ಲೋಕಚರಿತ ರಂಗಕೇಂದ್ರ ಚಿಕ್ಕದಾಳವಟ್ಟ ಮತ್ತು ಸಮ್ಮತ ಥಿಯೇಟರ್ ತುಮಕೂರು ಸಹಯೋಗದಲ್ಲಿ ಆಯೋಜಿಸಿದ್ದ ‘ತಿಂಡಿಗೆ ಬಂದ ತುಂಡೇರಾಯ’ ಯಶಸ್ವಿಯಾಗಿ ಪ್ರದರ್ಶನ ಕಂಡಿತು.
ಪ್ರಕಾಶ್ ರೈ ಅವರ ಕನಸಿನ ರಂಗಭೂಮಿಯ ತಂಡ ನಿರ್ದಿಗಂತ ತಂಡ ಅಭಿನಯಿಸಿದ ಬ್ರೆಕ್ಟ್‌ನ ಕನ್ನಡಾನುವಾದ ನಾಟಕ ಗುಬ್ಬಿವೀರಣ್ಣ ಕಲಾಕ್ಷೇತ್ರದಲ್ಲಿ ಪ್ರೇಕ್ಷರನ್ನು ತಟ್ಟುವಲ್ಲಿ ಯಶ್ವಿಯಾಗಿದೆ.
ನಾಟಕ ತುಮಕೂರಿನಲ್ಲಿ ಪ್ರದರ್ಶನವಾಗಲು ಕಾರಣವಾದ ಸಮ್ಮತ ತಂಡದ ಸುನೀಲ ಹಾಗೂ ಚೇತನ ದಂಪತಿ, ರವಿಶಂಕರ್, ನವೀನ್ ಪೂಜಾರಹಳ್ಳಿ, ಹರೀಶ್ ಕಮ್ಮನಕೋಟೆ, ರಾಘವೇಂದ್ರ ಹಾಗೂ ಬಳಗದವರು ನಾಟಕ ಪ್ರದರ್ಶನಕ್ಕೆ ನೆರವು ನೀಡಿದರು ಎಂದು ಅನಿಲ್ ಕುಮಾರ್ ಚಿಕ್ಕದಾಳವಟ್ಟ ತಿಳಿಸಿದರು.
ತುಮಕೂರಿನ ಎಲ್ಲಾ ರಂಗಾಸಕ್ತರ ಬೆಂಬಲ ಹೀಗೆಯೇ ಇರಲಿ ಒಂದು ಸೃಜನಶೀಲ ಸಾಂಸ್ಕೃತಿಕ ಚರ್ಚೆಗಳು ಇಂದಿನ ತುರ್ತು ಅದನ್ನು ಇನ್ನಷ್ಟು ಕಟ್ಟಲು ಎಲ್ಲರೂ ಸೇರಿ ಶ್ರಮಿಸೋಣ ಎಂದರು.