Wednesday, December 18, 2024
Google search engine
Homeಇತರೆಸೋಡಿಯಂ ಬಾಂಬ್ ಸ್ಪೋಟ ಪ್ರಕರಣ-ಡಿ.26ರವರೆಗೆ ಡ್ರೋನ್ ಪ್ರತಾಪ್ ಗೆ ನ್ಯಾಯಾಂಗ ಬಂಧನ

ಸೋಡಿಯಂ ಬಾಂಬ್ ಸ್ಪೋಟ ಪ್ರಕರಣ-ಡಿ.26ರವರೆಗೆ ಡ್ರೋನ್ ಪ್ರತಾಪ್ ಗೆ ನ್ಯಾಯಾಂಗ ಬಂಧನ

ರೈತರೊಬ್ಬ ಜಮೀನಿನಲ್ಲಿದ್ದ ಕೃಷಿ ಹೊಂಡದಲ್ಲಿ ಬಾಂಬ್ ಬ್ಲಾಸ್ಟ್ ಮಾಡಿದ್ದ ಡ್ರೋಣ್ ಪ್ರತಾಪ್ ನನ್ನು ಇಂದು ಮಧುಗಿರಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಡಿ.26ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಹಿನ್ನೆಲೆ: ಮಧುಗಿರಿ ತಾಲ್ಲೂಕಿನ ಇಟಕದಿಬ್ಬನಹಳ್ಳಿ ಹೋಬಳಿಯ ಜನಕಲೋಟಿ ಗ್ರಾಮದ ರೈತರೊಬ್ಬರ ಜಮೀನಿನಲ್ಲಿದ್ದ ಕೃಷಿ ಹೊಂಡದಲ್ಲಿ ಡ್ರೋನ್ ಪ್ರತಾಪ್ ಇತ್ತೀಚೆಗೆ ಪ್ರಯೋಗಾರ್ಥವಾಗಿ ಸೋಡಿಯಂ ಬಳಸಿ ಬಾಂಬ್ ಸ್ಪೋಟಿಸಿ ಅದನ್ನು ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ್ದ.

ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಇದನ್ನು ಆದರಿಸಿ ಎಫ್ಐಆರ್ ದಾಖಲಿಸಿಕೊಂಡಿದ್ದ ಮಿಡಿಗೇಶಿ ಪೊಲೀಸರು ಡ್ರೋನ್ ಪ್ರತಾಪ್ ನನ್ನು ಬೆಂಗಳೂರಿನಲ್ಲಿ ಬಂಧಿಸಿದ್ದರು.

ಸೋಡಿಯಂ ಬಾಂಬ್ ಸ್ಪೋಟಿಸಿ ಕೂಡಲೇ ಡ್ರೋನ್ ಪ್ರತಾನ್ ಕುಪ್ಪಳಿಸಿರುವ ದೃಶ್ಯ ವಿಡಿಯೋ ಬಾರಿ ಸದ್ದು ಮಾಡಿತ್ತು. ಈ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಪೊಲೀಸರು ಕೇಸು ದಾಖಲಿಸಿಕೊಂಡು ಪ್ರತಾಪ್ ನನ್ನು ಬೆಂಗಳೂರಿನಲ್ಲಿ ಬಂಧಿಸಿದ್ದರು. ಡಿ.16ರಂದು ಸೋಮವಾರ ಮಧುಗಿರಿ ನ್ಯಾಯಾಲಯಕ್ಕೆ ಡ್ರೋನ್ ಪ್ರತಾಪ್ ನನ್ನು ಹಾಜರುಪಡಿಸಿದ್ದು ನ್ಯಾಯಾಲಯ ಆತನನ್ನು ಡಿ.26ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular