Thursday, January 29, 2026
Google search engine
Homeಮುಖಪುಟಲೇಖಕಿ ಜಾಹ್ನವಿ ಅವರ ಮುಟ್ಟಿಸಿಕೊಂಡವರು ಕೃತಿ ಬಿಡುಗಡೆ

ಲೇಖಕಿ ಜಾಹ್ನವಿ ಅವರ ಮುಟ್ಟಿಸಿಕೊಂಡವರು ಕೃತಿ ಬಿಡುಗಡೆ

ಬೀ ಕಲ್ಚರ್ ಪ್ರಕಾಶನ ಹೊರತಂದಿರುವ ಲೇಖಕಿ ಜಾಹ್ನವಿ ಅವರ ಮುಟ್ಟಿಸಿಕೊಂಡವರು ಕೃತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ವರ್ಗಕ್ಕೆ ಚಲನೆ ಇದೆ. ಇದರಲ್ಲಿ ಬಡವ ಶ್ರೀಮಂತನಾಗಬಹುದು, ಶ್ರೀಮಂತ ಬಡವನಾಗಬಹುದು. ಆದರೆ ಜಾತಿಗೆ ಚಲನೆ ಇಲ್ಲ. ಅದು ನಿಂತ ನೀರಾಗಿಯೇ ಇರುತ್ತದೆ. ನಾನು ಕುರುಬನಾಗಿ ಹುಟ್ಟಿದ್ದೇನೆ. ಕುರುಬನಾಗಿಯೇ ಇರಬೇಕು. ಪಿ.ಜಿ.ಆರ್.ಸಿಂಧ್ಯಾ ಮರಾಟಿಯಾಗಿ ಹುಟ್ಟಿದ್ದಾರೆ. ಅವರು ಮರಾಟಿಯಾಗಿಯೇ ಇರಬೇಕು. ಹೀಗಾಗಿ ವರ್ಗಕ್ಕೆ ಚಲನೆ ಇದೆ. ಆದರೆ ಜಾತಿಗೆ ಚಲನೆ ಇಲ್ಲ. ಆದ್ದರಿಂದ ಸಾಮಾಜಿಕ ತಾರತಮ್ಯ, ಜಾತಿ ವ್ಯವಸ್ಥೆ ಹೋಗುವವರೆಗೂ ಕೆನೆ ಪದರವನ್ನು ಅಳವಡಿಸಬಾರದು ಎಂದು ತಿಳಿಸಿದರು.

ಆದರೆ ಈಗಿನ ಪರಿಸ್ಥಿತಿಯಲ್ಲಿ ಕ್ರಿಮಿಲೇಯರ್ ಬರುವ ಅವಶ್ಯಕತೆ ಇಲ್ಲ. ಎಲ್ಲರಿಗೂ ಸಮಾನತೆ ಬಂದಾಗ ಕ್ರಿಮಿಲೇಯರ್ ತಾನಾಗಿಯೇ ಬರುತ್ತದೆ ಎಂದರು.

ಜಾಹ್ನವಿ ಬರೆದಿರುವ ‘ಮುಟ್ಟಿಸಿಕೊಂಡವರು’ ಕೃತಿಯನ್ನು ಬಿಡುಗಡೆಗೊಳಿಸಿರುವುದು ನನಗೆ ಸಂತಸ ತಂದಿದೆ ಎಂದು ಹೇಳಿದರು.

ತಿಪ್ಪೇಸ್ವಾಮಿಯವರು ಜನಪರ ವಿಚಾರಗಳಲ್ಲಿ ಮುಲಾಜು ನೋಡದೆ ಮಾತನಾಡುತ್ತಿದ್ದರು. ಸತ್ಯವನ್ನು ಅತ್ಯಂತ ನಿಷ್ಠುರವಾಗಿ ಹೇಳುತ್ತಿದ್ದರು. ಈ ಕಾರಣಕ್ಕಾಗಿ ಅವರು ಹಲವು ಬಾರಿ ಸತ್ಯ ಹೇಳಿ ಸಮಸ್ಯೆಗೆ ಸಿಕ್ಕಿಕೊಂಡರು. ಡಾ.ತಿಪ್ಪೇಸ್ವಾಮಿಯವರ ಜೊತೆ ನಾನೂ 1985 ರಿಂದ ಶಾಸಕನಾಗಿದ್ದೆ. ಸಚಿವರಾಗುವ ಎಲ್ಲಾ ಅರ್ಹತೆಗಳಿದ್ದರೂ  ಶಾಸಕಾಂಗ ಪಕ್ಷದ ಉಪನಾಯಕರಾದರೇ ಹೊರತು ಸಚಿವರಾಗಲಿಲ್ಲ ಎನ್ನುವ ಬೇಸರ ನನಗೂ ಇದೆ ಎಂದು ಹೇಳಿದರು. 

ಅಸ್ಪೃಶ್ಯತೆ ಸಮಾಜಕ್ಕೆ ಅಂಟಿದ ಶಾಪ. ಅಸ್ಪೃಶ್ಯ ಸಮಾಜದಿಂದ ಬಂದ ಅತ್ಯಂತ ಪ್ರತಿಭಾವಂತ ವೈದ್ಯರಾಗಿದ್ದರು. ಶಿಕ್ಷಣವು ಅಸ್ಪೃಶ್ಯತೆ ಮತ್ತು ದಾಸ್ಯದಿಂದ ಮುಕ್ತಿ ದೊರಕಿಸಿಕೊಡುತ್ತದೆ. ತಿಪ್ಪೇಸ್ವಾಮಿಯವರು ತಮ್ಮ‌ ಸಮಾಜ, ಸಮುದಾಯದ ಪ್ರಗತಿ ಮತ್ತು ಅಭಿವೃದ್ಧಿಗೆ ಸದಾ ತುಡಿಯುತ್ತಿದ್ದರು. ಅಂಬೇಡ್ಕರ್ ಅವರೂ ಕೂಡ ಇಡೀ ಸಮಾಜ ಮತ್ತು ಸಮುದಾಯಕ್ಕಾಗಿ ತಮ್ಮ ಶಿಕ್ಷಣ ಮತ್ತು ಜ್ಞಾನವನ್ನು ಮುಡಿಪಾಗಿಟ್ಟು ಹೋರಾಡಿದರು. ಈಗ ಬಹಳಷ್ಟು ಮಂದಿ ಶಿಕ್ಷಿತರು ತಮ್ಮ ಸಮುದಾಯದಿಂದ ದೂರ ಉಳಿಯುತ್ತಾರೆ. ಆದರೆ ತಿಪ್ಪೇಸ್ವಾಮಿ ಅವರು ಇದಕ್ಕೆ ಅಪವಾದವೆಂಬಂತ ಮನುಷ್ಯ ಎಂದು ತಿಳಿಸಿದರು.

ಮುಟ್ಟಿಸಿಕೊಂಡವರು ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಎಚ್.ಆಂಜನೇಯ, ಪಿ.ಜಿ.ಆರ್.ಸಿಂಧ್ಯಾ, ರಾಜ್ಯಸಭಾ ಮಾಜಿ ಸದಸ್ಯ ಎಲ್.ಹನುಮಂತಯ್ಯ, ಕೃತಿಕಾರ್ತಿ ಜಾಹ್ನವಿ, ಲೇಖಕಿ ಡಾ.ದು.ಸರಸ್ವತಿ, ಲೇಖಕ ಮೋಹನ್ ಕೊಂಡಜ್ಜಿ, ಚಿಂತಕಿ ವಿ.ಎಲ್.ನರಸಿಂಹಮೂರ್ತಿ, ದಲಾವರ್ ರಾಮದುರ್ಗ, ವಿಷ್ಣು ಕುಮಾರ್ ಮೊದಲಾದವರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular