಶಿವೋತ್ತಮರಾವ್ ಆಯ್ಕೆ

ಕರ್ನಾಟಕ ಸರ್ಕಾರ ಕೊಡಮಾಡುವ ದೇವರಾಜ ಅರಸು ಪ್ರಶಸ್ತಿಗೆ ತೊಂಭತ್ತೈದು ವರ್ಷದ ಹಿರಿಯ ಪತ್ರಕರ್ತ ಕಲ್ಲೇಶಿವೋತ್ತಮರಾವ್ ಆಯ್ಕೆಯಾಗಿದ್ದಾರೆ.

ಸುವರ್ಣ ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು (ಕೆಯುಡಬ್ಲ್ಯೂಜೆ) ಕಲ್ಲೇಶಿವೋತ್ತಮರಾವ್ ಮನೆಗೆ ತೆರಳಿ ಮನೆಯಂಗಳದಲ್ಲಿ ಅವರನ್ನು ಗೌರವಿಸಿದರು. 

ಮನೆಯಂಗಳದಲ್ಲಿ ಪತ್ರಕರ್ತರಿಗೆ ಕೆಯುಡಬ್ಲ್ಯೂಜೆ ನಮನ ಕಾರ್ಯಕ್ರಮವನ್ನು ಕಲ್ಲೇ ಅವರ ಮನೆಯಿಂದಲೇ ಪ್ರಾರಂಭಿಸಲಾಗಿತ್ತು. 

ಅಷ್ಟೂ ಪತ್ರಕರ್ತರ ಅನುಭವವನ್ನು ಅಮೃತಬೀಜ ಕೃತಿ ಮೂಲಕ ಕೆಯುಡಬ್ಲ್ಯೂಜೆ ದಾಖಲೀಕರಣ ಮಾಡಿದ್ದು ಈ ಕೃತಿಯನ್ನು ಬಹುರೂಪಿ ಸಂಸ್ಥೆ ಹೊರತಂದಿದೆ ಎಂದು ಶಿವಾನಂದ ತಗಡೂರು ಹೇಳಿದ್ದಾರೆ.

ಹಿರಿಯ ಪತ್ರಕರ್ತರಾದ ಕಲ್ಲೇ ಶಿವೋತ್ತಮರಾವ್ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಭಿನಂದಿಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular