ಬೆಂಗಳೂರಿನಲ್ಲಿ ರೋಲರ್ ಸ್ಕೇಟಿಂಗ್ ಫೇಡರೇಷನ್ ಅಫ್ ಇಂಡಿಯಾ ಅಡಿಯಲ್ಲಿ 2024ರ ಡಿಸೆಂಬರ್ 5 ರಿಂದ 15ರವರೆಗೆ ನಡೆಯುತ್ತಿರುವ 62ನೇ ನ್ಯಾಷನಲ್ ರೊಲರ್ ಸ್ಕೇಟಿಂಗ್ ಚಾಂಪಿಯನ್ ಶಿಫ್-2024ರಲ್ಲಿ ತುಮಕೂರಿನ ಪ್ರತಿಭೆ ಜಯತೀಷ್ಣ.ಟಿ.ಜಿ.ಅವರು ಕರ್ನಾಟಕವನ್ನು ಪ್ರತಿನಿಧಿಸಿ, ಬೆಳ್ಳಿ ಪದಕ ಪಡೆದಿದ್ದಾರೆ.
ತಾಹೇರಾ ಅವರ ಪುತ್ರಿಯಾದ ಜಯತೀಷ್ಣ.ಟಿ.ಜಿ.ಅವರು ವಿದ್ಯಾನಿಧಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿ.ಯು ವ್ಯಾಸಂಗ ಮಾಡುತ್ತಿದ್ದು ಈ ಹಿಂದೆ ಇಟಲಿಯಲ್ಲಿ ನಡೆದ ಅಂತರರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಡರ್ಬಿ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದಿದ್ದರು.