Thursday, January 29, 2026
Google search engine
Homeಮುಖಪುಟದಿನೇಶ್ ಅಮೀನ್ ಮಟ್ಟು ಸೇರಿ ನಾಲ್ವರು ವಿಧಾನ ಪರಿಷತ್ತಿಗೆ ನಾಮನಿರ್ದೇಶನ-ಅಧಿಕೃತ ಘೋಷಣೆ ಬಾಕಿ

ದಿನೇಶ್ ಅಮೀನ್ ಮಟ್ಟು ಸೇರಿ ನಾಲ್ವರು ವಿಧಾನ ಪರಿಷತ್ತಿಗೆ ನಾಮನಿರ್ದೇಶನ-ಅಧಿಕೃತ ಘೋಷಣೆ ಬಾಕಿ

ಕಳೆದ ಕೆಲವು ದಿನಗಳಿಂದ ಖಾಲಿ ಉಳಿದಿದ್ದ ವಿಧಾನ ಪರಿಷತ್ತಿನ ನಾಲ್ಕು ನಾಮಕರಣ ಸದಸ್ಯ ಸ್ಥಾನಕ್ಕೆ ರಾಜ್ಯ ಸರ್ಕಾರ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.

ರಾಜ್ಯ ಕಾಂಗ್ರೆಸ್ ವಕ್ತಾರ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು, ಅನಿವಾಸಿ ಭಾರತೀಯರ ಒಕ್ಕೂಟದ ಉಪಾಧ್ಯಕ್ಷ ಡಾ. ಆರತಿ ಕೃಷ್ಣ, ದಲಿತ ಹೋರಾಟಗಾರ ಡಿ.ಜಿ. ಸಾಗರ್ ಮತ್ತು ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರ ಹೆಸರುಗಳನ್ನು ಹೈಕಮಾಂಡ್ ಅಂತಿಮಗೊಳಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ರವಾನಿಸಿದ್ದ ಈ ಪಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ಅನುಮೋದನೆ ನೀಡಿದ್ದು ಇದೀಗ ರಾಜ್ಯಪಾಲರಿಗೆ ಪಟ್ಟಿ ರವಾನೆಯಾಗಿದೆ.

ಸಮಾಜ ಸೇವೆ, ಶಿಕ್ಷಣ, ಸಹಕಾರ, ಮಾಧ್ಯಮ ಮತ್ತು ಸಾಮಾಜಿಕ ಹೋರಾಟ ಖೋಟಾದಲ್ಲಿ ಈ ನಾಲ್ವರನ್ನು ನಾಮಕರಣ ಮಾಡಲಾಗುತ್ತಿದೆ. ಇದರಲ್ಲಿ ಮೂವರ ಅಧಿಕಾರ ಅವಧಿ ಆರು ವರ್ಷಗಳು ಇರಲಿದೆ. ಉಳಿದ ಒಬ್ಬರ ಅಧಿಕಾರವಧಿ ಕೇವಲ ಒಂಬತ್ತು ತಿಂಗಳು ಮಾತ್ರ ಇದೆ.

ಸಮಾಜಸೇವೆ ಖೋಟಾದಡಿಯಲ್ಲಿ ನಾಮಕರಣ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಾಜಿ ಮಂತ್ರಿ ಸಿಪಿ ಯೋಗೇಶ್ವರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ ಹಿನ್ನೆಲೆಯಲ್ಲಿ ಅವರ ಸ್ಥಾನ ಖಾಲಿ ಉಳಿದಿತ್ತು. ಆ ಸ್ಥಾನಕ್ಕೆ ನೇಮಕವಾಗುವ ಅಭ್ಯರ್ಥಿಯ ಅವಧಿ ಕೇವಲ ಒಂಬತ್ತು ತಿಂಗಳ ಮಾತ್ರ ಇರಲಿದೆ.

ಉಳಿದಂತೆ ಮೂರು ಸದಸ್ಯರ ಅಧಿಕಾರ ಅವಧಿ ಆರು ವರ್ಷಗಳು ಇರಲಿದೆ. ಈ ನಾಲ್ವರ ನಾಮಕರಣದೊಂದಿಗೆ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಬಹುಮತ ಪಡೆಯಲಿದ್ದು ಪರಿಷತ್ ಸಭಾಪತಿ ಮತ್ತು ಉಪ ಸಭಾಪತಿ ಸ್ಥಾನ ಕೂಡ ಕಾಂಗ್ರೆಸ್ಸಿಗೆ ಸಿಗಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular