ರೈತರ ಜಮೀನಿನಲ್ಲಿದ್ದ ಕೃಷಿ ಹೊಂಡದಲ್ಲಿ ಬಾಂಬ್ ಬ್ಲಾಸ್ಟ್ ಮಾಡಿದ್ದ ಡ್ರೋಣ್ ಪ್ರತಾಪ್ ನನ್ನು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಪೊಲೀಸರು ಬಂಧಿಸಿದ್ದಾರೆ.
ಮಧುಗಿರಿ ತಾಲ್ಲೂಕಿನ ಇಟಕದಿಬ್ಬನಹಳ್ಳಿ ಹೋಬಳಿಯ ಜನಕಲೋಟಿ ಗ್ರಾಮದ ರೈತರ ಜಮೀನಿನಲ್ಲಿದ್ದ ಕೃಷಿ ಹೊಂಡದಲ್ಲಿ ಇತ್ತೀಚೆಗೆ ಸೋಡಿಯಂ ಬಳಸಿ ಬಾಂಬ್ ಸ್ಪೋಟಿಸಿ ಅದನ್ನು ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ್ದ.
ಈ ವಿಡಿಯೋ ಆದರಿಸಿ ಎಫ್ಐಆರ್ ದಾಖಲಿಸಿಕೊಂಡಿದ್ದ ಮಿಡಿಗೇಶಿ ಪೊಲೀಸರು ಡ್ರೋನ್ ಪ್ರತಾಪ್ ನನ್ನು ಬೆಂಗಳೂರಿನಲ್ಲಿ ಬಂಧಿಸಿದ್ದರು. ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರಿಂದ ಮೂರು ದಿನ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಡ್ರೋನ್ ಪ್ರತಾಪ್ ವ್ಯಕ್ತಿಯು ಒಂದು ಕೃಷಿ ಹೊಂಡದಲ್ಲಿ ಯಾವುದೋ ಒಂದು ಸ್ಪೋಟಕ ವಸ್ತುವನ್ನು ಕೃಷಿ ಹೊಂಡದ ನೀರಿನಲ್ಲಿ ಎಸೆದು ನೀರಿನಲ್ಲಿ ಸ್ಪೋಟಕವು ಭಯಾನಕವಾಗಿ ಜನರು ಭಯ ಬೀಳುವಂತೆ ಸಿಡಿದು ನೀರು ಮೇಲೆ ರಭಸವಾಗಿ ಚಿಮ್ಮುತ್ತಿದ್ದು ಸ್ಪೋಟಕ ವಸ್ತುಗಳು ಸಿಡಿಸಿದ ಸ್ಥಳದ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿ ಸ್ಫೋಟಕ ವಸ್ತು ಸಿಡಿಸಿದ ಸ್ಥಳ ಮಧುಗಿರಿ ತಾಲೂಕು ಐ.ಡಿ.ಹಳ್ಳಿ ಹೋಬಳಿ ಜನಕಲೋಟಿ ಬಳಿ ಇರುವ ಶ್ರೀ ರಾಯರ ಬೃಂದಾವನ ಫಾರ್ಮ್ಸ್ ನ ಸರ್ವೇ ನಂ.66/3ರ ಜಮೀನಿನಲ್ಲಿರುವ ಕೃಷಿ ಹೊಂಡದಲ್ಲಿ ಸ್ಪೋಟಕ ವಸ್ತುಗಳನ್ನು ಸಿಡಿಸಿದ ಸ್ಥಳವಾಗಿದ್ದು, ಈ ಕೃತ್ಯ ನಡೆದ ಬಗ್ಗೆ ಠಾಣಾ ಸಿಬ್ಬಂದಿ ಗೋಪಾಲಕೃಷ್ಣ ಅವರಿಂದ ವರದಿ ಪಡೆದು ಠಾಣಾ ಮೊ.ನಂ.114/2024 ಕಲಂ 288 ಬಿಎನ್.ಎಸ್ ಮತ್ತು ಕಲಂ 03 ಸ್ಪೋಟಕ ವಸ್ತುಗಳ ಅಧಿನಿಯಮ ಕಾಯ್ದೆ 1908 ರೀತ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.
ಪ್ರಕರಣದ ಆರೋಪಿ ಪ್ರತಾಪ್ ಎನ್.ಎಸ್ ಬಿನ್ ಮರಿಮಾದಯ್ಯ ಎನ್.ಎಂ. ನೆಟ್ಕಲ್ ಗ್ರಾಮ ಮಳವಳ್ಳಿ ತಾಲ್ಲೂಕು, ಮಂಡ್ಯ ಜಿಲ್ಲೆ ಈತನನ್ನು ದಸ್ತಗಿರಿ ಮಾಡಿರುತ್ತದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.


