ಧಾರ್ಮಿಕ ಸ್ವಾತಂತ್ರ್ಯ (ತಿದ್ದುಪಡಿ) ಕಾಯ್ದೆ-2021ರ ಹಲವು ಸೆಕ್ಷನ್ ಗಳಿಗೆ ಗುಜರಾತ್ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಅಂತರ್ ಧರ್ಮೀಯ ವಿವಾಹಿತರು ಮತ್ತು ಅವರ ಪಕ್ಷಗಾರರಿಗೆ ಅನಗತ್ಯ ಕಿರುಕುಳ ನೀಡಬಾರದು ಎಂದು ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ವಿಕ್ರಮ್ ನಾಥ್ ಎಂದು ಅಡ್ವೋಕೇಟ್ ಜನರಲ್ ಗೆ ಸೂಚನೆ ನೀಡಿದ್ದಾರೆ.
ಗುಜರಾತ್ ಸರ್ಕಾರ ಜಾರಿಗೊಳಿಸಿರುವ ಧಾರ್ಮಿಕ ಸ್ವಾತಂತ್ರ್ಯ (ತಿದ್ದುಪಡಿ) ಕಾಯ್ದೆ-2021ನ್ನು ಪ್ರಶ್ನಿಸಿ ಎರಡು ಅರ್ಜಿಗಳು ಹೈಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದವು. ಈ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ವಿಕ್ರಮ್ ನಾಥ್ ಈ ಕಾಯ್ದೆಯ ಹಲವು ಸೆಕ್ಷನ್ ಗಳ ಕಾರ್ಯಾಚರಣೆಗೆ ಮಧ್ಯಂತರ ತಡೆ ನೀಡಿದ್ದಾರೆ. ಇದರಲ್ಲಿ ಬಲವಂತದ ಮತಾಂತರ ವಿಷಯವೂ ಸೇರಿದೆ.
ಪ್ರಾಥಮಿಕ ದಾಖಲೆಗಳನ್ನು ಸಲ್ಲಿಸಿದ ನಂತರ ಮತ್ತು ವಾದಗಳನ್ನು ಮುಂದುವರಿಸಿದ ಬಳಿಕ ಧಾರ್ಮಿಕ ಸ್ವಾತಂತ್ರ್ಯ (ತಿದ್ದುಪಡಿ) ಕಾಯ್ದೆಯ 3, 4, 4ಎ, 4ಬಿ, 4ಸಿ, 5, 6 ಮತ್ತು 6ಎ ಸೆಕ್ಷನ್ ಗಳನ್ನು ಕಾರ್ಯಾಚರಣೆಗೆ ತರುವಂತಿಲ್ಲ ಎಂದು ಹೈಕೋರ್ಟ್ ಹೇಳಿದೆ.
ವಿವಾಹವು ಎರಡು ಧರ್ಮೀಯರ ಆ ಧರ್ಮೀಯರ ಬಲವಿಲ್ಲದೆ ಅಥವಾ ಆಕರ್ಷಣೆ ಮತ್ತು ಮೋಸದ ವಿಧಾನಗಳಿಂದ ನಡೆಸಲಾಗುತ್ತದೆ ಮತ್ತು ಅಂತಹ ವಿವಾಹವನ್ನು ಕಾನೂನುಬಾಹಿರ ಮತಾಂತರದ ಉದ್ದೇಶದಿಂದ ಆದ ಮದುವೆ ಎಂದು ಕರೆಯಲು ಆಗುವುದಿಲ್ಲ ಎಂದು ಮಧ್ಯಂತರ ತಡೆ ಆದೇಶದಲ್ಲಿ ತಿಳಿಸಲಾಗಿದೆ.
ಅಡ್ವೋಕೇಟ್ ಜನರಲ್ ತ್ರಿವೇದಿ ಅವರು ಆಗಸ್ಟ್ 17ರಂದು ಅಂತರ್ ಧರ್ಮೀಐ ವಿವಾಹಗಳನ್ನು ‘ನಿಷೇಧಿಸಲಾಗಿಲ್ಲ ಎಂದು ಪ್ರಮಾಣಪತ್ರ ಸಲ್ಲಿಸಿದ್ದರು. ಆದರೂ ಮುಖ್ಯನ್ಯಾಯಮೂರ್ತಿ ನಾಥ್ ಮತ್ತು ನ್ಯಾಯಮೂರ್ತಿ ಬಿರೇನ್ ವೈಷ್ಣವ್ ಅವರ ವಿಭಾಗೀಯ ಪೀಠವು ತಿದ್ದುಪಡಿ ಮಾಡಿದ ಕಾಯ್ದೆಯ ಭಾಷೆ ಇದನ್ನು ಸ್ಪಷ್ಟಪಡಿಸುವುದಿಲ್ಲ ಎಂದು ಹೇಳಿದೆ. ಅಂತರ್ ಧರ್ಮೀಯ ವಿವಾಹಗಳ ಮೇಲೆ ನೇಣುಹಾಕಲಾಗುತ್ತಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಈ ಸಂದರ್ಭದಲ್ಲಿ ಅಡ್ವೋಕೇಟ್ ತ್ರಿವೇದಿ ನ್ಯಾಯಪೀಠಕ್ಕೆ ಮನವಿ ಮಾಡಿ ಅದು ಬಲವಂತದ ಮತಾಂತರಕ್ಕೆ ಕಾರಣವಾಗುವ ವಿವಾಹವಾಗಿದ್ದಲ್ಲಿ ಆ ಸೆಕ್ಷನ್ ಗಳ ಕಾರ್ಯಾಚರಣೆಗೆ ಅನುಮತಿ ನೀಡಬಹುದು ಎಂದು ಕೋರ್ಟ್ ಆದೇಶದಲ್ಲಿ ಸ್ಪಷ್ಟಪಡಿಸಬಹುದು ಎಂದು ಕೋರಿದರು.
ಇದಕ್ಕೆ ನ್ಯಾಯಪೀಠವು ತನ್ನ ಆದೇಶದಲ್ಲಿ ಮೂಲಭೂತವಾಗಿ ಬಲವಂತದ ಅಂಶ, ಆಕರ್ಷಣೆ ಅಥವಾ ಮೋಸದ ವಿಧಾನಗಳು ಮದುವೆಯ ನಂತರ ಧಾರ್ಮಿಕ ಮತಾಂತರದಲ್ಲಿ ಸ್ಥಾಪಿತವಾಗಿದೆ ಎಂದು ಹೇಳಿದ್ದು, ಅದನ್ನೇ ಅಪರಾಧವೆಂದು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿದೆ.