ಆಫ್ಘಾನಿಸ್ತಾನವನ್ನು ಕೈವಶ ಮಾಡಿಕೊಂಡಿರುವ ತಾಲಿಬಾನೀಯರು ಮುಂದಿನ ಕೆಲ ವಾರಗಳಲ್ಲಿ ಹೊಸ ಸರ್ಕಾರ ರಚನೆಗೆ ತಯಾರಿ ನಡೆಯುತ್ತಿದೆ. ಕಾನೂನು, ಧಾರ್ಮಿಕ ಮತ್ತು ವಿದೇಶಾಂಗ ನೀತಿ ಹೇಗಿರಬೇಕೆಂಬ ಬಗ್ಗೆ ತಜ್ಞರ ಜೊತೆ ಚರ್ಚೆ ಮಾಡಲಾಗುತ್ತಿದೆ ಇಸ್ಲಾಮಿಕ ಚಳವಳಿ ವಕ್ತಾರರು ತಿಳಿಸಿದ್ದಾರೆ.
ಇಸ್ಲಾಮಿಕ್ ಚಳವಳಿಗಾರರು ಆಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆಗೆ ಸಿದ್ದತೆ ಮಾಡಿಕೊಳ್ಳುತ್ತಿರುವ ನಡುವೆಯೂ ದಾಳಿಗಳು ಮುಂದುವರಿದಿವೆ. ತನ್ನ ವಿರೋಧಿಗಳನ್ನು ಹತ್ಯೆಗೈಯುವ, ಹಿಂಸಿಸುವ ಪ್ರವೃತ್ತಿಯನ್ನು ತಾಲೀಬಾನಿಯರು ಮುಂದುವರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಆಗಸ್ಟ್ 15ರಂದು ಆಫ್ಘಾನಿಸ್ತಾವನ್ನು ತಾಲಿಬಾನ್ ವಶಪಡಿಸಿಕೊಂಡರೂ ದೇಶದಲ್ಲಿ ಅನಿಶ್ಚಿತತೆ ತಲೆದೋರಿದೆ. ಇದನ್ನು ಮನಗಂಡಿರುವ ವಿಶ್ವಸಂಸ್ಥೆಯ ಮಾನವಹಕ್ಕುಗಳ ಸಂಸ್ಥೆ “ಆ ದೇಶದಲ್ಲಿ ಶಾಂತಿ ಸ್ಥಾಪನೆಯಾಗಬೇಕು. ಸ್ಥಿರತೆ ಕಾಪಾಡಿಕೊಳ್ಳಬೇಕು. ಇದಕ್ಕಾಗಿ ಎಲ್ಲರೂ ಶ್ರಮಿಸಬೇಕು” ಎಂದು ಹೇಳಿದೆ.
ಆಫ್ಘನ್ ನಲ್ಲಿ ತಾಲಿಬಾನೀಯರ ದಾಳಿಗೆ ಸಿಕ್ಕು ಸಂತ್ರಸ್ತರಾಗಿರುವ ಜನರಿಗೆ ಮಾನವೀಯ ಅಂತಃಕರಣದ ನೆರವು ದೊರೆಯಬೇಕು. ಜನರಿಗೆ ಬೇಕಾಗಿರುವ ಅವಶ್ಯಕತೆಗಳನ್ನು ಪೂರೈಸಲು ಅಂತಾರಾಷ್ಟ್ರೀಯ ಸಮುದಾಯ ಮುಂದಾಗಬೇಕು ಎಂದು ವಿಶ್ವಸಂಸ್ಥೆ ತಿಳಿಸಿದೆ.
ತಾಲಿಬಾನ್ ವಶಕ್ಕೆ ತೆಗೆದುಕೊಂಡ ನಂತರ ಆಫ್ಘಾನಿಸ್ತಾನದಿಂದ ವೈದ್ಯರು, ಇಂಜಿನಿಯರ್ ಗಳು, ಶಿಕ್ಷಕರು, ಮಾಹಿತಿ ತಂತ್ರಜ್ಞಾನ ತಜ್ಞರು, ವಕೀಲರು, ಸರ್ಕಾರಿ ವಕೀಲರು, ಪತ್ರಕರ್ತರು, ರಾಜತಾಂತ್ರಿಕರು ಸೇರಿದಂತೆ ಹಲವರು ದೇಶವನ್ನು ತೊರೆದಿದ್ದಾರೆ ಹಮೀದ್ ಸುಜ ಎಂಬುವರು ಟ್ವೀಟ್ ಮಾಡಿ ತಿಳಿಸಿದ್ದಾರೆ.