ಸಮರ್ಥ್ ಪೌಂಢೇಷನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕಲಾ ಕಲ್ಪಂ ತಂಡದ ವತಿಯಿಂದ ಜ.31ರಂದು ಸಂಜೆ 6ಗಂಟೆಗೆ ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ‘ಸೋರುತಿಹುದು ಸಂಬಂಧ’ ರಂಗ ಪ್ರಯೋಗ ಹಾಗೂ ಪುಸ್ತಕ ಬಿಡುಗಡೆ ಸಮಾಂಭವನ್ನು ಏರ್ಪಡಿಸಲಾಗಿದೆ.
ಪಾಲಿಕೆ ಮಾಜಿ ಸದಸ್ಯ ಹೆಚ್.ಮಲ್ಲಿಕಾರ್ಜುನಯ್ಯ ಕಾರ್ಯಕ್ರಮವನ್ನು ಉದ್ಘಾಟಿಸುವರು. ಲೇಖಕಿ ಬಾ.ಹ.ರಮಾಕುಮಾರಿ ಸಮಾರಂಭದ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಕಲೇಸಂ ತುಮಕೂರು ಜಿಲ್ಲಾಧ್ಯಕ್ಷ ಮಲ್ಲಿಕಾ ಬಸವರಾಜು ಭಾಗವಹಿಸಲಿದ್ದು, ಸಹಾಯಕ ಪ್ರಾಧ್ಯಾಪಕ ಡಾ.ನಾಗಭೂಷಣ್ ಬಗ್ಗನಡು ಅವರು ಮನಸ್ಸಿನ ನೆಲೆಗಳು ಪುಸ್ತಕವನ್ನು ಲೋಕಾರ್ಪಣೆಗೊಳಿಸುವರು.
ರಾಣಿ ಚಂದ್ರಶೇಖರ್ ಆಶಯ ನುಡಿಗಳನ್ನಾಡುವರು. ಕಲಾ ಕಲ್ಪಂ ಸಂಸ್ಥಾಪಕ ಕಾರ್ಯದರ್ಶಿ ಆರ್.ಲೋಕೇಶ್ ಭಾಗವಹಿಸುವರು.