ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್ ಉಕ್ರೇನ್ ಪ್ರಜೆಗಳನ್ನು ಸ್ಥಳಾಂತರಿಸುತ್ತಿದ್ದ ಉಕ್ರೇನ್ ವಿಮಾನವನ್ನು ಅಪರಿಚಿತರ ಗುಂಪೊಂದು ಅಪಹರಣ ಮಾಡಿದೆ. ಆ ವಿಮಾನವನ್ನು ಇರಾನ್ ಕಡೆಗೆ ಮಾರ್ಗ ಬದಲಿಸಲಾಗಿದೆ ಎಂದು ಉಕ್ರೇನ್ ಸಚಿವರೊಬ್ಬರು ತಿಳಿಸಿದ್ದಾರೆ
ಕಳೆದ ಭಾನುವಾರ ಅಪರಿಚಿತರು ನಮ್ಮ ವಿಮಾನವನ್ನು ಅಪಹರಣಗೈದಿದ್ದಾರೆ. ಮಂಗಳವಾರ ಉಕ್ರೇನ್ ವಿಮಾನ ಅಕ್ಷರಶಃ ಕಳುವಾಗಿದೆ. ಅಪರಿಚಿತರ ಗುಂಪು ವಿಮಾನದಲ್ಲಿದ್ದ ಉಕ್ರೇನ್ ಪ್ರಯಾಣಿಕರೊಂದಿಗೆ ಸೇರಿಕೊಂಡು ವಿಮಾನವನ್ನು ಅಪಹರಣ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಭಾನುವಾರದಿಂದ ಈಚೆಗೆ ಆಫ್ಘಾನಿಸ್ತಾನದ ಕಾಬೂಲ್ ನಿಂದ ಉಕ್ರೇನ್ ಪ್ರಜೆಗಳನ್ನು ಸ್ಥಳಾಂತರಿಸುವ ಪ್ರಯತ್ನಗಳು ಮೂರು ಬಾರಿ ವಿಫಲವಾಗಿವೆ. ಈಗ ಉಕ್ರೇನ್ ವಿಮಾನವನ್ನೇ ಅಪಹರಿಸಿ ಆತಂಕ ಸೃಷ್ಟಿಸಿದ್ದಾರೆ.
“ಕಾಬೂಲ್ ನಿಂದ ನಮ್ಮ ಜನರನ್ನು ಕರೆತರಲು ಸಾಧ್ಯವಾಗಿಲ್ಲ. ನಮ್ಮ ಮೂರು ಪ್ರಯತ್ನಗಳು ವಿಫಲಗೊಂಡಿವೆ” ಎಂದು ಉಕ್ರೇನ್ ಉಪ ವಿದೇಶಾಂಗ ಸಚಿವ ಯವ್ ಜರಿ ಹೇಳಿಕೆಯನ್ನು ಟಿಎಎಸ್ಎಸ್ ಸುದ್ದಿ ಸಂಸ್ಥೆ ಉಲ್ಲೇಖಿಸಿರುವುದನ್ನು ಎನ್.ಡಿ.ಟಿವಿ ವರದಿ ಮಾಡಿದೆ.
ಟೆಹ್ರಾನ್ ಮತ್ತು ಕೀವ್ ಆಫ್ಘಾನಿಸ್ತಾನದಲ್ಲಿ ಯಾವುದೇ ಉಕ್ರೇನಿಯನ್ ಪ್ರಜೆಗಳನ್ನು ಸ್ಥಳಾಂತರಿಸುವ ವಿಮಾನವನ್ನು ಅಪಹರಣ ಮಾಡಿರುವುದನ್ನು ನಿರಾಕರಿಸಿವೆ ಎಂದು ವರದಿಯಾಗಿದೆ.
ಇರಾನಿನ ನಾಗರಿಕ ವಿಮಾನಯಾನ ಪ್ರಾಧಿಕಾರವು ವಿಮಾನ ಅಪಹರಣ ವರದಿ ನಿರಕಾರಿಸಿದೆ. ವಿಮಾನವೂ ಮಶಾದ್ ನಲ್ಲಿ ಇಂಧನ ತುಂಬಿಸಿಕೊಂಡು ನಂತರ ಕೀವ್ ಗೆ ಹಾರಿದೆ ಎಂದು ಹೇಳಿದೆ.
ಉಕ್ರೇನಿಯ್ ವಿದೇಶಾಂಗ ಸಚಿವಾಲಯದ ವಕ್ತಾರ ಒಲೆಗ್ ನಿಕೊಲೆಂಕೊ ‘ಕಾಬೂಲ್ ಅಥವಾ ಬೇರೆಡೆ ವಶಪಡಿಸಿಕೊಂಡ ಉಕ್ರೇನಿಯನ್ ವಿಮಾನಗಳಿಲ್ಲ. ಕೆಲವು ಮಾಧ್ಯಮಗಳಲ್ಲಿ ಬಂದಿರುವ ವರದಿಗಳು ನಿಜವಲ್ಲ’ ಎಂದು ಹೇಳಿದ್ದಾರೆ.