Sunday, February 16, 2025
Google search engine
Homeಮುಖಪುಟ'ಸಮ ಸಮಾಜದ ಆಶಯ ಸಂವಿಧಾನದಲ್ಲಿ ಅಡಗಿದೆ'-ನಟ ಚೇತನ್

‘ಸಮ ಸಮಾಜದ ಆಶಯ ಸಂವಿಧಾನದಲ್ಲಿ ಅಡಗಿದೆ’-ನಟ ಚೇತನ್

ಬುದ್ಧ, ಬಸವ, ಅಂಬೇಡ್ಕರ್ ವಾದದಲ್ಲಿ ಸಮಾನತ ವಾದವಿದೆ. ನಮ್ಮ ಸಂವಿಧಾನದಲ್ಲಿಯೇ ಈ ಆಶಯ ಅಡಗಿದ್ದು ಸಮ ಸಮಾಜವನ್ನು ಕಟ್ಟುವ ಸಂಕಲ್ಪ ನಾವು ಕೈಗೊಳ್ಳಬೇಕು ಎಂದು ನಟ ಹಾಗೂ ಹೋರಾಟಗಾರ ಚೇತನ್ ಅಹಿಂಸಾ  ತಿಳಿಸಿದರು.

ತುಮಕೂರು ನಗರದ ಕನ್ನಡ ಭವನದಲ್ಲಿ ಅಂಬೇಡ್ಕರ್ ಕೋಚಿಂಗ್ ಸೆಂಟರ್ ದಶಮಾನೋತ್ಸವ ಹಾಗೂ ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಉದ್ಘಾಟನೆಯ ಸಮಾರಂಭದಲ್ಲಿ ಅವರು ಮಾತನಾಡಿದರು. 

ರಾಜಕೀಯ ಪಕ್ಷಗಳು, ಅಸ್ತಿತ್ವಕ್ಕೆ ಬಂದಿರುವ ಸರ್ಕಾರಗಳು ಈ ಸಂವಿಧಾನವನ್ನು ಎತ್ತಿ ಹಿಡಿಯುತ್ತಿಲ್ಲ. ಸಮ ಸಮಾಜದ  ಕನಸು ಕಂಡ, ಸಮ ಸಮಾಜವನ್ನು ತರಬೇಕೆಂಬ ಆಸೆ ಹೊತ್ತಿರುವ ನಾವು ಸಂವಿಧಾನವನ್ನು ಎತ್ತಿ ಹಿಡಿಯುತ್ತಿದ್ದೇವೆ, ಇದರ ಆಶಯಗಳನ್ನು ಅನುಷ್ಠಾನಕ್ಕೆ ತರುತ್ತಿದ್ದೇವೆ. ನಮ್ಮ ನಡುವೆ ಇರುವ ಅಸಮಾನತೆ ಮತ್ತು ಅನ್ಯಾಯ ನಮ್ಮ ನಿಜವಾದ ಶತ್ರುವಾಗಿದೆ. ಅನ್ಯಾಯದ ವ್ಯವಸ್ಥೆ ನಮ್ಮ ಶತ್ರುವಾಗಿದ್ದು ಇದನ್ನು ಪ್ರಶ್ನೆ ಮಾಡಬೇಕು, ಈ ವ್ಯವಸ್ಥೆಯನ್ನು ಬದಲಾಯಿಸುವ ಮೂಲಕ ಸಮಸಮಾಜವನ್ನು ಕಟ್ಟಬೇಕಾಗಿದೆ. ಸಮಾಜ ವಿಜ್ಞಾನ ಮತ್ತು ಮಾನವಿಕ ಶಿಕ್ಷಣಕ್ಕೆ ಆದ್ಯತೆ ಕೊಡುತ್ತಿಲ್ಲ ಇದರ ಬದಲಿಗೆ ವಿಜ್ಞಾನ ಮತ್ತು ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂದರು.

ಮುಖ್ಯ ಅತಿಥಿಗಳಾಗಿ ಅಕ್ಕ ಐಎಎಸ್ ಅಕಾಡೆಮಿಯ ನಿರ್ದೇಶಕ ಡಾ. ಶಿವಕುಮಾರ್ ಮಾತನಾಡಿ, ನಮ್ಮ ವ್ಯವಸ್ಥೆ ಶೂದ್ರ ಮತ್ತು ದಲಿತರನ್ನು ಸದಾ ಅನ್ ರೆಸ್ಟ್ ಮಾಡುವ ಪ್ರಕ್ರಿಯೆಯಲ್ಲಿ ಇಟ್ಟಿದೆ. ಏಕೆಂದರೆ ಅವರು ಶಾಂತಿಯುತವಾಗಿ ಬದುಕಿದರೆ ಅವರು ಯೋಚನೆ ಮಾಡುವ ಕಾರ್ಯಕ್ಕೆ ಕೈ ಹಾಕುತ್ತಾರೆ ಎಂದು. ನಮ್ಮನ್ನು ಯೋಚನೆ ಮಾಡದ ಹಾಗೆ ಸದಾ ಅನ್ ರೆಸ್ಟ್ ಆಗಿರುವಂತೆ ಪಿತೂರಿ ನಡೆಸಿ ನಮ್ಮ ಮಾನಸಿಕ ಶಾಂತತೆಯನ್ನು ಕದಡುತ್ತಿರುತ್ತಾರೆ. ಹೆಚ್ಚು ಚಿಂತನೆ ಮಾಡುವ ಮೂಲಕ, ಹೆಚ್ಚು ಓದುವ ಮೂಲಕ ನಮ್ಮ ಬೌದ್ಧಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಾಗಿದೆ ಎಂದರು. 

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಚಿಂತಕ  ಕೆ ದೊರೈರಾಜ್, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡುವ ಕಾರ್ಯ ಹೆಚ್ಚು ಶ್ಲಾಘನೀಯವಾದದ್ದು. ಇಂತಹ ಕೋಚಿಂಗ್ ಸೆಂಟರ್ ಗಳು ಪ್ರತಿ ಜಿಲ್ಲೆಯಲ್ಲಿ ಪ್ರಾರಂಭವಾಗಬೇಕು. ಅಂಬೇಡ್ಕರ್ ಕೋಚಿಂಗ್ ಸೆಂಟರ್ ಮೂಲಕ ನೂರಾರು ವಿದ್ಯಾರ್ಥಿಗಳು ಉದ್ಯೋಗ ಗಳಿಸಿರುವುದು ಒಂದು ಸಾಧನೆ ಸರಿ ಎಂದರು.

ತುಮಕೂರು ವಿಶ್ವವಿದ್ಯಾನಿಲಯದ ಪ್ರೊ. ಎನ್ಎಸ್ ಗುಂಡೂರ್ ಮಾತನಾಡಿ ಅಂಬೇಡ್ಕರ್ ಬಹುಮುಖಿಯಾಗಿ ಕಾಣುತ್ತಾರೆ. ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಎಲ್ಲಾ ರಂಗಗಳಲ್ಲಿಯೂ ಅವರದೇ ಆದ ಬೌದ್ಧಿಕ ಮುಖಗಳನ್ನು ಕಾಣಬಹುದಾಗಿದೆ. ಮಾನವಿಕ ಹಾಗೂ ಸಮಾಜ ವಿಜ್ಞಾನಗಳ ವಿದ್ಯಾರ್ಥಿಗಳಿಗೆ ಅವರ ಚಿಂತನಾ ಕ್ರಮಗಳು ಬೌದ್ಧಿಕ ಮಾದರಿಯಾಗಿವೆ. ಅವರ ಓದು, ಚಿಂತನಾಕ್ರಮ ಹಾಗೂ ಅವರ ಬರವಣಿಗೆ ಎಲ್ಲವೂ ಕೂಡ ಒಂದು ಮಾದರಿಯಾಗಿ ನಮ್ಮ ಮುಂದೆ ಇದೆ ಎಂದು ಅಭಿಪ್ರಾಯಪಟ್ಟರು. 

ಕಾರ್ಯಕ್ರಮದಲ್ಲಿ  ದಲಿತ ಸಾಹಿತ್ಯ ಪರಿಷತ್ತಿನ ಬೆಂಗಳೂರು ವಿಭಾಗೀಯ ಸಂಯೋಜಕ ಗಣಪತಿ ಗೋ ಚಲವಾದಿ, ನಗರ ಠಾಣೆಯ ವೃತ್ತ ನಿರೀಕ್ಷಕ ದಿನೇಶ್ ಕುಮಾರ್, ಅಂಬೇಡ್ಕರ್ ಕೋಚಿಂಗ್ ಸೆಂಟರ್ ಅಧ್ಯಕ್ಷ ಪಿ.ಜೆ.ಜಯಶೀಲ, ಜಿಲ್ಲಾ ಪಂಚಾಯಿತಿಯ ಮುಖ್ಯ ಲೆಕ್ಕಾಧಿಕಾರಿ ನರಸಿಂಹಮೂರ್ತಿ, ನಿವೃತ್ತ ಪ್ರಾಂಶುಪಾಲ ಮಹದೇವಪ್ಪ, ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಪವನ್ ಗಂಗಾಧರ್, ಕಂಟಲಗೆರೆ ಸಣ್ಣ ಹೊನ್ನಯ್ಯ, ಉಪನ್ಯಾಸಕ ಕೊಟ್ಟ ಶಂಕರ್ ಇದ್ದರು..

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular