Friday, October 18, 2024
Google search engine
Homeಮುಖಪುಟಸಚಿವ ನಾರಾಯಣ ರಾಣೆ ಬಂಧನ ನ್ಯಾಯಯುತ - ಕೋರ್ಟ್

ಸಚಿವ ನಾರಾಯಣ ರಾಣೆ ಬಂಧನ ನ್ಯಾಯಯುತ – ಕೋರ್ಟ್

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧಿಸಿದ್ದ ಕೇಂದ್ರ ಸಚಿವ ನಾರಾಯಣ ರಾಣೆ ಅವರಿಗೆ ಜಾಮೀನು ದೊರೆತಿದ್ದು ಚೀಪ್ ಜುಡಿಸಿಯಲ್ ಮ್ಯಾಜಿಸ್ಟ್ರೇಟ್ ಫಸ್ಟ್ ಕ್ಲಾಸ್ ನ್ಯಾಯಾಲಯ ಸೆಪ್ಟೆಂಬರ್ 4ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ. ಜೊತೆ ರಾಣೆ ಬಂಧನ ನ್ಯಾಯಸಮ್ಮತವಾಗಿದೆ ಎಂದು ಕೋರ್ಟ್ ಹೇಳಿದೆ.

ಪೊಲೀಸರು ರಾಣೆ ಅವರನ್ನು ಬಂಧಿಸಿರುವುದು ನ್ಯಾಯಯುತವಾಗಿದೆ. ಆದರೆ ಅವರನ್ನು ಜೈಲಿನಲ್ಲಿಡುವ ಅವಶ್ಯಕತೆ ಇಲ್ಲ ಎಂದು ಆಗಸ್ಟ್ 24ರ ತಡರಾತ್ರಿ ನ್ಯಾಯಾಲಯಕ್ಕೆ ರಾಣೆ ಅವರನ್ನು ಹಾಜರುಪಡಿಸಿದಾಗ ನ್ಯಾಯಾಧೀಶರು ಹೇಳಿದರು ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ತಿಳಿಸಿದೆ.

ರಾಣೆ ಪರ ವಕೀಲರು, “ಪೊಲೀಸರು ಕಸ್ಟಡಿಯಲ್ಲಿ ವಿಚಾರಣೆ ನಡೆಸುವುದನ್ನು ವಿರೋಧಿಸಿದರು. ನಾರಾಯಣ ರಾಣೆ ವಿರುದ್ಧ ದಾಖಲಾಗಿರುವ ಅರೋಪಗಳು ಮೂರು ವರ್ಷ ಮೇಲ್ಪಟ್ಟು ಶಿಕ್ಷೆಗೆ ಗುರಿಪಡಿಸುವುದಿಲ್ಲ. ಹಾಗಾಗಿ ಜಾಮೀನು ನೀಡುವಂತೆ ಕೋರಿದರು.

ಈ ಸಂದರ್ಭದಲ್ಲಿ ನ್ಯಾಯಾಧೀಶರು, ಪೊಲೀಸರು ಯಾವುದೇ ಪೂರ್ವಗ್ರಹದಿಂದ ಪ್ರಕರಣ ದಾಖಲಿಸಿಲ್ಲ. ಪೊಲೀಸ್ ಡೈರಿಯ ಪ್ರಕ್ರಿಯೆಯನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ. ಇದು ಒಂದು ರೀತಿಯಲ್ಲಿ ಎರಡು ಎಲೆಯ ಪೇಪರ್ ಇದ್ದಂತೆ ಎಂದು ಹೇಳಿದರು.

ನಾರಾಯಣ ರಾಣೆ ಅವರನ್ನು ಪೊಲೀಸರ ವಶಕ್ಕೆ ನೀಡುವಂತಹ ಅವಶ್ಯಕತೆ ಇಲ್ಲ. ಸೆ.4ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತೇನೆ ಎಂದು ನ್ಯಾಯಾಧೀಶರು ತಿಳಿಸಿದರು.

ರಾಣೆ ಮೇಲೆ ಹಾಕಿರುವ ಪ್ರಕರಣಗಳು ಸಮುದಾಯದಲ್ಲಿ ಅಶಾಂತಿ ಸೃಷ್ಟಿ, 153ಎ, 1,(ಬಿ) ದ್ವೇಷ ಹರಡುವುದು, ಸಾರ್ವಜನಿಕರಲ್ಲಿ ತಪ್ಪು ಮಾಹಿತಿ ಹರಡುವುದು ಜಾಮೀನು ನೀಡುವಂತಹ ಸೆಕ್ಷನ್ ಗಳಾಗಿವೆ. ಹಾಗಾಗಿ ಆರೋಪಿಗೆ ಷರತ್ತು ಮತ್ತು ನಿರ್ಬಂಧಿತ ಜಾಮೀನು ನೀಡುವುದಾಗಿ ಹೇಳಿದರು.

ಆರೋಪಿ ತನಿಖೆಗೆ ಅಡ್ಡಿಪಡಿಸಬಾರದು, ತನಿಖಾಧಿಕಾರಿಯ ತನಿಖೆಗೆ ಸಹಕರಿಸಬೇಕು. ಆಗಸ್ಟ್ 30 ಮತ್ತು ಸೆಪ್ಟೆಂಬರ್ 13ರಂದು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಖುದ್ದು ಹಾಜರಾಗಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular