Thursday, March 6, 2025
Google search engine
Homeಮುಖಪುಟಕೇಂದ್ರ ಬಜೆಟ್ ಮುಖ್ಯಾಂಶಗಳು

ಕೇಂದ್ರ ಬಜೆಟ್ ಮುಖ್ಯಾಂಶಗಳು

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆ.1ರಂದು ಬಜೆಟ್ ಮಂಡಿಸಿದರು. ಅವರು ಮಂಡಿಸಿರುವ ಬಜೆಟ್ ಮುಖ್ಯಾಂಶಗಳು ಇಲ್ಲಿವೆ.

ಐಐಟಿಗಳಲ್ಲಿ ಸಂಶೋಧನೆ ಮಾಡುವವರಿಗೆ 10 ಸಾವಿರ ನೆರವು

ಖಾಸಗಿ ಸಂಸ್ಥೆಗಳ ಮೆಡಿಕಲ್ ಟೂರಿಸಂ ಯೋಜನೆಗೆ ಉತ್ತೇಜನ

36 ಜೀವ ರಕ್ಷಕ ಔಷಧಗಳ ಮೇಲಿನ ತೆರಿಗೆ ಸಂಪೂರ್ಣ ಕಡಿತ

ಮೆಡಿಕಲ್ ಕಾಲೇಜ್ ಗಳಲ್ಲಿ 10 ಸಾವಿರಾ ಹೊಸ ಸೀಟುಗಳು

ದೇಶದ 200 ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಕೇಂದ್ರಗಳ ಸ್ಥಾಪನೆ

ಕೈಗಾರಿಕಾ ಕ್ಷೇತ್ರ

ಮುಂದಿನ 5 ವರ್ಷ ಉದ್ಯಮದಲ್ಲಿ 6 ಕ್ಷೇತ್ರಗಳ ಬಗ್ಗೆ ಹೆಚ್ಚು ಆದ್ಯತೆ

ಕೃಷಿ, ಕೈಗಾರಿಕೆ, ಗಣಿಗಾರಿಕೆ, ಇಂಧನ, ಮೀನುಗಾರಿಕೆ, ಚರ್ಮೋದ್ಯಮಕ್ಕೆ ಉತ್ತೇಜನ

ಸ್ಟಾರ್ಟ್ ಅಪ್ ಗಳಿಗೆ ಸಾಲ ರೂ.10 ಕೋಟಿಯಿಂದ 20 ಕೋಟಿಗೆ ಹೆಚ್ಚಳ

ಎಸ್.ಸಿ/ಎಸ್.ಟಿ ಹಾಗೂ ಮಹಿಳೆಯರಿಗೆ ಉದ್ಯಮ ಕ್ಷೇತ್ರದಲ್ಲಿ ವಿಶೇಷ ಉತ್ತೇಜನ, ಇದರಿಂದ 22 ಲಕ್ಷ ಉದ್ದಿಮೆದಾರರಿಗೆ ಅನುಕೂಲ

ಚರ್ಮೋದ್ಯಮ ಉತ್ತೇಜಿಸಿ ರಫ್ತು ಹೆಚ್ಚಳ ಮಾಡಲು ಕ್ರಮಗಳು ಜಾರಿ

ಮೈಕ್ರೋ ಕಂಪನಿಗಳಿಗೆ ರೂ.5ಲಕ್ಷದವರೆಗೆ ಕ್ರೆಡಿಟ್ ಕಾರ್ಡ್ ಸೌಲಭ್ಯ, ಆರಂಭದಲ್ಲಿ ಇಂತಹ 10 ಲಕ್ಷ ಕ್ರೆಡಿಟ್ ಕಾರ್ಡ್ ವಿತರಣೆಗೆ ಕ್ರಮ

ಕೃಷಿ ಕ್ಷೇತ್ರ

10 ವರ್ಷಗಳ ಕಾಲ ಮಿಷನ್ ಮೋಡ್ ನಲ್ಲಿ ಯೋಜನೆ

ಹೊಸ ಕೃಷಿ ನೀತಿಯಿಂದ 1.75 ಕೋಟಿ ರೈತರಿಗೆ ಹೆಚ್ಚು ಅನುಕೂಲ

ಕಾಟನ್ ಬೆಳೆಗೆ ವಿಶೇಷ ಉತ್ತೇಜನ ನೀಡಲು ವಿಶೇಷ ಪ್ಲ್ಯಾನ್, ಕಾಟನ್ ಉದ್ಯಮಕ್ಕೆ ಅನುಕೂಲವಾಗುವಂತೆ ಬೆಳೆಗೆ ಉತ್ತೇಜನ

ಮೀನುಗಾರಿಕಾ ವಲಯಕ್ಕೆ 60 ಸಾವಿರ ಕೋಟಿ ಅನುದಾನ

ಬಿಹಾರದಲ್ಲಿ ಮಕಾನಾ ಬೋರ್ಡ್ ಹೊಸದಾಗಿ ಆರಂಭ

ಯುವಕರನ್ನು ಕೃಷಿಯತ್ತ ಸೆಳೆಯಲು ವಿಶೇಷ ಯೋಜನೆ

ಸಮಗ್ರ ಭಾಗಿದಾರಿ ಜೊತೆ ಕೃಷಿ ಉತ್ಪಾದನೆ ಹೆಚ್ಚಳಕ್ಕೆ ಆದ್ಯತೆ

ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿ 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ

ರಾಜ್ಯಗಳ ಸಹಭಾಗಿತ್ವದಲ್ಲಿ ಧನ-ಧಾನ್ಯ ಕೃಷಿ ಯೋಜನೆ

100 ಜಿಲ್ಲೆಗಳಲ್ಲಿ ಧನ-ಧಾನ್ಯ ಕೃಷಿ ಯೋಜನೆ ಜಾರಿ

ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಬೆಳೆ ಬೆಳೆಯಲು ಯೋಜನೆ

ಹೊಸ ತೆರಿಗೆ ನೀತಿ

0-4 ಲಕ್ಷದವರೆಗೆ 0%

4-8 ಲಕ್ಷದವರೆಗೆ 5%

8-10 ಲಕ್ಷದವರೆಗೆ 10%

12-16 ಲಕ್ಷದವರೆಗೆ 15%

16-20 ಲಕ್ಷದವರೆಗೆ 20%

24ಕ್ಕಿಂತ ಹೆಚ್ಚು 30%

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular