Thursday, March 13, 2025
Google search engine
Homeಮುಖಪುಟತುಮಕೂರಿನಲ್ಲಿ ಜ.18,19ರಂದು 39ನೇ ರಾಜ್ಯ ಪತ್ರಕರ್ತರ ಸಮ್ಮೇಳನ

ತುಮಕೂರಿನಲ್ಲಿ ಜ.18,19ರಂದು 39ನೇ ರಾಜ್ಯ ಪತ್ರಕರ್ತರ ಸಮ್ಮೇಳನ

ತುಮಕೂರು ನಗರದಲ್ಲಿ 2025ರ ಜನವರಿ 18 ಮತ್ತು 19ರಂದು ನಡೆಯುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 39ನೇ ರಾಜ್ಯ ಸಮ್ಮೇಳನ-2025ರ ಅಂಗವಾಗಿ ಪತ್ರಕರ್ತರ ರಾಜ್ಯ ಸಂಘದ ಅಧ್ಯಕ್ಷ ಶಿವಾನಂದ ತಡಗೂರು ಸಮ್ಮೇಳನದ ನೋಂದಣಿಯ ಗೂಗಲ್ ಆಪ್ ಬಿಡುಗಡೆ ಮಾಡಿದರು.

ತುಮಕೂರಿನ ಪತ್ರಿಕಾ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಗೂಗಲ್ ಆಫ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಗೂಗಲ್ ಆಪ್ ನಿಂದಾಗಿ ಸಮ್ಮೇಳನದ ನೋಂದಣಿ ಕೆಲಸ ಬಹಳ ಸುಲಭವಾಗಿದೆ. ಗೂಗಪ್ ಆಫ್‌ನಲ್ಲಿ ಬರುವ ಅರ್ಜಿಯನ್ನು ತುಂಬುವ ಮೂಲಕ ಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶವಿದೆ. ಗೂಗಲ್ ಆಪ್ ನಲ್ಲಿ ಹೆಸರು ನೋಂದಾಯಿಸುವುದರಿAದ ಸಮ್ಮೇಳನದ ಸಂದರ್ಭದಲ್ಲಿ ವಸತಿ ಪಡೆಯಲು ಅನುಕೂಲವಾಗುತ್ತದೆ ಎಂದರು.

ಕಲ್ಪತರು ನಾಡಿನಲ್ಲಿ ನಡೆಯುವ ಎರಡು ದಿನಗಳ ಸಮ್ಮೇಳನದ ಬಗ್ಗೆ ರಾಜ್ಯದ ಪತ್ರಕರ್ತರಿಗೆ ಬಹಳ ನಿರೀಕ್ಷೆಗಳಿವೆ. ಈಗಾಗಲೇ 2024ರ ನವೆಂಬರ್‌ನಲ್ಲಿ ನಡೆದ ಪತ್ರಕರ್ತರ ರಾಜ್ಯ ಕ್ರೀಡಾಕೂಟವನ್ನು ಬಹಳ ಅಚ್ಚುಕಟ್ಟಾಗಿ ನಡೆಸಿಕೊಟ್ಟ ಹಿನ್ನೆಲೆಯಲ್ಲಿ, ರಾಜ್ಯ ಸಮ್ಮೇಳನದ ಬಗ್ಗೆ ಹೆಚ್ಚಿನ ನಿರೀಕ್ಷೆಗಳಿವೆ. ಹಾಗಾಗಿ ರಾಜ್ಯ ಪದಾಧಿಕಾರಿಗಳ ಜೊತೆಗೆ, ಜಿಲ್ಲಾ ಪದಾಧಿಕಾರಿಗಳು ಸಹ ಶಕ್ತಿ ಮೀರಿ ಕೆಲಸ ಮಾಡಬೇಕಾಗಿದೆ. ಊಟ, ವಸತಿ ಜೊತೆಗೆ ಅತಿಥ್ಯ ಚನ್ನಾಗಿರಬೇಕು. ಈಗಾಗಲೇ ಒಂದು ಹಂತದ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಸಮ್ಮೇಳನಕ್ಕೆ ಕೆಲವೇ ದಿನಗಳು ಬಾಕಿ ಇರುವ ಕಾರಣ ಸಮರೋಪಾದಿಯಲ್ಲಿ ಕೆಲಸ ಮಾಡುವಂತೆ ಶಿವಾನಂದ ತಗಡೂರು ಮನವಿ ಮಾಡಿದರು.

ಇದುವರೆಗೂ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಆಗಿರುವ ಸಿದ್ದತೆಗಳ ಬಗ್ಗೆ ಕೆ.ಯು.ಡಬ್ಲುಯುಜೆ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್, ಜಾಹೀರಾತುಗಳ ಕುರಿತು ಪ್ರಧಾನ ಕಾರ್ಯದರ್ಶಿ ಟಿ.ಇ.ರಘುರಾಮ್, ಊಟೋಪಚಾರದ ಕುರಿತು ರಾಷ್ಟ್ರೀಯ ಮಂಡಳಿ ಸದಸ್ಯ ಟಿ.ಎನ್.ಮಧುಕರ್, ವಸತಿ ಕುರಿತು ಸತೀಶ್ ಹಾರೋಗೆರೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತು ಹೆಚ್.ಎಸ್.ಪರಮೇಶ್, ನೊಂದಣಿ ಕುರಿತು ಸಿದ್ದಲಿಂಗಸ್ವಾಮಿ ಮಾತನಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular