Sunday, September 8, 2024
Google search engine
Homeಮುಖಪುಟ18 ಪಕ್ಷಗಳೊಂದಿಗೆ ಸೋನಿಯಾ ಸಭೆ: ಲೋಕಸಭಾ ಚುನಾವಣೆಗೆ ಸಾಮಾನ್ಯ ತಂತ್ರಗಾರಿಕೆಗೆ ತಯಾರಿ

18 ಪಕ್ಷಗಳೊಂದಿಗೆ ಸೋನಿಯಾ ಸಭೆ: ಲೋಕಸಭಾ ಚುನಾವಣೆಗೆ ಸಾಮಾನ್ಯ ತಂತ್ರಗಾರಿಕೆಗೆ ತಯಾರಿ

ಮುಂಬರುವ ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆ ಮತ್ತು 2024ರ ಲೋಕಸಭಾ ಚುನಾವಣೆಯಲ್ಲಿ ಆಡಳಿತ ಪಕ್ಷ ಬಿಜೆಪಿ ನೇತೃತ್ವದ ಎನ್.ಡಿ.ಎ ವಿರುದ್ಧ ಸಾಮಾನ್ಯ ತಂತ್ರಗಾರಿಕೆ ರೂಪಿಸುವ ಸಂಬಂಧ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಆಗಸ್ಟ್ 20ರಂದು 18 ಪ್ರತಿಪಕ್ಷಗಳ ಮುಖಂಡರೊಂದಿಗೆ ಆನ್ ಲೈನ್ ವರ್ಚುಯಲ್ ಸಭೆ ನಡೆಸಿದರು.

ಸಭೆಯಲ್ಲಿ 18 ಪಕ್ಷಗಳ ಮುಖಂಡರು ಭಾಗವಹಿಸಿದ್ದರು. ಅವರಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತ ಬ್ಯಾನರ್ಜಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಭಾಗವಹಿಸಿದ್ದರು ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ವರ್ಚುಯಲ್ ಸಭೆಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ “ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್ ನ ಉಭಯ ಸದನಗಳಲ್ಲಿ ಸಾರ್ವಜನಿಕ ಮಹತ್ವದ ವಿಷಯಗಳ ಚರ್ಚೆಗೆ ಅವಕಾಶ ನೀಡಲಿಲ್ಲ. ಆಡಳಿತ ಪಕ್ಷ ಅತ್ಯಂತ ದಾರ್ಷ್ಟ್ಯದಿಂದ ನಡೆದುಕೊಂಡಿತು. 22 ದಿನ ನಡೆದ ಸದನದಲ್ಲಿ ಎಲ್ಲಾ ಪ್ರತಿಪಕ್ಷಗಳು ಎರಡು ಸದನದಲ್ಲಿ ಪ್ರತಿಭಟನೆ ಮಾಡಿ ಒಗ್ಗಟ್ಟು ಪ್ರದರ್ಶಿಸಿವೆ. ಉಭಯ ಸದನಗಳ ನಾಯಕರೊಂದಿಗೆ ಪ್ರತಿನಿತ್ಯವೂ ಚರ್ಚಿಸಿ ಸಮನ್ವಯತೆ ಕಾಪಾಡಿಕೊಳ್ಳಬೇಕಿದೆ” ಎಂದು ಸಲಹೆ ನೀಡಿದರು

ಮುಂದಿನ ಲೋಕಸಭಾ ಅಧಿವೇಶನದಲ್ಲೂ ಇದೇ ರೀತಿಯ ಒಗ್ಗಟ್ಟನ್ನು ಮುಂದುವರೆಸುವ ಉದ್ದೇಶದಿಂದ ಸಂಸತ್ತಿನ ಹೊರಗೂ ರಾಜಕೀಯ ಹೋರಾಟಗಳನ್ನು ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ನಮ್ಮ ಜಾತ್ಯತೀತತೆಯನ್ನು ಸಮರ್ಥಿಸಿಕೊಳ್ಳಬೇಕು. ಪ್ರಜಾಪ್ರಭುತ್ವ, ಗಣರಾಜ್ಯದ ಮಾದರಿಗಳನ್ನು ಮುಂದುವರಿಸಬೇಕು. ನಾಳೆಗಿನ ಒಳಿತಿಗಾಗಿ ನಾವು ಬದಲಾಗಬೇಕು. ಭಾರತವನ್ನು ಉಳಿಸಬೇಕು ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ವರ್ಚುಯಲ್ ಸಭೆಯಲ್ಲಿ ಕಾಂಗ್ರೆಸ್, ಟಿಎಂಸಿ, ಎನ್.ಸಿ.ಪಿ, ಡಿಎಂಕೆ, ಶಿವಸೇನ, ಜೆಎಂಎಂ, ಸಿಪಿಐ, ಸಿಪಿ(ಐ)ಎಂ, ನ್ಯಾಷನಲ್ ಕಾನ್ಫರೆನ್ಸ್, ರಾಷ್ಟ್ರೀಯ ಜನತಾ ದಳ, ಜಾತ್ಯತೀತ ಜನತಾ ದಳ, ಪಿಡಿಪಿ, ಆರ್.ಎಸ್.ಪಿ. ಕೇರಳ ಕಾಂಗ್ರೆಸ್, ಐವಿಎಂಸಿ, ಆರ್.ಎಲ್.ಡಿ. ಯುಐಯುಪಿಎಫ್, ಲೋಕತಾಂತ್ರಿಕ ಜನತಾ ದಳದ ಮುಖಂಡರು ಭಾಗಿಯಾಗಿದ್ದರು ಎಂದು ಎ.ಎನ್.ಐ ಸುದ್ದಿ ಸಂಸ್ಥೆ ಟ್ವೀಟ್ ನಲ್ಲಿ ತಿಳಿಸಿದೆ.

ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಶರದ್ ಪವಾರ್, ಆರ್.ಎಲ್.ಡಿ. ಮುಖ್ಯಸ್ಥ ಶರದ್ ಯಾದವ್, ಸಿಪಿಎಂ ನಾಯಕ ಸೀತಾರಾಮ್ ಯೆಚೂರಿ ಪಾಲ್ಗೊಂಡಿದ್ದರು. ಸಮಾಜವಾದಿ ಪಕ್ಷದಿಂದ ಮುಖಂಡರು ಸಭೆಗೆ ಗೈರುಹಾಜರಾಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular