ತುಮಕೂರು ಮಹಾನಗರದ ಪಾಲಿಕೆ ಆವರಣದ ಕೃಷ್ಣರಾಜೇಂದ್ರ ಪುರಭವನ ಮುಂಭಾಗದಲ್ಲಿ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ರವರ 12 ಅಡಿ ಎತ್ತರದ ಕಂಚಿನ ಪ್ರತಿಮೆ ಏಪ್ರಿಲ್ 14ರಂದು ಲೋಕಾರ್ಪಣೆಗೊಳ್ಳಲು ಸಿದ್ಧವಾಗುತ್ತಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಪರಮೇಶ್ವರ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಆಯುಕ್ತೆ ಅಶ್ವಿಜ, ಎಸ್.ಪಿ ಅಶೋಕ್ ಇದ್ದರು.
ದಲಿತ ಸಂಘಟನೆಗಳ ಬಹುದಿನದ ಬೇಡಿಕೆಯಾದ ನಗರದ ಪ್ರಮುಖ ಸ್ಥಳದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಬೇಕು ಎಂಬುದು ಇದೀಗ ನನಸಾಗುತ್ತಿದೆ.