ತುಮಕೂರು ನೆಲದಿಂದ ಮೂಡಿಬಂದ ಸಮಾಜಮುಖಿ ಚಿಂತಕರು ಮತ್ತು ಹೋರಾಟಗಾರರು ಆದ ಕೆ ದೊರೈರಾಜ್ ಮತ್ತು ಕುಂದೂರು ತಿಮ್ಮಯ್ಯ ಅವರಿಗೆ ಬಾಬು ಜಗಜೀವನ ರಾಂ ಪ್ರಶಸ್ತಿ ಲಭಿಸಿರುವುದಕ್ಕೆ ಇಬ್ಬರು ಮಹನೀಯರಿಗೆ ನಿವೃತ್ತ ಪ್ರಾಂಶುಪಾಲ ಎಂ.ಎಚ್.ನಾಗರಾಜ್ ಅಭಿನಂದನೆಗಳನ್ನು ತಿಳಿಸಿದ್ದಾರೆ.
ದೊರೈರಾಜ್ ಮತ್ತು ಕುಂದೂರು ತಿಮ್ಮಯ್ಯ ಅವರ ಬದುಕು ಬವಣೆ ಚಿಂತನೆ ಹೋರಾಟ ಹುಡುಕಾಟಗಳನ್ನು ಕುರಿತು ತಿಳಿಯಲು “ಏಕತೆಯ ಹೋರಾಟಗಾರ” ಮತ್ತು “ಅಂಗುಲಿಮಾಲ” ಕೃತಿಗಳನ್ನು ಅವಲೋಕಿಸಬಹುದು ಎಂದಿದ್ದಾರೆ.

ಈ ಇಬ್ಬರು ಮಹನೀಯರು ಕರ್ನಾಟಕ ರಾಜ್ಯ ಸರ್ಕಾರ ಕೊಡಮಾಡುವ ಬಾಬು ಜಗಜೀವನರಾಂ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇವರಿಗೆ ತುಮಕೂರು ಜನರ ಪರವಾಗಿ ಅಭಿನಂದನೆಗಳು ಎಂದು ಹೇಳಿದ್ದಾರೆ.
ಈ ಇಬ್ಬರು ಸಾಧಕರನ್ನು ಪ್ರಶಸ್ತಿಗೆ ಪರಿಗಣಿಸಿದ ಆಯ್ಕೆ ಸಮಿತಿ ಅಧ್ಯಕ್ಷರೂ ಮತ್ತು ಲೇಖಕರೂ ಆಗಿರುವ ಪ್ರೊಫೆಸರ್ ಎಸ್ ಜಿ ಸಿದ್ಧರಾಮಯ್ಯ ಅವರಿಗೆ ಕೃತಜ್ಞತೆಗಳನ್ನು ತಿಳಿಸಿದ್ದಾರೆ.
ಒಂದು ಚಳವಳಿಯ ಸಖರಾದ ಕೆ. ದೊರೈರಾಜ್, ಕುಂದೂರು ತಿಮ್ಮಯ್ಯ ಅವರಿಗೆ ಬಾಬುಜಿ ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ ಎಂದು ಅಧ್ಯಾಪಕ ಡಾ.ಶಿವಣ್ಣ ತಿಮ್ಲಾಪುರ ತಿಳಿಸಿದ್ದಾರೆ.


