ಕಾರ್ಮಿಕ ಮುಖಂಡರು, ವಕೀಲರು ಅಗಿದ್ದ ತಿಮ್ಮೇಗೌಡ ನಿಧನರಾಗಿದ್ದು ಸಾವಿರಾರು ಸಂಗಾತಿಗಳನ್ನು ಅಗಲಿದ್ದಾರೆ.
1970 ದಶಕದಲ್ಲಿ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಕುಗ್ರಾಮ ಒಂದರಲ್ಲಿ ಜನಿಸಿದ ಅವರು ವಿದ್ಯಾರ್ಥಿ ದೆಸೆಯಲ್ಲಿ ಎಸ್.ಎಫ್.ಐ ಸೇರಿ ವಿದ್ಯಾರ್ಥಿ ಚಳುವಳಿಯನ್ನು ಮುನ್ನಡೆಸಿದರು. ಸಮುದಾಯ ಸಾಂಸ್ಕ್ರತಿಕ ಸಂಘಟನೆಯಲ್ಲಿ ಸಕ್ರಿಯವಾಗಿ ವೈಜ್ಞಾನಿಕ ಮನೋಭಾವ ಮೂಡಿಸುವ ಕೆಲಸಕ್ಕೆ ಹಿರಿಯ ಸಾಹಿತಿ, ಹೆಚ್. ಎಸ್. ಶಿವಪ್ರಕಾಶ್, ಲೋಹಿತಾಶ್ವ, ಸಿ.ಯತಿರಾಜು., ಡಾ; ಹೆಚ್. ಎಸ್. ನಿರಂಜನಾರಾಧ್ಯ, ಸೂರಿ, ಮತ್ತಿತರರ ಜೊತೆಯಲ್ಲಿ ದುಡಿದಿದ್ದಾರೆ.
ಹಿರಿಯ ಕಾರ್ಮಿಕ ನಾಯಕರಾಗಿದ್ದ ಕೆ.ಆರ್ .ನಾಯಕ್, ಹಾಗಲವಾಡಿ ಚನ್ನಪ್ಪ, ಮಹಮದ್ ದಸ್ತಗೀರ್, ಬಿ.ಡಿರಾಮಯ್ಯ ಜೊತೆಗಾರರಾಗಿ ದುಡಿದರು. ಕಾರ್ಮಿಕ ಸಂಘಟನೆ, ಸಿಪಿಐಎಂನಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ.
ತಿಮ್ಮೇಗೌಡರ ಪಾರ್ಥೀವ ಶರೀರವನ್ನು ಅವರ ಸ್ವಗ್ರಾಮ ತಿಪಟೂರಿನ ಅಲೇನಹಳ್ಳಿ ಗೊಲ್ಲರಹಟ್ಟಿ ಬಳಿ ದಪನ್ ಮಾಡಲಾಯಿತು.


