ರಾಕೇಶ್ ಆಸ್ಥಾನ ಅವರನ್ನು ದೆಹಲಿಯ ಪೊಲೀಸ್ ಆಯುಕ್ತರನ್ನಾಗಿ ನೇಮಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ರದ್ದುಗೊಳಿಸುವ ಮನವಿಯನ್ನು ದೆಹಲಿ ಹೈಕೋರ್ಟ್ ಎರಡು ವಾರಗಳಲ್ಲಿ ತೀರ್ಮಾನಿಸಬೇಕು ಎಂದು ಸರ್ವೋಚ್ಛ ನ್ಯಾಯಾಲಯ ಬುಧವಾರ ಆದೇಶಿಸಿದೆ.
ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ಅವರು ಆಸ್ಥಾನ ಅವರನ್ನು ನೇಮಕ ಮಾಡುವ ಕೇಂದ್ರ ಸರ್ಕಾರದ ಪ್ರಸ್ತಾವನ್ನೆಯನ್ನು ತಿರಸ್ಕರಿಸಿದ ಸಮಿತಿಯ ಭಾಗವಾಗಿದ್ದರಿಂದ ಈ ವಿಷಯದ ಕುರಿತು ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೆ ಕಾದಿರಿಸಿದರು.
ಇಲ್ಲಿ ಎರಡು ಸಮಸ್ಯೆಗಳಿವೆ. ಒಂದು ಸಿಬಿಐ ಆಯ್ಕೆ ವಿಷಯದಲ್ಲಿ ನಾನು ಈ ವ್ಯಕ್ತಿಯ ಬಗ್ಗೆ ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ನೀವು ಹೇಳಿದಂತೆ ಈ ವಿಷಯದಲ್ಲಿ ನನ್ನ ಭಾಗವಹಿಸುವಿಕೆ ಇದು’ ಎಂದು ಸಿಐಜೆ ಹೇಳಿದರು.
ವಿಚಾರಣೆ ಸಮಯದಲ್ಲಿ ಇದೇ ರೀತಿಯ ಅರ್ಜಿಯು ದೆಹಲಿ ಹೈಕೋರ್ಟ್ ನಲ್ಲಿ ಬಾಕಿ ಇದೆ ಎಂದು ಪೀಠದ ಗಮನ ಸೆಳೆಯಲಾಯಿತು. ಆದ್ದರಿಂದ ನ್ಯಾಯಾಲವು ಎರಡು ವಾರಗಳಲ್ಲಿ ಈ ವಿಷಯವನ್ನು ಇತ್ಯರ್ಥಪಡಿಸುವಂತೆ ಹೈಕೋರ್ಟ್ ಗೆ ನಿರ್ದೇಶನ ನೀಡಲು ಮುಂದಾಗಿದೆ ಎಂದು ನ್ಯಾಷನಲ್ ಹೆರಾಲ್ಡ್ ವರದಿ ಮಾಡಿದೆ.
ಇದೇ ವಿಷಯವನ್ನು ಮತ್ತೊಂದು ಪೀಠದ ಮುಂದೆ ಎರಡು ವಾರಗಳ ನಂತರ ಅರ್ಜಿಯನ್ನು ಪಟ್ಟಿ ಮಾಡುವಂತೆಯೂ ಮತ್ತು 2 ವಾರಗಳಲ್ಲಿ ಮನವಿಯನ್ನು ವಿಲೇವಾರಿ ಮಾಡಲು ಹೈಕೋರ್ಟ್‌ಗೆ ತಿಳಿಸಿದೆ. ಎರಡು ವಾರಗಳ ನಂತರ ಈ ಪ್ರಕರಣವನ್ನು ಇಲ್ಲಿ ಪಟ್ಟಿ ಮಾಡಿ. 2 ವಾರಗಳ ನಂತರ ಬೇರೆ ಯಾವುದೇ ಪೀಠದ ಮುಂದೆ ಈ ಮನವಿಯನ್ನು ಪಟ್ಟಿ ಮಾಡಿ” ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ವಿಚಾರಣೆಯ ಸಮಯದಲ್ಲಿ, ಸಾರ್ವಜನಿಕ ಹಿತಾಸಕ್ತಿ ದಾವೆಯ ಅರ್ಜಿದಾರರ ಎನ್‌ಜಿಒ ಪರ ಹಾಜರಾದ ವಕೀಲ ಪ್ರಶಾಂತ್ ಭೂಷಣ್ ಅವರು, ಹೈಕೋರ್ಟ್‌ನ ಮುಂದೆ ಇರುವ ಮನವಿ ನಿಜವಾದ ಅರ್ಜಿದಾರರನ್ನು ನಿಷ್ಕ್ರಿಯಗೊಳಿಸಲು ಸರ್ಕಾರದೊಂದಿಗೆ ಶಾಮೀಲಾಗಿ ಇಂತಹ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಹೇಳಿದರು.
“ನಿಮ್ಮ ಆತಂಕ ತೊಡೆದುಹಾಕಲು ನಾವು ಹೈಕೋರ್ಟ್‌ನಲ್ಲಿ ಸಬ್ಸ್ಟಾಂಟಿವ್ ಮನವಿ ಸಲ್ಲಿಸಲು ಸ್ವಾತಂತ್ರ್ಯ ನೀಡಬಹುದು, ನಂತರ ನಿಮಗೆ ಮೇಲ್ಮನವಿ ಸಲ್ಲಿಸುವ ಹಕ್ಕಿದೆ” ಎಂದು ಪೀಠದಲ್ಲಿದ್ದ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಹೇಳಿದರು. “ಅರ್ಜಿದಾರರು ಹೈಕೋರ್ಟ್‌ನಲ್ಲಿ ಸಬ್ಸ್ಟಾಂಟಿವ್ ಅರ್ಜಿ ಸಲ್ಲಿಸಲು ಅನುಮತಿ ನೀಡಿದ್ದಾರೆ” ಎಂದು ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.