Saturday, January 11, 2025
Google search engine
Homeಜಿಲ್ಲೆತುಮುಲ್ ಚುನಾವಣಾ ಫಲಿತಾಂಶ ಪ್ರಕಟ-ಯಾರ್ಯಾರು ಗೆದ್ದಿದ್ದಾರೆ ನೋಡಿ

ತುಮುಲ್ ಚುನಾವಣಾ ಫಲಿತಾಂಶ ಪ್ರಕಟ-ಯಾರ್ಯಾರು ಗೆದ್ದಿದ್ದಾರೆ ನೋಡಿ

ತುಮಕೂರು ಜಿಲ್ಲಾ ಹಾಲು ಉತ್ಪಾದಕರ ಸಂಘಕ್ಕೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಒಟ್ಟು 10 ಮಂದಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ತುಮಕೂರು ತಾಲ್ಲೂಕು ಮತಕ್ಷೇತ್ರಕ್ಕೆ ಎಚ್.ಎಂ.ನಂಜೇಗೌಡ, ಮತ್ತು ಹೆಚ್.ಕೆ.ರೇಣುಕಾಪ್ರಸಾದ್ ಸ್ಪರ್ಧಿಸಿದ್ದರು. ಇವರ ಪೈಕಿ ಎಚ್ಎಂ. ನಂಜೇಗೌಡ 83 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.

ಗುಬ್ಬಿ ಮತಕ್ಷೇತ್ರದಿಂದ ಚಂದ್ರಶೇಖರ್ ಜಿ ಮತ್ತು ಭಾರತೀದೇವಿ ಕೆ.ಪಿ. ಸ್ಪರ್ಧಿಸಿದ್ದರು. ಭಾರತೀದೇವಿ 68 ಮತಗಳನ್ನು ವಿಜಯಶಾಲಿಯಾಗಿದ್ದಾರೆ. ಪ್ರತಿಸ್ಪರ್ಧಿ ಚಂದ್ರಶೇಖರ್ 52 ಮತಗಳನ್ನು ಪಡೆದು ಸೋತಿದ್ದಾರೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನಿಂದ ಎಸ್.ರಾಜಶೇಖರ್ ಮತ್ತು ಬಿ.ಎನ್.ಶಿವಪ್ರಕಾಶ್ ಸ್ಪರ್ಧಿಸಿದ್ದು, ಬಿ.ಎನ್.ಶಿವಪ್ರಕಾಶ್ ಜಯ ಗಳಿಸಿದ್ದಾರೆ.

ತಿಪಟೂರು ಕ್ಷೇತ್ರದಿಂದ ತ್ರಿಯಂಬಕ ಮತ್ತು ಎಂ.ಕೆ.ಪ್ರಕಾಶ್ ಸ್ಪರ್ಧಿಸಿದ್ದು ಎಂ.ಕೆ.ಪ್ರಕಾಶ್ 105 ಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದಾರೆ.

ತುರುವೇಕೆರೆ ತಾಲೂಕು ಮತಕ್ಷೇತ್ರದಿಂದ ಸ್ಪರ್ಧಿಸಿದ್ದ ಪಿ.ಟಿ.ಗಂಗಾಧರಯ್ಯ ಮತ್ತು ಸಿ.ವಿ.ಮಹಲಿಂಗಯ್ಯ ಪೈಕಿ ಸಿ.ವಿ.ಮಹಲಿಂಗಯ್ಯ 85 ಮತಗಳನ್ನು ಗಳಿಸಿ ಆಯ್ಕೆಯಾಗಿದ್ದಾರೆ. ಇವರ ಪ್ರತಿಸ್ಪರ್ಧಿ ಕೇವಲ 34 ಮತ ಪಡೆದು ಪರಾಭವಗೊಂಡಿದ್ದಾರೆ.

ಕುಣಿಗಲ್ ಕ್ಷೇತ್ರದಿಂದ ಡಿ.ಕೃಷ್ಣಕುಮಾರ್ ಆಯ್ಕೆಯಾಗಿದ್ದರೆ, ಇವರ ಪ್ರತಿಸ್ಪರ್ಧಿ ಕೆ.ಎಂ.ಮಾಸ್ತಿಗೌಡ ಸೋಲನ್ನು ಕಂಡಿದ್ದಾರೆ.

ಮಧುಗಿರಿ ಕ್ಷೇತ್ರದಿಂದ ಬಿ.ನಾಗೇಶ್ ಬಾಬು ಅವರು 61 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಕೊರಟಗೆರೆ ಕ್ಷೇತ್ರದಿಂದ ಸಿದ್ದಗಂಗಯ್ಯ ಪಿ.ಜಯಶಾಲಿಯಾಗಿದ್ದಾರೆ.

ಸಿರಾ ತಾಲ್ಲೂಕು ಕ್ಷೇತ್ರದಿಂದ ಎಸ್.ಆರ್.ಗೌಡ ಆಯ್ಕೆಯಾಗಿದ್ದರೆ, ಪಾವಗಡದಿಂದ ಚಂದ್ರಶೇಖರ ರೆಡ್ಡಿ ಆಯ್ಕೆಯಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular