Thursday, January 29, 2026
Google search engine
Homeಮುಖಪುಟಪತ್ರಕರ್ತರು ಸಂವಿಧಾನದ ಆಶಯಗಳನ್ನು ಕಾಯಬೇಕು-ಸಿಎಂ ಸಿದ್ದರಾಮಯ್ಯ

ಪತ್ರಕರ್ತರು ಸಂವಿಧಾನದ ಆಶಯಗಳನ್ನು ಕಾಯಬೇಕು-ಸಿಎಂ ಸಿದ್ದರಾಮಯ್ಯ

ಮಾಧ್ಯಮ ಕ್ಷೇತ್ರ ಇಂದು ಬೃಹದಾಕಾರವಾಗಿ ಬೆಳೆದಿದ್ದು ಕ್ಷಣಕ್ಷಣದ ಸುದ್ದಿಗಳನ್ನು ಕಣ್ಮುಂದೆ ತರುವ ತಾಂತ್ರಿಕ ವ್ಯವಸ್ಥೆಗಳು ಬಂದಿರುವ ಕಾಲಘಟ್ಟದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ ಮಾಡುವ ಪತ್ರಕರ್ತರು ಪ್ರಜಾಪ್ರಭುತ್ವದ ಆಶಯಗಳು, ಸವಿಂಧಾನದ ಮೌಲ್ಯಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸುದ್ದಿಗಳನ್ನು ಬರೆಯಬೇಕು. ಸುದ್ದಿ ನೀಡುವ ಬರದಲ್ಲಿ ಸತ್ಯವನ್ನು ಮರೆಮಾಚಿ ಊಹಾಪೋಹದ ಸುಳ್ಳು ಸುದ್ದಿಗಳನ್ನು ನೀಡಬಾರದು ಎಂದು ಮುಖ್ಯಮಂತ್ರಿಸಿದ್ದರಾಮಯ್ಯ ತಿಳಿಸಿದರು.

ತುಮಕೂರು ನಗರದ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ 39ನೇ ರಾಜ್ಯಮಟ್ಟದ ಪತ್ರಿಕರ್ತರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಸತ್ಯವಾದ ಘಟನೆಯನ್ನು ಪರಿಶೀಲಿಸಿ ಪರಮರ್ಶೆ ಮಾಡಿ ಸುಳ್ಳು ಸುದ್ದಿಗಳಿಗೆ ಆಸ್ಪದ ನೀಡದೆ ಜನರಿಗೆ ನೈಜ್ಯವಾದ ವರದಿಯನ್ನು ನೀಡಬೇಕು ಎಂದು ಹೇಳಿದರು.

ಸ್ಪರ್ಧಾತ್ಮಕ ಜಗತ್ತಿನಲ್ಲಿ ಪತ್ರಕರ್ತರು ಅತಿ ಬೇಗ ಸುದ್ದಿಗಳನ್ನು ನೀಡುವತವಕದಲ್ಲಿ ಊಹಾಪೋಹದ ಸುಳ್ಳು ಸುದ್ದಿಗಳು ನೀಡುತ್ತಿದ್ದು ಇದು ಅಪಾಯಕಾರಿ ಬೆಳವಣಿಗೆಯಾಗಿದೆ. ಪತ್ರಿಕೆಗಳ ಬಗ್ಗೆ ಇರುವ ಸವಾಲುಗಳ ಬಗ್ಗೆ ಅರಿತು ಪತ್ರಕರ್ತರು ಮುನ್ನಡೆಯಬೇಕಾಗಿದೆ, ಅಂಬೇಡ್ಕರ್‌ ತಿಳಿಸಿದಂತೆ ನಮ್ಮ ದೇಶದಲ್ಲಿ ಅಸಮಾನತೆ ಇದ್ದು ಚಾತುರ್ವರ್ಣದ ಜಾತಿ ವ್ಯವಸ್ಥೆ ಇನ್ನೂ ಜೀವಂತದಲ್ಲಿದೆ. ಅಂದು ಅನೇಕ ಕೃತಿ ಕವನ ಮತ್ತು ಲೇಖನಗಳಲ್ಲಿ ಜಾತಿ ವ್ಯವಸ್ಥೆಗಳ ಬಗ್ಗೆ ಅನೇಕರು ವಿವರಣೆ ನೀಡಿದ್ದು ಇದರ ಬಗ್ಗೆ ನಾವೆಲ್ಲ ತಿಳಿದು ಕೊಳ್ಳಬೇಕು, ಈ ನಿಟ್ಟಿನಲ್ಲಿ ಪತ್ರಕರ್ತರು ಅಧ್ಯಾಯಶೀಲರಾಗಬೇಕು ಎಂದು ತಿಳಿಸಿದರು.

ಪತ್ರಕರ್ತರ ಮೂಢನಂಬಿಕೆಗಳನ್ನು ನಂಬಬಾರದು. ನಮ್ಮ ಸಮಾಜದಲ್ಲಿ ಎಂದಿಗೂ ಮೌಢ್ಯತೆ, ಕಂದಾಚಾರ ಜಾರಿಯಲ್ಲಿದ್ದು ಸಮಾಜವನ್ನುತಿದ್ದುವ ಪತ್ರಕರ್ತರು ಇಂತಹವುಗಳನ್ನು ನಂಬಬಾರದು. ಇದಕ್ಕೆ ಪೂರಕವಾದ ಸುದ್ದಿಗಳನ್ನು ಪರಿಶೀಲಿಸಬೇಕು ಎಂದರು.

ಪತ್ರಕರ್ತರಿಗೆ ವೈಚಾರಿಕತೆ ಇರಬೇಕು. ವೈಜ್ಞಾನಿಕತೆಯ ಅಧ್ಯಯನವಾಗಬೇಕು. ಪತ್ರಕರ್ತರು ಅಧ್ಯಯನಶೀಲರಾಗಿ ಸಂಶೋಧನಾತ್ಮಕವಾಗಿ ವರದಿಗಳನ್ನು ನೀಡಬೇಕು. ನಿಷ್ಟೂರವಾದ ಸುದ್ದಿಗಳನ್ನು ಪತ್ರಕರ್ತರು ಪ್ರಕಟಿಸಿಬೇಕು. ಈ ನಿಟ್ಟಿನಲ್ಲಿ ನಾನು ಕೂಡ ಇದ್ದಕ್ಕಾಗಿ ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ಗೌರವಿಸುತ್ತೇನೆ ಎಂದು ತಿಳಿಸಿದರು.

ಸಚಿವ ಡಾ ಜಿ. ಪರಮೇಶ್ವರ್‌ ಮಾತನಾಡಿ, ದೇಶದಲ್ಲಿ ಆತಂಕಕ್ಕೆ ಒಳಗಾಗಿರುವ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ವಿಚಾರಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚೆಯಾಗಲಿವೆ. ಇದರ ಬಗ್ಗೆ ಮಾಧ್ಯಮದ ವಿಶ್ಲೇಷಕರು ಮತ್ತು ಇತರರು ಇದರ ಬಗ್ಗೆ ಸಮ್ಮೇಳನದಲ್ಲಿ ಚರ್ಚೆ ನಡೆಸಬೇಕಾಗಿದೆ. ಇಂದಿನ ಮಾಧ್ಯಮ ಕವಲುದಾರಿಯಲ್ಲಿದ್ದು ಅನೇಕ ಸವಾಲುಗಳಿವೆ. ಸೋಶಿಯಲ್ ಮೀಡಿಯಾಗಳ ಬದಲಾವಣೆಗಳಿಂದ ದಿನಪತ್ರಿಕೆಗಳ ಮುಂದೆ ಅನೇಕ ಸವಾಲುಗಳಿವೆ, ಪತ್ರಕರ್ತರು ಬರೆಯುವ ಲೇಖನಗಳು ಸರ್ಕಾರ ಸಮಾಜ ಸೇರಿದಂತೆ ವ್ಯಕ್ತಿಗಳನ್ನ ಬದಲಿಸುವ ಶಕ್ತಿ ಇದೆ ಎಂದು ಹೇಳಿದರು.

ಸಹಕಾರ ಸಚಿವ ಕೆ ಎನ್‌ರಾಜಣ್ಣ ಮಾತನಾಡಿ, ಪತ್ರಕರ್ತರ ಮುಂದೆ ಅನೇಕ ಸವಾಲುಗಳಿದ್ದು ಇಂದಿಗೂ ಪತ್ರಕರ್ತರು ಕಷ್ಟಪಡುತ್ತಿದ್ದಾರೆ ಸಮಾಜಮುಖಿಯಾಗಿ ಅನೇಕ ವಿಚಾರಧಾರೆಗಳಿಂದ ಲೇಖನಗಳಿಂದ ಅನೇಕ ಜನಪರ ಕೆಲಸಗಳಾಗುತ್ತಿವೆ. ನಮ್ಮಂತ ರಾಜಕಾರಣಿಗಳು ಅದರಿಂದ ತಿಳಿಯುವಂತಾಗಿದೆ. ತಾಂತ್ರಿಕ ವ್ಯವಸ್ಥೆಗಳು ಬದಲಾಗಿರುವ ಈ ಕಾಲಘಟ್ಟದಲ್ಲಿ ಮತ್ತು ದೃಶ್ಯ ಮಾಧ್ಯಮದ ಪತ್ರಿಕೆಗಳಿಗೆ ಅನೇಕ ಸವಾಲುಗಳಿವೆ. ಈ ಪೈಪೋಟಿಯನ್ನುಎದುರಿಸುವ ಸವಾಲಿನ ಕೆಲಸ ಇಂದಿನ ಪತ್ರಕರ್ತರದಾಗಿದ್ದು ಸಮಾಜದಲ್ಲಿರುವ ಕೆಟ್ಟ ಕಸವನ್ನ ತೆಗೆಯುವ ಕೆಲಸವನ್ನು ಪತ್ರಕರ್ತರು ಮಾಡಬೇಕಾಗಿದೆ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular