ಸರ್ಕಾರಗಳು ರಾಜ್ಯದ ಅಭಿವೃದ್ಧಿಯನ್ನೇ ಮರೆತು ಬಿಟ್ಟಿದೆ. ಬೇಸಿಗೆ ಕಾಲ ಬರುವ ಮುರಚಿತವಾಗಿಯೇ ಕುಡಿಯುವ ನೀರಿಗೆ ಹಾಹಾಕಾರ ಆಗಿದೆ ಲೋಕ್ ಶಕ್ತಿ ಪಾರ್ಟಿಯ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಬಸವರಾಜಪ್ಪ ಆರೋಪಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಮೈಕ್ರೋ ಫೈನಾನ್ಸ್‌ಗಳಲ್ಲಿ ಸಾಲ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಸರ್ಕಾರ ಮಾತ್ರ ಮೌನ ವಹಿಸಿದೆ ಎಂದು ಟೀಕಿಸಿದರು.
ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ರಾಜ್ಯ ಹೆದ್ದಾರಿ, ಜಿಲ್ಲಾ ಹೆದ್ದಾರಿಗಳು ಸಂಪೂರ್ಣ ಹಾಳಾಗಿ ಹೋಗಿವೆ. ಯಾವುದೇ ಅಭಿವೃದ್ಧಿ ಕೆಲಸ ಕಾಮಗಾರಿಗಳಿಗೆ ಹಣ ನೀಡುವ ಸ್ಥಿತಿಯಲ್ಲಿ ರಾಜ್ಯ ಸರ್ಕಾರಕ್ಕೆ ಇಲ್ಲ. ಈ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ತಾನೇ ನಿರ್ಮಿಸಿಕೊಂಡಿದೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಆಡಳಿತ ನಡೆಸುವ ಪಕ್ಷದಲ್ಲೂ ಭಿನ್ನಮತ, ಅದೇ ರೀತಿ ವಿರೋಧ ಪಕ್ಷದಲ್ಲೂ ಭಿನ್ನಮತ ವಿರೋಧ ಪಕ್ಷ ಸರ್ಕಾರವನ್ನು ಕಿವಿ ಹಿಂಡುವ ಕೆಲಸ ಮಾಡುವ ಬದಲು ಮಂಡಿ ಊರಿ ಕುಳಿತಿದೆ. ಇವರಿಬ್ಬರೂ, ಒಬ್ಬರ ಮೇಲೆ ಮತ್ತೊಬ್ಬರು ಟೀಕೆ ಮಾಡುವುದರಲ್ಲಿ ಕಾಲ ಕಳೆಯುತ್ತಿದ್ದಾರೆ. ರೈತರು, ಕೂಲಿ ಕಾರ್ಮಿಕರು ಮತ್ತು ಬಡವರ ಬಗ್ಗೆ ಅವರ್ಯಾರಿಗೂ ಕಾಳಜಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಇದೇ ರೀತಿ ಕೇಂದ್ರ ಸರ್ಕಾರವು ನಮ್ಮ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ತಳೆದಿದೆ. ನಮ್ಮ ರಾಜ್ಯ ಸರ್ಕಾರದ ತೆರಿಗೆ ಹಣವನ್ನು ಸಂಗ್ರಹಿಸಿ, ನಮಗೆ ಸರಿಯಾದ ಅನುಪಾತದಲ್ಲಿ ಅನುದಾನವನ್ನು ಕೊಡುತ್ತಿಲ್ಲ. ಮುಖ್ಯವಾಗಿ ತುಮಕೂರು ದಾವಣಗೆರೆ ನೇರ ರೈಲ್ವೆ ಮಾರ್ಗದ ಕಾಮಗಾರಿ ಆಮೆ ಗತಿಯಲ್ಲಿ ನಡೆಯುತ್ತಿದೆ. ಸದರಿ ಮಾರ್ಗವು ಏಕಮುಖ ಸಂಚಾರ ರೈಲ್ವೆ ಮಾರ್ಗ ಮಾಡುತ್ತಿದ್ದಾರೆ. ಇವರ ಬದಲು ಜೋಡಿ ಮಾರ್ಗ ಮಾಡಬೇಕು. ಈ ಮೂಲಕ ಕೇಂದ್ರ ಸರ್ಕಾರಕ್ಕೆ ಆಗ್ರಪಡಿಸುತ್ತೇವೆ.
ಜೋಡಿ ಮಾರ್ಗಕ್ಕೆ ಜಮೀನುಗಳನ್ನು ಸ್ವಾಧೀನ ಪಡಿಸಿಕೊಂಡು ಜೋಡಿಮಾರ್ಗ ಮಾಡಿದರೆ ಸರ್ಕಾರಕ್ಕೆ ಹಣ ಕಡಿಮೆಯಾಗುತ್ತದೆ. ಅದು ದುಪ್ಪಟ್ಟು ಆಗುತ್ತದೆ. ಆದ್ದರಿಂದ, ಜೋಡಿ ಮಾರ್ಗಕ್ಕೆ ಬೇಕಾದ ಜಮೀನನ್ನು ಸ್ವಾಧೀನ ಪಡಿಸಿಕೊಂಡು, ಜೋಡಿ ಮಾರ್ಗ ಪಟ್ಟು ಈಗ ಏಕೆ ಮುಖ ಮಾರ್ಗ ಮಾಡಿ. ಮುಂದೆ ಮತ್ತೆ ರೈತರಿಂದ ಜಮೀನು ಸ್ವಾಧೀನ ಮಾಡಿಕೊಳ್ಳಬೇಕಾಗಿದೆ ಎಂದರು.