Sunday, March 9, 2025
Google search engine
Homeಜಿಲ್ಲೆಸುಡುಗಾಡುಸಿದ್ದರ ಕಾಲೋನಿಯನ್ನು ಕಂದಾಯ ಗ್ರಾಮ ಮಾಡಿ

ಸುಡುಗಾಡುಸಿದ್ದರ ಕಾಲೋನಿಯನ್ನು ಕಂದಾಯ ಗ್ರಾಮ ಮಾಡಿ

ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕು ಹುಲಿಯೂರು ದುರ್ಗ ಹೋಬಳಿ ಶಿವರಾಮಪುರ ಗ್ರಾಮದಲ್ಲಿ ಸುಡುಗಾಡು ಸಿದ್ದ ಅಲೆಮಾರಿ ಸಮುದಾಯದವರು  150 ವರ್ಷಗಳಿಂದ ಇಲ್ಲಿ ಶಾಶ್ವತವಾಗಿ ನೆಲೆಗೊಂಡಿದ್ದಾರೆ. ಹೀಗಾಗಿ ಸುಡುಗಾಡು ಸಿದ್ದರ ಕಾಲೋನಿಯನ್ನು ಕಂದಾಯ ಗ್ರಾಮವನ್ನಾಗಿ ಮಾಡುವಂತೆ ಗ್ರಾಮಸ್ಥರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಇವರು ವಾಸಿಸುವ ಜಾಗವನ್ನು ಸರ್ಕಾರ ಅಧಿಕೃತವಾಗಿ ದಾಖಲೆ ಮಾಡಿರುವುದಿಲ್ಲ.  ಇವತ್ತಿಗೂ ಮಜರೆ ಗ್ರಾಮವಾಗಿದ್ದು ಬಂಡಳ್ಳಿಯೇ ದಾಖಲೆಯಾಗಿರುತ್ತದೆ.  ಕರ್ನಾಟಕ ಸರ್ಕಾರ ದಾಖಲೆಗಳಿಲ್ಲದ  ಹಟ್ಟಿ, ಹಾಡಿ, ಕಾಲೋನಿ ಮುಂತಾದ ಜನವಸತಿ ಪ್ರದೇಶಗಳನ್ನು  ಕಂದಾಯಗ್ರಾಮ ಮಾಡಬೇಕೆಂದು 2018 ರಲ್ಲಿಯೇ ಆದೇಶ ಮಾಡಿದ್ದರೂ ನಮ್ಮ ಗ್ರಾಮವನ್ನು ಕಂದಾಯ ಗ್ರಾಮ ಮಾಡಿಲ್ಲ ಎಂದು ಪ್ರತಿಭಟನಾಕಾರರು ಹೇಳಿದರು.

03/09/2022ರಲ್ಲಿ  ಕಂದಾಯಗ್ರಾಮವನ್ನಾಗಿ ಮಾಡಬೇಕೆಂದು ತಹಶೀಲ್ದಾರ್ ಅವರಿಗೆ ಲಿಖಿತ ಮನವಿ ಕೊಟ್ಟರು ಪ್ರಯೋಜವಾಗಿಲ್ಲ  ಆದ್ದರಿಂದ ಸರ್ಕಾರದ ಮಾರ್ಗಸೂಚಿ ಅನ್ವಯ ಶಿವರಾಮಪುರ ಗ್ರಾಮವನ್ನು ಕಂದಾಯ ಗ್ರಾಮ ಮಾಡಬೇಕೆಂದು ಸಾಮಾಜಿಕ ಕಾರ್ಯಕರ್ತ ಜಿ.ಕೆ. ನಾಗಣ್ಣ ಒತ್ತಾಯಿಸಿದರು. ಕುಣಿಗಲ್ ತಹಶೀಲ್ದಾರ್ ಅವರಿಗೆ ಮನವಿ ಮಾಡಿದರು 

ಕರ್ನಾಟಕ ಸರ್ಕಾರ ದಾಖಲೆಗಳಿಲ್ಲದ ಆಧಿವಾಸಿ, ಅಲೆಮಾರಿ ಮತ್ತು ಬುಡಕಟ್ಟು ಸಮುದಾಯದವರು ವಾಸಿಸುವ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮ ಮಾಡಿ ಎಂದು ಆದೇಶ ಮಾಡಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ  ಅರ್ಹತೆ ಇರುವ ಗ್ರಾಮಗಳನ್ನು ಗುರುತಿಸಿ ಕಂದಾಯ ಗ್ರಾಮ ಮಾಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಖಂಡನೀಯ ಎಂದರು.

ತಾಲ್ಲೂಕು ಆಡಳಿತ ಕುಣಿಗಲ್ ತಾಲ್ಲೂಕಿನ ಅರ್ಹ  ಜನವಸತಿ ಮಜರೆ ಗ್ರಾಮಗಳನ್ನು  ಕಂದಾಯ ಗ್ರಾಮ ಮಾಡಲು ಕ್ರಮ ಕೈಗೊಳ್ಳಬೇಕು  ಇದೇ ನಿರ್ಲಕ್ಷ್ಯ ಧೋರಣೆ ಮುಂದುವರೆದರೆ ತಾಲ್ಲೂಕಿನ ಅಲೆಮಾರಿ, ಆದಿವಾಸಿ ಮತ್ತು ಬುಡಕಟ್ಟು ಜನಾಂಗದವರನ್ನು ಸಂಘಟಿಸಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಶಿವರಾಮ ಪುರ ಗ್ರಾಮಾದ ಮಾಜಿ.ಗ್ರಾ. ಪಂ ಅಧ್ಯಕ್ಷ ಕೃಷ್ಣಪ್ಪ, ರಘು, ಎಸ್.ಟಿ, ಎಸ್.ಸಿ ಎಸ್. ಟಿ  ರಘು  ಬೋರಯ್ಯ, ಎಸ್.ವಿ ನರಸಿಹಯ್ಯ, ಎಸ್.ಎಂ ಕುಮಾರ್, ರವಿ, ವೆಂಕಟೇಶ್, ವಿನಯ್, ರಾಘವೇಂದ್ರ ಗಂಗಾ ಎಸ್.ವೈ  ಜೈ ಕುಮಾರ್, ಸತೀಶ, ಮುಂತಾದವರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular