ನೋಡುಗರು ಮತ್ತು ಓದುಗರಿಂದ ಪತ್ರಿಕೆಗಳು ದೂರಲ್ಲಿವೆ. ಹೀಗಾಗಿ ರಾಜಕಾರಣಿಗಳು, ಸಿನಿಮಾ ರಂಗದವನ್ನು ಬಿಟ್ಟು ಪತ್ರಿಕೆಗಳು ಜನಸಾಮಾನ್ಯರ ಬಳಿಗೆ ಹೋಗಬೇಕಾಗಿದೆ ಎಂದು ಹಿರಿಯ ಪತ್ರಕರ್ತ ರವೀಂದ್ರ ಭಟ್ ಐನೈಕ್ಯ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ತುಮಕೂರಿನಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮ, ಓದುಗ, ನೋಡುಗರು ಹಾಗೂ ಕೇಳುಗರು ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜಕಾರಣಿಗಳಿಂದ ಪತ್ರಿಕೆಗಳು ಅಂತರವನ್ನು ಕಾಯ್ದುಕೊಂಡಾಗ ಮಾತ್ರ ಓದುಗರ ಸಂಖ್ಯೆ ಹೆಚ್ಚುತದೆ, ಪತ್ರಿಕೆಗಳು ಸಿದ್ದಾಂತ, ನಡವಳಿಕೆಗಳನ್ನು ಬದಲಾಯಿಸದೆ ಹೋದರೆ ಕಷ್ಟ ಸಾಧ, ನಾವು ವಿಶ್ವಾಸಾರ್ಹತೆ ಗಳಿಸಬೇಕು ಎಂದು ಸಲಹೆ ನೀಡಿದರು.
ಪತ್ರಕರ್ತ ಎನ್. ಚೇನ್ನೆಗೌಡ ವಿಷಯ ಮಂಡಿಸಿ ಮಾತನಾಡಿ, ಪತ್ರಿಕೋದ್ಯಮದಲ್ಲಿ ಓದುಗರ ಕೊರತೆಇದೆ, ಸೋಷಿಯಲ್ ಮೀಡಿಯಾ ಅಬ್ಬರ ಹೆಚ್ಚಿದೆ. ಅದರಲ್ಲೂ ಸವಾಲುಗಳನ್ನು ಎದುರಿಸಿ ಪತ್ರಿಕೆಗಳು ನಡೆಯುತ್ತಿವೆ. ಓದುಗರನ್ನ ಜಾಗೃತೆಗೊಳಿಸುವುದು, ಸಂಪಾದಕರು ಜವಾಬ್ದಾರಿ ಓದುಗರಲ್ಲಿ ಸುದ್ದಿಯ ಕುತೂಹಲ ಕೆರಳಿಸುವ ಹಂತದಲ್ಲಿ ವಿಫಲರಾಗುದ್ದೇವೆ. ಪ್ರಿಂಟ್ ಮೀಡಿಯಾದಲ್ಲಿ ಅಭಿವೃದ್ಧಿ ಸುದ್ದಿ ನೀಡುತ್ತಿಲ್ಲ ಹಾಗಾಗಿ ಇದಕ್ಕೆ ಪರಿಹಾರ ಮತ್ತು ಅನ್ವೇಷಣೆಯಾಗಬೇಕಿದೆ ಎಂದರು.
‘ಮಾದ್ಯಮ ಓದುಗರು ಕೇಳಗರು ಬಗ್ಗೆ ವಿಷಯ ಮಂಡನೆ ಮಾಡಿ ಮಾತನಾಡಿದ ಹಿರಿಯ ಪತ್ರಕರ್ತ ಅನಂತ್ ಚಿನಿವಾರ್.ಮಾಧ್ಯಮ ಓದುಗರನ್ನು ಕೇಳುಗರನ್ನ ಗಂಭೀರವಾಗಿ ತೆಗೆದುಕೊಳ್ಳಬೇಕು. ಅವರ ಪ್ರತಿಕ್ರಿಯೆಯನ್ನು ಪರಿಗಣಿಸಬೇಕು ಅವರ ಪ್ರಶ್ನೆ ಅಹವಾಲು, ಸ್ವೀಕರಿಸಬೇಕು. ಪತ್ರಿಕೆ ಓದುಗರನ್ನ ಜಾಣ ಜಾಣೆಯರನ್ನಾಗಿ ಕಾಣಬೇಕು, ನೋಡಗರ ಮನ ತುಂಬುವ ವಿಷಯ ವಸ್ತು ನಮ್ಮದಾಗಬೇಕು. ಪತ್ರಿಕೆಗಳಿಗೆ ಕಳಿಸುವ ಓದುಗರ, ಕೇಳುಗರ ಬರಹಗಳನ್ನು, ತಲ್ಲಣಗಳನ್ನ ಪ್ರತಿ ಪತ್ರಿಕೆಗಳನ್ನು ಅಮೂಗ್ರವಾಗಿ ಓದುವ ವರ್ಗ ಇದ್ದು, 70ರಷ್ಟು ಜನ ಡಿಜಿಟಲ್ ನೂಸ್, ನೋಡುವವರಿದ್ದಾರೆ. ಆಡಿಯನ್ಸ್ ಗಳಲ್ಲಿ ಎರಡು ವರ್ಗವಿದೆ. ಅವರಿಗೆ ತಕ್ಕಂತೆ ಮಾಧ್ಯಮ ಗಂಭೀರ ಪರಿಗಣಿಸಲಾಗುತ್ತಿಲ್ಲ, ನಮ್ಮಲ್ಲಿ ಪ್ರತಿಸ್ಪಂದನೆ ಇಲ್ಲ, ಇಂದಿನ ಪತ್ರಕರ್ತರಿಗೆ ದಪ್ಪ ಚರ್ಮ ಮನಸ್ಥಿತಿ ಯಿಂದ ಓದುಗರು, ನೋಡುಗರು ಮತ್ತು ಕೇಳುಗರನ್ನು (ಒ.ನೋ.ಕೆ) ಕಳೆದುಕೊಳ್ಳಲಾಗುತ್ತಿದೆ ಎಂದರು.
ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಎಂ.ಎಸ್. ಸ್ವಪ್ನ ಮಾತನಾಡಿದರು. ವಿಚಾರ ಗೋಷ್ಠಿಯಲ್ಲಿ ಪತ್ರಕರ್ತರಾದ ಉಗಮ ಶ್ರೀನಿವಾಸ್ ಮತ್ತು ಕುಚ್ಚಂಗಿ ಪ್ರಸನ್ನ, ತುಮಕೂರು ವಿವಿ ಸಹಾಯಕ ಪ್ರಾಧ್ಯಾಪಕ ಸಿಬಂತಿ ಪದ್ಮನಾಬ್ ಪ್ರತಿಕ್ರಿಯಿಸಿದರು. ಹಿರಿಯ ಪತ್ರಕರ್ತ ಮರಿಯಪ್ಪ, ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವನಂದ ತಗಡೂರು, ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್, ಪ್ರ.ಕಾರ್ಯದರ್ಶಿ ಟಿ.ಇ.ರಘುರಾಮ್ ಇದ್ದರು.