Wednesday, December 18, 2024
Google search engine
Homeಮುಖಪುಟಶಿಕ್ಷಕರ ಒತ್ತಡ ಇಳಿಸಿ-ಜಿಪಂ ಸಿಇಒಗೆ ಮನವಿ

ಶಿಕ್ಷಕರ ಒತ್ತಡ ಇಳಿಸಿ-ಜಿಪಂ ಸಿಇಒಗೆ ಮನವಿ

ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಜಿ.ಪಂ. ಸಿಇಒ ಜಿ.ಪ್ರಭು, ಡಿಡಿಪಿಐ ಎಚ್.ಕೆ. ಮನಮೋಹನ್ ಹಾಗೂ ಡಯಟ್ ಪ್ರಾಂಶುಪಾಲ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್. ಪರಶಿವಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಅಧಿಕಾರಿಗಳಿಗೆ ಶಿಕ್ಷಕರ ಸಮಸ್ಯೆ ಬಗೆಹರಿಸುವಂತೆ ಮನವಿ ಸಲ್ಲಿಸಿ ಕೋರಲಾಯಿತು.

ಶಾಲಾ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ ಪೂರೈಕೆಯ ವಿತರಣೆಯಲ್ಲಿ ಆಗುತ್ತಿರುವ ತಾಂತ್ರಿಕ ಸಮಸ್ಯೆಗಳು ಕಾರ್ಯ ಒತ್ತಡದ ಬಗ್ಗೆ ಗಮನಹರಿಸಬೇಕು. ಶಿಕ್ಷಕರಿಗೆ ನೀಡಲಾಗುತ್ತಿರುವ ತರಬೇತಿಯ ಅವಧಿಯನ್ನು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ಸಮಯ ನಿಗದಿಪಡಿಸಬೇಕು ಎಂದು ಮನವಿ ಮಾಡಿದರು.

ತರಬೇತಿ ಅವಧಿಯಲ್ಲಿ ವ್ಯವಸ್ಥಿತವಾಗಿ ಮಧ್ಯಾಹ್ನದ ಊಟ ಹಾಗೂ ಇನ್ನಿತರೆ ವ್ಯವಸ್ಥೆ ಮಾಡಬೇಕು. ಜಿಲ್ಲಾ ಹಂತದಲ್ಲಿ ನಡೆಯುವ ತರಬೇತಿಗೆ ತಿಪಟೂರು, ಚಿಕ್ಕನಾಯಕನಹಳ್ಳಿ ತುರುವೇಕೆರೆಯಿಂದ ಆಗಮಿಸುವ ಶಿಕ್ಷಕರು ನಿಗದಿತ ಸಮಯದಲ್ಲಿ ಹಾಜರಾಗಲು ಆಗುತ್ತಿರುವ ತೊಂದರೆಗಳನ್ನು ಗಮನಿಸಿ ಮೂರು ತಾಲ್ಲೂಕು ಶಿಕ್ಷಕರಿಗೆ ಅನುಕೂಲವಾಗುವಂತಹ ಕೇಂದ್ರ ಸ್ಥಾನವನ್ನು ಗುರುತಿಸಬೇಕು. ಶಿಕ್ಷಕರಿಗೆ ಬೋಧನೇತರ ಕಾರ್ಯಗಳ ಒತ್ತಡವನ್ನು ಕಡಿಮೆ ಮಾಡಬೇಕು ಎಂದು ಶಿಕ್ಷಕರ ಸಂಘದ ಪದಾಧಿಕಾರಿಗಳು ಮನವಿ ಮಾಡಿದರು.

ಸಹ ಶಿಕ್ಷಕರಿಗೆ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವುದು ಸೇರಿದಂತೆ ಇತರೆ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚಿಸಿ ಬಗೆಹರಿಸುವಂತೆ ಮನವಿ ನೀಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಆರ್. ಪರಶಿವಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಆರ್. ಜಯರಾಂ, ಜಿಲ್ಲಾ ಖಜಾಂಚಿ ಷಣ್ಮುಖಪ್ಪ, ಜಿಲ್ಲಾ ಉಪಾಧ್ಯಕ್ಷ ಕೆ.ಜಿ. ಕಾಳೇಗೌಡ, ಜಿಲ್ಲಾ ಸಹಕಾರ್ಯದರ್ಶಿ ದಿನೇಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಯಲಕ್ಷ್ಮಮ್ಮ, ತುಮಕೂರು ತಾಲೂಕು ಅಧ್ಯಕ್ಷ ತಿಮ್ಮೇಗೌಡ, ಗುಬ್ಬಿ ತಾಲೂಕು ಅಧ್ಯಕ್ಷ ಎನ್.ಟಿ. ಪ್ರಕಾಶ್, ಗುಬ್ಬಿ ತಾಲೂಕು ಪ್ರಧಾನ ಕಾರ್ಯದರ್ಶಿ ಕುಮಾರ್, ತಿಪಟೂರು ಪ್ರಧಾನ ಕಾರ್ಯದರ್ಶಿ ಟಿ.ಕೆ. ಪಟ್ಟಾಭಿರಾಮು, ತುರುವೇಕೆರೆ ತಾಲೂಕು ಪ್ರಧಾನ ಕಾರ್ಯದರ್ಶಿ ಭಾರತಿ, ತುಮಕೂರು ಪ್ರಧಾನ ಕಾರ್ಯದರ್ಶಿ ಮಹದೇವಯ್ಯ, ರಾಜ್ಯ ಸಹಕಾರ್ಯದರ್ಶಿ ರಾಜಶೇಖರ್ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular