Thursday, March 13, 2025
Google search engine
Homeಮುಖಪುಟಒಡವೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

ಒಡವೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ಬೆಲೆ ಬಾಳುವ ಚಿನ್ನದ ಒಡವೆಗಳನ್ನು ಆಟೋ ಚಾಲಕರೊಬ್ಬರು ವಾರಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರು ನಗರದ ಹನುಮಂತಪುರ ನಿವಾಸಿ ರವಿಕುಮಾರ್ ಎಂಬುವರೇ ವಾರಸುದಾರರಿಗೆ ಚಿನ್ನದ ಒಡವೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ.
ಹಾಸನ ಜಿಲ್ಲೆಯ ಅರಸೀಕೆರೆ ಮೂಲದ ಗಾಯತ್ರಿ ಎಂಬುವರು 4 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನದ ಒಡವೆಗಳಿದ್ದ ಬ್ಯಾಗ್‌ನ್ನು ಆಟೋದಲ್ಲಿ ಬಿಟ್ಟು ಹೋಗಿದ್ದರು. ಈ ಚಿನ್ನದ ಒಡವೆಗಳಿದ್ದ ಬ್ಯಾಗ್‌ನ್ನು ಆಟೋ ಚಾಲಕ ರವಿಕುಮಾರ್ ಅವರು ಗಾಯತ್ರಿ ಅವರಿಗೆ ವಾಪಸ್ ನೀಡಿದ್ದು, ಆಟೋ ಚಾಲಕ ರವಿಕುಮಾರ್‌ರವರಿಗೆ ಗಾಯತ್ರಿ ಕೃತಜ್ಞತೆ ಸಲ್ಲಿಸಿದ್ದಾರೆ.
ಗಾಯತ್ರಿ ಅವರು ಕುಂದೂರು ಗ್ರಾಮದಲ್ಲಿ ತಮ್ಮ ಸಂಬಂಧಿಕರೊಬ್ಬರ ಮನೆಗೆ ಸೀಮಂತ ಕಾರ್ಯಕ್ರಮಕ್ಕೆ ಬಂದಿದ್ದರು. ಸೀಮಂತ ಮುಗಿದ ಮೇಲೆ ಮೂವರು ಆಟೋದಲ್ಲಿ ಬಸ್ ನಿಲ್ದಾಣಕ್ಕೆ ತೆರಳಿದ್ದರು. ಆಟೋದಿಂದ ಬಸ್ ನಿಲ್ದಾಣದಲ್ಲಿ ಇಳಿಯುವಾಗ ಮಹಿಳೆ ಚಿನ್ನದ ಆಭರಣಗಳು ಇರುವ ಬ್ಯಾಗ್ ಮರೆತು ಹೋಗಿದ್ದರು. ಬಳಿಕ ಸ್ವಲ್ಪ ದೂರ ಹೋದ ಮೇಲೆ ನೆನಪು ಮಾಡಿಕೊಂಡು ವಾಪಸ್ ಬಂದು ಆಟೋಗಾಗಿ ಹುಡುಕಾಡಿದ್ದಾರೆ. ಇತ್ತ ಆಟೋ ಚಾಲಕ ಕೂಡ ಆಕೆಗಾಗಿ ಹುಡುಕಾಡಿದ್ದಾರೆ.
ಆಟೋ ಸಿಗದಿದ್ದಕ್ಕೆ ಮಹಿಳೆ ಪೊಲೀಸ್ ಠಾಣೆಗೆ ದೂರು ಕೊಡಲು ಬಂದಿದ್ದರು. ಇತ್ತ ಚಾಲಕ ಕೂಡ ಮಹಿಳೆ ಕಾಣದಿದ್ದಕ್ಕೆ ಬ್ಯಾಗ್ ವಾಪಸ್ ಕೊಡಬೇಕು ಎಂದು ಪೊಲೀಸ್ ಠಾಣೆಗೆ ಬಂದಿದ್ದಾರೆ. ಠಾಣೆಯಲ್ಲಿ ಚಾಲಕನನ್ನು ನೋಡಿದ ಮಹಿಳೆ ಫುಲ್ ಖುಷಿಯಾಗಿ ನಿಟ್ಟುಸಿರು ಬಿಟ್ಟಿದ್ದಾರೆ.
ಬ್ಯಾಗ್‌ನಲ್ಲಿ ಸುಮಾರು 4 ಲಕ್ಷ ರೂಪಾಯಿಯ ಬೆಲೆ ಬಾಳುವ 52 ಗ್ರಾಂ ನಷ್ಟು ಚಿನ್ನಾಭರಣ ತಮ್ಮ ಕೈಸೇರಿದ್ದಕ್ಕೆ ಗಾಯತ್ರಿ ಸಂತಸ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular