Thursday, January 29, 2026
Google search engine
Homeಮುಖಪುಟಕೆಎನ್ಆರ್ 75ನೇ ಜನ್ಮದಿನೋತ್ಸವಕ್ಕೆ ಸಕಲ ಸಿದ್ದತೆ

ಕೆಎನ್ಆರ್ 75ನೇ ಜನ್ಮದಿನೋತ್ಸವಕ್ಕೆ ಸಕಲ ಸಿದ್ದತೆ

ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಅವರ 75ನೇ   ಜನ್ಮದಿನದ ಅಮೃತಮಹೋತ್ಸವ ಮತ್ತು ಅಭಿನಂದನಾ ಗ್ರಂಥದ ಲೋಕಾರ್ಪಣಾ ಕಾರ್ಯಕ್ರಮವನ್ನು ಜೂ. 21ರಂದು ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಎರಡು ಲಕ್ಷ ಜನ ಸೇರುವ ನಿರೀಕ್ಷೆ ಇದ್ದು ಇದು ಇತಿಹಾಸವಾಗಿ ಉಳಿಯಲಿದೆ  ಎಂದು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ತಿಳಿಸಿದರು.

ತುಮಕೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಅವರಣದ ವೇದಿಕೆ ಕಾರ್ಯಕ್ರಮದ ಸಿದ್ಧತೆಗಳನ್ನು ವೀಕ್ಷಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜೇಂದ್ರ, ಕೆ.ಎನ್. ರಾಜಣ್ಣ ಅವರ 75 ನೇ ಹುಟ್ಟು ಹಬ್ಬದ ಅಮೃತಮಹೋತ್ಸವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲ್ಲಿದ್ದಾರೆ. ಸಾಹಿತಿ ನಾಡೋಜ  ಬರಗೂರು ರಾಮಚಂದ್ರಪ್ಪ ಆಶಯ ನುಡಿಗಳನ್ನಾಡುವರು ಎಂದರು.

ಕಾಂಗ್ರೆಸ್ ಹಲವು ಗಣ್ಯ ಮಾನ್ಯರು ಆಗಮಿಸಲಿದ್ದಾರೆ. ಇದು ಶಕ್ತಿ ಪ್ರದರ್ಶನ ಕಾರ್ಯಕ್ರಮವಲ್ಲ, ರಾಜಣ್ಣ ಅವರ ಸ್ನೇಹಿತರೆಲ್ಲಾ ಸೇರಿ ಮಾಡುತ್ತಿರುವ ಕಾರ್ಯಕ್ರಮ. ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಜಲಶಕ್ತಿ ಹಾಗೂ ರಾಜ್ಯ ರೈಲ್ವೆ ಖಾತೆ ಸಚಿವ ವಿ ಸೋಮಣ್ಣ, ಸಚಿವರಾದ ಎಚ್.ಕೆ. ಪಾಟೀಲ್, ಕೆ.ಎಚ್. ಮುನಿಯಪ್ಪ, ಸತೀಶ್ ಜಾರಕಿಹೊಳಿ, ಡಾ ಹೆಚ್ ಸಿ ಮಹದೇವಪ್ಪ, ಎಂ,ಬಿ ಪಾಟೀಲ್, ರಾಮಲಿಂಗರೆಡ್ಡಿ, ಕೆ,ಜೆ.ಜಾರ್ಜ್, ಎನ್ ಚಲುವರಾಯಸ್ವಾಮಿ, ಕೃಷ್ಣ ಬೈರೇಗೌಡ, ದಿನೇಶ್ ಗುಂಡುರಾವ್, ತುಮುಲ್ ಅಧ್ಯಕ್ಷ ಎಚ್‌.ವಿ

ವೆಂಕಟೇಶ್, ಆಂಧ್ರಪ್ರದೇಶದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಘುವೀರರೆಡ್ಡಿ ಮೊದಲಾದವರು ಭಾಗವಹಿಸುವರು ಎಂದು ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಕಲ್ಲಹಳ್ಳಿ ದೇವರಾಜು, ನಾರಾಯಣ, ಮಂಜುನಾಥ್, ಧನಿಯಕುಮಾರ್, ಮುರುಳಿಕೃಷ್ಣಪ್ಪ, ಸಾಹಿತಿಗಳಾದ ಬಾ.ಹ. ರಮಾಕುಮಾರಿ, ಶೈಲ ನಾಗರಾಜು, ಡ್ಯಾಗೇರಹಳ್ಳಿ ವಿರೂಪಾಕ್ಷ, ಡಿಎಸ್ಎಸ್ ಮುರುಳಿ ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular