Thursday, January 29, 2026
Google search engine
Homeಮುಖಪುಟಪಾವಗಡ-ಮೇಕೆ ಮೇಯಿಸುತ್ತಿದ್ದ ಗ್ರಾಮ ಪಂಚಾಯ್ತಿಯ ಮಾಜಿ ಉಪಾಧ್ಯಕ್ಷನ ಹತ್ಯೆ

ಪಾವಗಡ-ಮೇಕೆ ಮೇಯಿಸುತ್ತಿದ್ದ ಗ್ರಾಮ ಪಂಚಾಯ್ತಿಯ ಮಾಜಿ ಉಪಾಧ್ಯಕ್ಷನ ಹತ್ಯೆ

ಬೆಟ್ಟದ ತಪ್ಪಲಿನಲ್ಲಿ ಮೇಕೆ ಮೇಯಿಸಲು ಹೋದ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿ ಮೇಕೆಗಳನ್ನು ಹೊಡೆದುಕೊಂಡು ಹೋಗಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ದೇವಲಕೆರೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಕೊಲೆಯಾದ ವ್ಯಕ್ತಿಯನ್ನು ತಾಲೂಕಿನ ದೇವಲಕೆರೆ ಗ್ರಾಮದ ಗ್ರಾಮ ಪಂಚಾಯ್ತಿಯ ಮಾಜಿ ಉಪಾಧ್ಯಕ್ಷ ನರಸಿಂಹಯ್ಯ ಎಂದು ತಿಳಿದುಬಂದಿದೆ.

ತಾಲ್ಲೂಕಿನ ಕೆ.ಟಿ. ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಲಕೆರೆ ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನರಸಿಂಹಪ್ಪ ಗ್ರಾಮದ ಹೊರವಲಯದ ಬೆಟ್ಟದಲ್ಲಿ ಮೇಕೆಗಳನ್ನು ಮೇಯಿಸುವಾಗ ಪಕ್ಕದ ಕರಿಯಮ್ಮನಪಾಳ್ಯ ಗ್ರಾಮದ ಮಣಿಕಂಠ ಎಂಬಾತ ಕುಡುಗೋಲಿನಿಂದ ನರಸಿಂಹಪ್ಪ ಅವರನ್ನು ಬರ್ಬರವಾಗಿ ಕೊಲೆಗೈದು 30 ಮೇಕೆಗಳನ್ನು ಹೊಡೆದುಕೊಂಡು ಹೋಗಿದ್ದ ಎಂದು ಹೇಳಲಾಗಿದೆ.

ನಂತರ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಕುರಿಸಂತೆಯಲ್ಲಿ ಮಾರಾಟ ಮಾಡುತ್ತಿರುವಾಗ ನರಸಿಂಹಪ್ಪನ ಮಗ ಮಂಜುನಾಥ್ ಮೇಕೆಗಳನ್ನು ಗುರುತಿಸಿ ಮಣಿಕಂಠನನ್ನು ಹಿಡಿದು ಪೊಲೀಸರಿಗೆ ಮಾಹಿತಿ ಒಪ್ಪಿಸಿದ್ದು, ಅರಸೀಕೆರೆ ಪೊಲೀಸರು, ಹಿರಿಯೂರಿನಲ್ಲಿ ಆರೋಪಿಯನ್ನು ಬಂಧಿಸಿ ಕರೆ ತಂದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.

ಅರಣ್ಯ ಪ್ರದೇಶದಲ್ಲಿ ನರಸಿಂಹಪ್ಪನನ್ನು ಕೊಲೆ ಮಾಡಿದ್ದ ಸ್ಥಳಕ್ಕೆ ಪೊಲೀಸರನ್ನು ಕರೆತಂದು ತೋರಿಸಿದ್ದಾನೆ. ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular