ಹರಿಯಾಣದಲ್ಲಿ ಐಎಎಸ್ ಅಧಿಕಾರಿ ಕರ್ನಲ್ ನಲ್ಲಿ ಪ್ರತಿಭಟಿಸುತ್ತಿದ್ದ ರೈತರ ತಲೆಗೆ ಹೊಡಿಯಿರಿ ಎಂದು ಹೇಳಿರುವುದು ಖಂಡನೀಯ ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹರಿಯಾಣ ಉಪಮುಖ್ಯಮಂತ್ರಿ ದುಷ್ಯಂತ ಚೌಟಾಲ ಭರವಸೆ ನೀಡಿದ್ದಾರೆ.
ಖಾಸಗಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಚೌಟಾಲ “ಕರ್ನಲ್ ಉಪವಿಭಾಗಾಧಿಕಾರಿ ರೈತರ ಬಗ್ಗೆ ಹಾಗೆ ಹೇಳಿರುವುದು ಖಂಡನೀಯ. ಐಎಎಸ್ ಅಧಿಕಾರಿ ವಿರುದ್ಧ ಕ್ರಮ ಖಚಿತ ಎಂದು ಹೇಳಿದ್ದಾರೆ.
ಐಎಎಸ್ ಅಧಿಕಾರಿ ಪ್ರತಿಭಟನಾನಿರ ರೈತರ ತಲೆಗೆ ಹೊಡೆಯಿರಿ’ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಐಎಎಸ್ ಅಧಿಕಾರಿ ಆಯುಶ್ ಸಿನ್ಹಾ 2018ನೇ ಬ್ಯಾಚ್ ನ ಹರಿಯಾಣ ಕೇಡರ್ ಅಧಿಕಾರಿಯಾಗಿದ್ದಾರೆ. ಅವರು ರೈತರ ಕುರಿತು ಮಾತನಾಡಿರುವ ವಿಡಿಯೋ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು.
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋ ನಕಲಿ ಎಂದು ಸಿನ್ಹಾ ಹೇಳಿದ್ದರು. ಅಷ್ಟೇ ಅಲ್ಲ ಲಾಠಿಚಾರ್ಜ್ ನಡೆದ ಮೇಲೆ ವಿಡಿಯೋದಲ್ಲಿನ ಕೆಲ ಆಯ್ದಭಾಗಗಳನ್ನು ಮಾತ್ರ ಎಡಿಟ್ ಮಾಡಿ ಬಿಡಲಾಗಿದೆ ಎಂದು ಸಮರ್ಥಿಸಿಕೊಂಡಿದ್ದರು.