ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ಹಿನ್ನೆಲೆಯಲ್ಲಿ ಸಂಜೆ 6.30ರ ನಂತರ ವಿವಿ ಆವರಣದಲ್ಲಿ ಹೆಣ್ಣುಮಕ್ಕಳು ಓಡಾಟ ನಿಷೇಧಿಸಲಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯ ಆಗಸ್ಟ್ 26ರಂದು ಹೊರಡಿಸಿದ್ದ ವಿವಾದಾತ್ಮಕ ಸುತ್ತೋಲೆಯನ್ನು ಹಿಂಪಡೆದಿದೆ. ಹೋರಾಟಗಾರರು, ಪ್ರಗತಿಪರ ಚಿಂತಕರು, ಸಾಹಿತಿಗಳು, ಲೇಖಕಿಯರು ಮತ್ತು ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಒತ್ತಡಕ್ಕೆ ಮಣಿದ ವಿವಿ ಹಿಂದಿನ ಸುತ್ತೋಲೆಯನ್ನು ವಾಪಸ್ ಪಡೆದಿದೆ.
“ಮೈಸೂರು ವಿವಿಯ ಸುತ್ತೋಲೆಗೆ ವ್ಯಾಪಕ ಖಂಡನೆ ವ್ಯಾಕ್ತವಾಯಿತು. ಇದು ತಾಲಿಬಾನ್ ಆಡಳಿತ, ಗಾಂಧೀ ಕನಸಿಗೆ ವಿರುದ್ಧ, ಮಹಿಳೆಯರ ಹಕ್ಕನ್ನು ಕಿತ್ತುಕೊಂಡಂತೆ, ಮಹಿಳೆ ಇನ್ನೊಂದೂ ಮನೆಯಿಂದ ಹೊರಗೆ ಹೋಗಬಾರದು. ಕೆಲಸ ಮಾಡಬಾರದು. ಇದು ಮನುವಾದವನ್ನು ಮಹಿಳೆಯರ ಮೇಲೆ ಹೇರುವುದಾಗಿದೆ ಎಂದು ಆಕ್ರೋಶ ವ್ಯಕ್ತವಾಗಿತ್ತು.
ಕೊನೆಗೂ ಎಚ್ಚೆತ್ತ ಮೈಸೂರು ವಿವಿ ಕುಲಸಚಿವರು “ಸಂಜೆ 6.30ರ ನಂತರ ಹೆಣ್ಣುಮಕ್ಕಳು ಕ್ಯಾಂಪಸ್ ನಲ್ಲಿ ಓಡಾಡುವುದು, ಕೂರುವುದನ್ನು ನಿಷೇಧಿಸಿದೆ ಎಂಬ ಸುತ್ತೋಲೆಯನ್ನು ಹಿಂಪಡೆದಿರುವುದಾಗಿ ಕುಲಸಚಿವರು ಸ್ಪಷ್ಟಪಡಿಸಿದ್ದಾರೆ.
ವಿವಾದಿತ ಸಾಲುಗಳು ಇದ್ದ ಜಾಗದಲ್ಲಿ ” ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಎಚ್ಚರಿಕೆಯಿಂದ ಇರುವಂತೆ” ಸೂಚಿಸಲಾಗಿದೆ.
ಆದರೆ “ಸಂಜೆ. 6.30ರ ನಂತರ ಕುಕ್ಕರಹಳ್ಳಿ ಕೆರೆ ಪ್ರದೇಶದಲ್ಲಿ ಯಾವುದೇ ವ್ಯಕ್ತಿ ತಿರುಗಾಡುವುದನ್ನು ನಿಷೇಧಿಸಿರುವುದಾಗಿ” ಹಿಂದಿನ ಸುತ್ತೋಲೆಯಲ್ಲಿದ್ದ ಸಾಲುಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಪೊಲೀಸ್ ಇಲಾಖೆಯ ಮೌಖಿಕ ನಿರ್ದೇಶನ ಮೇರೆಗೆ ಈ ಸುತ್ತೋಲೆ ಹೊರಡಿಸಿದೆ ಎಂಬ ಕಾರಣವನ್ನೂ ನೀಡಿದೆ.