Thursday, November 21, 2024
Google search engine
Homeಮುಖಪುಟಪಂಜಾಬ್:ಪಕ್ಷ-ಸರ್ಕಾರದ ನಡುವೆ ಸಮನ್ವಯ ಸಾಧಿಸಲು ವ್ಯೂಹಾತ್ಮಕ ನೀತಿ ತಂಡ ರಚನೆ

ಪಂಜಾಬ್:ಪಕ್ಷ-ಸರ್ಕಾರದ ನಡುವೆ ಸಮನ್ವಯ ಸಾಧಿಸಲು ವ್ಯೂಹಾತ್ಮಕ ನೀತಿ ತಂಡ ರಚನೆ

ಪಕ್ಷ ಮತ್ತು ಸರ್ಕಾರ ನಡುವೆ ಸಮನ್ವಯತೆ ಸಾಧಿಸಿ ಸರ್ಕಾರದ ವಿವಿಧ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಅನುಷ್ಠಾನಕ್ಕಾಗಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ನೇತೃತ್ವದಲ್ಲಿ 10 ಮಂದಿ ಸದಸ್ಯರ ವ್ಯೂಹಾತ್ಮಕ ನೀತಿ ಸಮಿತಿಯೊಂದನ್ನು ರಚಿಸಲಾಗಿದೆ. ಪಂಜಾಬ್ ಸರ್ಕಾರದಲ್ಲಿ ಬಿಕ್ಕಟ್ಟು ಸೃಷ್ಟಿಯಾದ ಬಳಿಕ ಇದೇ ಮೊದಲ ಬಾರಿಗೆ ಸಮನ್ವಯತೆ ಸಾದಿಸಲು ತಂಡ ರಚನೆಯಾಗಿದ್ದು ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ತಂಡದಲ್ಲಿದ್ದಾರೆ.

ಮುಖ್ಯಮಂತ್ರಿ ಅಮರಿಂದರ್ ಸಿಂಗ್ ನೇತೃತ್ವದಲ್ಲಿ ಸ್ಥಳೀಯ ಸರ್ಕಾರದ ಸಚಿವ ಬ್ರಹ್ಮ್ ಮೊಹಿಂದ್ರ, ಹಣಕಾಸು ಸಚಿವ ಮನ್ ಪ್ರೀತ್ ಸಿಂಗ್ ಬಾದಲ್, ಸಾಮಾಜಿಕ ಭದ್ರತಾ ಸಚಿವ ಅರುಣ್ ಚೌಧರಿ, ಪಕ್ಷದ ಅಧ್ಯಕ್ಷ ಸಿಧು, ಪಕ್ಷದ ನಾಲ್ವರು ಕಾರ್ಯಾಧ್ಯಕ್ಷರಾದ ಕುಲ್ಜಿತ್ ಸಿಂಗ್ ನಗ್ರ, ಸುಖವಿಂದರ್ ಸಿಂಗ್ ದನ್ನೀ, ಸಂಗಾತ್ ಸಿಂಗ್ ಲಿಜಿಯ್, ಪವನ್ ಗೋಯಲ್, ಪ್ರಧಾನ ಕಾರ್ಯದರ್ಶಿ ಪರಗತ್ ಸಿಂಗ್ ಈ ತಂಡದ ಸದಸ್ಯರಾಗಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ತಿಳಿಸಿದೆ.

ಶುಕ್ರವಾರ ಮುಖ್ಯಮಂತ್ರಿಗಳು ಪಕ್ಷದ ಅಧ್ಯಕ್ಷ ನವಜೋತ್ ಸಿಂಗ್ ಸಿಧು, ನಗ್ರ, ಪರಗತ್ ಸಿಂಗ್ ಅವರನ್ನು ಕರೆಸಿಕೊಂಡು ಪಂಜಾಬ್ ಸಂಬಂಧಿ ವಿಷಯಗಳು, ಪಕ್ಷ ಮತ್ತು ಸರ್ಕಾರದ ನಡುವೆ ಸಮನ್ವಯತೆಯನ್ನು ಬಲಪಡಿಸುವ ಕುರಿತು ಚರ್ಚೆ ನಡೆಸಿದರು.

ವಾರಕ್ಕೊಂದು ಸಭೆಯನ್ನು ಇತರೆ ಸಚಿವರೊಂದಿಗೆ ಮಾಡಬೇಕು ಲಭ್ಯವಿರುವ ತಜ್ಞರನ್ನು ಸಭೆ ಆಹ್ವಾನಿಸಬೇಕು. ಪ್ರಗತಿಯಲ್ಲಿ ಕಾಮಗಾರಿಗಳ ಪರಿಶೀಲನೆ, ಚರ್ಚೆ ಮತ್ತು ಮುಂದೆ ಕೈಗೊಳ್ಳಬೇಕಾದ ಕ್ರಮಗಳು ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು ಎಂದು ಚರ್ಚಿಸಲಾಗಿದೆ.

ಪ್ರತಿದಿನವೂ ಪ್ರತಿಯೊಬ್ಬ ಸಚಿವರು ರೊಟೋಷನ್ ಆಧಾರದ ಮೇಲೆ ಪಂಜಾಬ್ ಕಾಂಗ್ರೆಸ್ ಭವನದಲ್ಲಿ ಶಾಸಕರು ಮತ್ತು ಪಕ್ಷದ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಬೇಕು. ಕ್ಷೇತ್ರಗಳ ಸಮಸ್ಯೆಗಳನ್ನು ಆಲಿಸಬೇಕು ಎಂದು ಸೂಚಿಸಲಾಗಿದೆ.

ಪ್ರತಿಯೊಬ್ಬ ಸಚಿವರು ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 11 ರಿಂದ 2 ಗಂಟೆಯವರೆಗೆ 3 ಗಂಟೆಗಳ ಕಾಲ ಕಾಂಗ್ರೆಸ ಭವನದಲ್ಲಿ ಹಾಜರಿರಬೇಕು. ಸಚಿವರು ಲಭ್ಯವಿಲ್ಲದ ಸಂದರ್ಭದಲ್ಲಿ ತಮ್ಮ ಪ್ರತಿನಿಧಿಯೊಬ್ಬರನ್ನು ನೇಮಕ ಮಾಡಿ ಸಮಸ್ಯೆಗಳನ್ನು ಕ್ಷೇತ್ರಗಳ ವಿವಿಧ ಕಾಮಗಾರಿಗಳ ಕುರಿತು ಚರ್ಚಿಸಬೇಕು ಎಂದು ತಿಳಿಸಲಾಗಿದೆ.

ಪಕ್ಷ ಮತ್ತು ಸರ್ಕಾರದ ಪ್ರಗತಿ, ಕಾರ್ಯಕ್ರಮ ಮತ್ತು ಯೋಜನೆಗಳ ಅನುಷ್ಠಾನದ ಬಗ್ಗೆ ಚರ್ಚಿಸುವುದರೊಂದಿಗೆ 2022ರಲ್ಲಿ ಬರುವ ವಿಧಾನಸಭಾ ಚುನಾವಣೆಗಳಿಗೆ ತಯಾರಿ ನಡೆಸುವಂತೆ ಸೂಚಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular